ನವದೆಹಲಿ, ಫೆ 8, ದೆಹಲಿಯಲ್ಲಿ ಒಂದೇ ಹಂತದಲ್ಲಿ ಇಂದು ನಡೆಯುತ್ತಿರುವ ವಿಧಾನಸಭಾ ಚುನಾವಣೆಯಲ್ಲಿ ಬೆಳಿಗ್ಗೆ 11 ಗಂಟೆ ವೇಳೆಗೆ ಶೇ 6.43 ರಷ್ಟು ಮತದಾನವಾಗಿದೆ. ಬಿಜೆಪಿ, ಎಎಪಿ, ಕಾಂಗ್ರೆಸ್ ಪಕ್ಷಗಳ ಅಭ್ಯರ್ಥಿಗಳು ಸೇರಿದಂತೆ ಒಟ್ಟು 672 ಅಭ್ಯರ್ಥಿಗಳು ಕಣದಲ್ಲಿದ್ದಾರೆ.ಬಿಗಿ ಭದ್ರತಾ ಏರ್ಪಾಡುಗಳ ನಡುವೆ ಬೆಳಿಗ್ಗೆ 8 ಗಂಟೆಗೆ ಮತದಾನ ಆರಂಭವಾಯಿತು.
ಉತ್ತರ ದೆಹಲಿಯ ರಿಥಾಲಾದಲ್ಲಿ ಶೇ 4, ಮುಂಡ್ಕಾ ಶೇ 4.97, ಕಿರಾರಿ ಶೇ 6.5, ಸುಲ್ತಾನಪುರ ಮಜ್ರಾ (ಎಸ್‌ಸಿ) ಶೇ16.21, ತ್ರಿನಗರದಲ್ಲಿ ಶೇ 4.54 ರಷ್ಟು ಮತದಾನವಾಗಿದೆ.ಈಶಾನ್ಯ ದೆಹಲಿಯಲ್ಲಿ, ಸೀಲಾಂಪುರ ಶೇ 4.32, ಗೋಕಲ್ಪುರ (ಎಸ್‌ಸಿ)ದಲ್ಲಿ ಶೇ 6.06 ಮತದಾನ ದಾಖಲಾಗಿದೆ. ದಕ್ಷಿಣ ದೆಹಲಿಯ ಮಾಲ್ವಿಯಾ ನಗರದಲ್ಲಿ ಶೇ 4.41 ರಷ್ಟು, ಚಟ್ಟರ್‌ಪುರದಲ್ಲಿ ಶೇ 16.01 ರಷ್ಟು ಮತದಾನ ದಾಖಲಾಗಿದೆ.
ಪೂರ್ವ ದೆಹಲಿಯಲ್ಲಿ, ತ್ರಿಲೋಕ್‌ಪುರಿ (ಎಸ್‌ಸಿ) ಶೇ14.97, ಲಕ್ಷ್ಮಿ ನಗರ ಶೇ 5.20 ರಷ್ಟು, ರಾಷ್ಟ್ರ ರಾಜಧಾನಿಯ ಪಶ್ಚಿಮ ಭಾಗದ ರಾಜೌರಿ ಪಾರ್ಕ್ ನಲ್ಲಿ ಶೇ 11.69 ಮತ್ತು ಜನಕಪುರಿಯಲ್ಲಿ ಶೇ 10.69 ದಾಖಲಾಗಿದೆ.ಕೆಲವು ತಜ್ಞರ ಪ್ರಕಾರ, ಈ ಚುನಾವಣೆಯಲ್ಲಿ ಮತದಾನದ ಪ್ರಮಾಣ ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತಿದೆ. ಏಕೆಂದರೆ ಈ ಚುನಾವಣೆಯು ಯಾವುದೇ ಅಭ್ಯರ್ಥಿಯ ರಾಜಕೀಯ ಭವಿಷ್ಯವನ್ನು ಬದಲಾಯಿಸಬಹುದು.ಮತದಾನ ಸಂಜೆ 6 ಗಂಟೆಗೆ ಮುಕ್ತಾಯಗೊಳ್ಳಲಿದ್ದು, ಫೆ 11 ರಂದು ಫಲಿತಾಂಶ ಪ್ರಕಟವಾಗಲಿದೆ.