ಲಾಕ್ ಡೌನ್ ಅವಧಿಯಲ್ಲಿ 3500 ಸುತ್ತಿನ ಸಂಚಾರ ನಡೆಸಿದ ದೆಹಲಿ ಮೆಟ್ರೋ ರೈಲು

ನವದೆಹಲಿ, ಮೇ 3 (ಯುಎನ್ಐ) ದೆಹಲಿಯಲ್ಲಿ ಲಾಕ್ ಡೌನ್ ಘೋಷಣೆಯಾದಂದಿನಿಂದ ಮೇ 2ರವರೆಗೆ ಮೆಟ್ರೋ ರೈಲುಗಳು ಕಾರ್ಯಾಚರಣೆಯಲ್ಲಿರಿಸುವ ಸಲುವಾಗಿ 3500ಕ್ಕೂ ಹೆಚ್ಚು ಸುತ್ತು ಪ್ರಯಾಣ ಬೆಳೆಇದೆ ಎಂದು ದೆಹಲಿ ಮೆಟ್ರೋ ರೈಲು ಕಾರ್ಪೊರೇಷನ್ ತಿಳಿಸಿದೆ. ದೆಹಲಿಯಲ್ಲಿ ಮಾ 22ರಿಂದ ಸಾರ್ವಜನಿಕರಿಗೆ ಮೆಟ್ರೋ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಆದರೆ, ಲಾಕ್ ಡೌನ್ ಅವಧಿಯಲ್ಲಿ ಕೂಡ ಮೆಟ್ರೋ ಸೇವೆಯನ್ನು ಮುಂದುವರಿಸಲು ಅಗತ್ಯ ಚಟುವಟಿಕೆಗಳನ್ನು ಕೈಗೊಳ್ಳಲಾಗಿದೆ ಎಂದು ಡಿಎಂಆರ್ ಸಿ ವಕ್ತಾರ ತಿಳಿಸಿದ್ದಾರೆ.
2000ಕ್ಕೂ ರೈಲು ಕೋಚ್ ಗಳ ಶಾಖ, ವೆಂಟಿಲೇಷನ್ ಮತ್ತು ಹವಾನಿಯಂತ್ರಿತ ವ್ಯವಸ್ಥೆಯನ್ನು ಪರಿಶೀಲಿಸಲಾಗಿದೆ. 1200 ಕೋಚ್ ಗಳಲ್ಲಿ ವಿಶೇಷ ರಾಸಾಯನಿಕಗಳನ್ನು ಬಳಸಿ ಸ್ವಚ್ಛ ಹವಾನಿಯಂತ್ರಿತ ವ್ಯವಸ್ಥೆಯ ಅಳವಡಿಕೆಯ ಪ್ರಯೋಗವನ್ನು ಕೂಡ ನಡೆಸಲಾಗಿದೆ ಎಂದರು.ಸಹಜ ಪರಿಸ್ಥಿತಿಯಲ್ಲಿ ಈ ಚಟುವಟಿಕೆ ಸಾಕಷ್ಟು ಸಮಯ ಹಿಡಿಯುತ್ತಿತ್ತು. ದಿನದ 20 ಗಂಟೆಗಳ ಕಾಲ ಮೆಟ್ರೋ ರೈಲು ಸಂಚರಿಸುವುದರಿಂದ ಈ ಯೋಜನೆ ಜಾರಿಗೊಳಿಸಲು ಕಷ್ಟವಾಗುತ್ತಿತ್ತು. ಈ ಸಂಪೂರ್ಣ ಸ್ವಚ್ಛತಾ ಕಾರ್ಯದಿಂದ ಬೇಸಿಗೆಯಲ್ಲಿ ಉತ್ತಮ ಹವಾನಿಯಂತ್ರಿತ ವಾತಾವರಣ ಒದಗಿಸಬೇಕು. ಜೊತೆಗೆ, ಮೆಟ್ರೋ ಸಿಬ್ಬಂದಿಗೆ 110 ಆನ್ ಲೈನ್ ಕೋರ್ಸ್ ಗಳು, 15ಕ್ಕೂ ಹೆಚ್ಚು ವೆಬಿನಾರ್ ಗಳನ್ನು ಹಮ್ಮಿಕೊಳ್ಳಲಾಗಿತ್ತು ಎಂದು ಅವರು ಮಾಹಿತಿ ನೀಡಿದರು.