ದೇಶದ್ರೋಹದ ಕಾನೂನಿನ ಬಗ್ಗೆ ದೆಹಲಿ ಸರ್ಕಾರಕ್ಕೂ ತಿಳಿವಳಿಕೆ ಇಲ್ಲ: ಚಿದಂಬರಂ

  ನವದೆಹಲಿ, ಫೆ 29 :   ಜೆಎನ್‍ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯ ಕುಮಾರ್ ಮತ್ತು ಇತರ 9 ಮಂದಿಯ ವಿರುದ್ಧದ ವಿಚಾರಣೆಗೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸಮ್ಮತಿ ಸೂಚಿಸಿರುವ ವಿಷಯಕ್ಕೆ ಸಂಬಂಧಿಸಿ ಕಾಂಗ್ರೆಸ್ ಹಿರಿಯ ಮುಖಂಡ ಪಿ ಚಿದಂಬರಂ ಟೀಕಿಸಿದ್ದಾರೆ

  ದೇಶದ್ರೋಹದ ಕಾನೂನಿನ ಬಗ್ಗೆ ಕೇಂದ್ರ ಸರ್ಕಾರದಂತೆಯೇ ದೆಹಲಿ ಸರ್ಕಾರಕ್ಕೂ ಹೆಚ್ಚಿನ ತಿಳಿವಳಿಕೆ ಇಲ್ಲ ಎಂದು ಅವರು ಸರಣಿ ಟ್ವೀಟ್ ಮುಖೇನ ತಿಳಿಸಿದ್ದಾರೆ.

  ದೆಹಲಿ ಸರ್ಕಾರವು ಸೆಕ್ಷನ್ 124 ಎ ಮತ್ತು 120 ಬಿ ಅಡಿಯಲ್ಲಿ ಕನ್ಹಯ್ಯ ಕುಮಾರ್ ಹಾಗೂ ಇತರ 9 ಮಂದಿ ವಿರುದ್ಧ ದೇಶದ್ರೋಹ ಆರೋಪದ ವಿಚಾರಣೆ ನಡೆಸುವುದನ್ನು ಖಂಡಿಸುತ್ತೇನೆ” ಎಂದಿದ್ದಾರೆ.

  ನಾಲ್ಕು ವರ್ಷಗಳ ಹಿಂದಿನ ದೇಶದ್ರೋಹ ಪ್ರಕರಣದ ವಿಚಾರಣೆಗಾಗಿ ವಿಶೇಷ ವಿಚಾರಣೆಗಾಗಿ ದೆಹಲಿ ಸರ್ಕಾರ ಶುಕ್ರವಾರ ರಾತ್ರಿ ಗ್ರೀನ್ ಸಿಗ್ನಲ್ ನೀಡಿದೆ.