ಬಾಗಲಕೋಟೆ: ಸರೈಲ್ವೆ ಸಚಿವರಾದ ಸುರೇಶ ಅಂಗಡಿಯವರ ಇತ್ತೀಚಿನ ಭೇಟಿ ಸಂದರ್ಭದಲ್ಲಿ ಹೋರಾಟ ಸಮಿತಿಯ ಮನವಿಯನ್ನು ಸ್ವೀಕರಿಸಿ ಮಹಾಪ್ರಬಂಧಕ ಅಜಯಕುಮಾರ ಸಿಂಗ, ವಿಭಾಗೀಯ ಪ್ರಬಂಧಕರಾದ ರಾಜೇಶ ಮೋಹನ್ ಅವರಿಗೆ ಹೋರಾಟ ಸಮಿತಿಯ ಮನವಿಯನ್ನು ಆಲಿಸಿ ಅಂತ ಹೇಳಿದ ಪ್ರಯುಕ್ತ ಹೋರಾಟ ಸಮಿತಿಯ ಪದಾಧಿಕಾರಿಗಳಾದ ಕುತುಬುದ್ದೀನ ಖಾಜಿ, ಶ್ರೀನಿವಾಸ ಬಳ್ಳಾರಿ ಅವರ ಜೊತೆ ಬಾಗಲಕೋಟ ರೈಲು ನಿಲ್ದಾಣ ಸೇರಿದಂತೆ ಗದಗ-ಸೋಲಾಪುರ ಮಾರ್ಗಕ್ಕೆ ಒಳಪಡುವ ಎಲ್ಲಾ ರೈಲು ನಿಲ್ದಾಣಗಳ ಅಭಿವೃದ್ಧಿಯ ಸಮಾಲೋಚನೆ ನಡೆಸಿದರು.
ಬಾಗಲಕೋಟ ರೈಲು ನಿಲ್ದಾಣ 24 ಭೋಗಿಗಳ ನಿಲುಗಡೆಗೆ ಅನ್ವಯಿಸುವಂತೆ ನಿಮರ್ಿಸಬೇಕೆಂದು ರಾಜ್ಯಾಧ್ಯಕ್ಷ ಕುತುಬುದ್ದೀನ ಖಾಜಿ ಒತ್ತಾಯಿಸುತ್ತಾ ಮತ್ತೊಂದು ರಿಸವರ್ೇಷನ್ ಕೌಂಟರ್ ನಿಮರ್ಿಸಿ, ಮುಂಜಾನೆ 8:00 ಗಂಟೆಯಿಂದ ರಾತ್ರಿ 8:00 ಗಂಟೆಯವರೆಗೆ ನಿರಂತರ ಕಾರ್ಯನಿರ್ವಹಿಸಬೇಕು.
ರೈಲು ನಿಲ್ದಾಣದಲ್ಲಿ ಪ್ರಯಾಣಿಕರಿಗೆ ವಿಚಾರಣೆಗೆ ಯಾರೂ ಸ್ಪಂದಿಸುತ್ತಿಲ್ಲದಿರುವುದರಿಂದ ವಿಚಾರಣಾ ಕೊಠಡಿ ಸ್ಥಾಪಿಸಬೇಕು. ಬಾಗಲಕೋಟ ರೈಲು ನಿಲ್ದಾಣ ಜಂಕ್ಷನ್ ಇರುವುದರಿಂದ ರೈಲುಗಳ ದುರಸ್ಥಿ ಮತ್ತು ಸ್ವಚ್ಛತೆ ಕಾಪಾಡುವುದಕ್ಕಾಗಿ ಫಿಟ್ಲೈನ್, ಪ್ಲಾಟ್ಫಾರಂ 1 ಮತ್ತು ಫ್ಲಾಟ್ಫಾರಂ 2 ರಲ್ಲಿ ರೈಲುಗಳಿಗೆ ನೀರು ಪೂರೈಸುವ ಪೈಪ್ಲೈನ್ ಮತ್ತು ನಿರ್ಮಲ ಶೌಚಾಲಯ, ಪೂರ್ಣ ಪ್ರಮಾಣದ ಪ್ಲಾಟ್ಫಾರಂ ಮೇಲೆ ಛಾವಣಿಯನ್ನು ನಿಮರ್ಿಸಬೇಕು. ಈ ಎಲ್ಲ ಸಮಸ್ಯೆಗಳು ಆಲಿಸಿದ ಉಭಯತರು ತುತರ್ು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.
ಕುಡಚಿ-ಬಾಗಲಕೋಟ ರೈಲು ಮಾರ್ಗಕ್ಕೆ ಕಾಮಗಾರಿ ಪ್ರಾರಂಭಿಸಲು ಹಣದ ಕೊರತೆ ಇಲ್ಲ, ಆದರೆ ರಾಜ್ಯ ಸರಕಾರ ರೈಲ್ವೆ ಇಲಾಖೆಗೆ ಭೂಮಿ ಹಸ್ತಾಂತರಿಸಿದಲ್ಲಿ 24 ಗಂಟೆಯೊಳಗೆ ಕಾಮಗಾರಿಗೆ ಟೆಂಡರ್ ಕರೆಯಲಾಗುವುದು.
ಅದರಂತೆ ರೈಲು ಸಂಖ್ಯೆ 11423-11424 ಇಂಟರಸಿಟಿ ಪುನರರಾಂಭಿಸುವುದು, ರೈಲು ಸಂಖ್ಯೆ 57476 ಗುಂತಕಲ್-ತಿರುಪತಿ ಪ್ಯಾಸೆಂಜರ್ ಬಾಗಲಕೋಟವರೆಗೆ ವಿಸ್ತರಿಸುವುದು, ಸೋಲಾಪುರ-ಗದಗ ಡೆಮೊ 71303 ರೈಲನ್ನು ಬಳ್ಳಾರಿಯವರೆಗೆ ವಿಸ್ತರಿಸುವುದು, ರೈಲು ಸಂಖ್ಯೆ: 17305 ಹುಬ್ಬಳ್ಳಿ ನಿಜಾಮುದ್ದೀನ ಗದಗ-ಬಾಗಲಕೋಟ-ಬಿಜಾಪೂರ ಮಾರ್ಗದಲ್ಲಿ ಸಂಚರಿಸಲು ದಿಲ್ಲಿ ರೈಲ್ವೆ ಬೋಡರ್್ಗೆ ಪರವಾನಿಗೆ ಪಡೆಯಲು ಪತ್ರ ಬರೆಯಲಾಗುವುದು. ಪರವಾನಿಗಿ ಪಡೆದು ಈ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಮಾನ್ಯ ಮಹಾ ವ್ಯವಸ್ಥಾಪಕರು ಅಜಯಕುಮಾರ ಸಿಂಗ ಹೋರಾಟ ಸಮಿತಿಗೆ ಸ್ಪಷ್ಟ ಭರವಸೆ ನೀಡಿದರು.