ನವದೆಹಲಿ, ಫೆ 8,ಬಿಜೆಪಿ ಸಂಸದರಾದ ಗೌತಮ್ ಗಂಭೀರ್ ಮತ್ತು ವಿಜಯ್ ಗೋಯೆಲ್ ಅವರು ದೆಹಲಿ ವಿಧಾನಸಭಾ ಚುನಾವಣೆಗಾಗಿ ಕುಟುಂಬ ಸಮೇತರಾಗಿ ಮತ ಕೇಂದ್ರಕ್ಕೆ ಬಂದು ಶನಿವಾರ ಮತ ಚಲಾಯಿಸಿದ್ದಾರೆ. ರಾಜಕಾರಣಿಯಾಗಿ ಬದಲಾದ ಕ್ರಿಕೆಟಿಗ ಗಂಬೀರ್ ಕುಟುಂಬ, ಹಾಗೂ ಬಿಜೆಪಿ ಸಂಸದ ವಿಜಯ್ ಗೋಯೆಲ್ ಮತ್ತು ಅವರ ಪತ್ನ ಒಟ್ಟಾಗಿ ಬಂದು ಮತದಾನದ ಹಕ್ಕು ಚಲಾಯಿಸಿದರು. ಬೆಳಿಗ್ಗೆ ಆರಂಭಗೊಂಡ ಮತದಾನ ಸಂಜೆ 6 ಗಂಟೆಗೆ ಮುಕ್ತಾಯವಾಗಲಿದ್ದು, ದೆಹಲಿಯ 1.47 ಕೋಟಿ ಅರ್ಹ ಮತದಾರರು 672 ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲಿದ್ದಾರೆ.