ನವದೆಹಲಿ, ಫೆ 26 : ದೆಹಲಿ ಯಲ್ಲಿನ ಹಿಂಸಾಚಾರ ತಡೆಗಟ್ಟಲು ಸ್ವಯಂಪ್ರೇರಿತರಾಗಿ ಅಗತ್ಯ ಕ್ರಮ ಕೈಗೊಳ್ಳಿ ಎಂದು ದೆಹಲಿ ಕೋರ್ಟ್ ಪೊಲೀಸರಿಗೆ ಖಡಕ್ ನಿರ್ದೇಶನ ನೀಡಿದೆ.
ಪೌರತ್ವ ತಿದ್ದುಪಡಿ ಕಾಯ್ದೆಯ (ಸಿಎಎ) ಪರ-ವಿರುದ್ಧದ ಪ್ರತಿಭಟನೆಯಲ್ಲಿ ಈಶಾನ್ಯ ದೆಹಲಿಯಲ್ಲಿ ಉಂಟಾಗಿರುವ ಹಿಂಸಾಚಾರ ಸಂಬಂಧ ಕೋರ್ಟ್ ಇದೇ ಸಮಯದಲ್ಲಿ ಪೊಲೀಸರಿಗೆ ನೋಟಿಸ್ ಜಾರಿ ಮಾಡಿದೆ.
ದೆಹಲಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ತನಿಖೆ, ಸಂತ್ರಸ್ತರಿಗೆ ಪರಿಹಾರ ಮತ್ತು ಪ್ರಚೋದನಾಕಾರಿ ಭಾಷಣ ಮಾಡಿದ ಅನೇಕ ರಾಜಕೀಯ ನಾಯಕರನ್ನು ಬಂಧನ ಕುರಿತಂತೆ ಸಲ್ಲಿಕೆಯಾಗಿದ್ದ ಸಾರ್ವಜನಿಕ ಮನವಿಯ ವಿಚಾರಣೆ ನಡೆಸಿದ ಕೋರ್ಟ್, ದೆಹಲಿ ಪೊಲೀಸ್ ಕಮಿಷನರ್ಗೂ ನೋಟಿಸ್ ಜಾರಿ ಮಾಡಿದೆ.
ಸಿಎಎ ಕುರಿತಾಗಿ ಭುಗಿಲೆದ್ದ ಈಶಾನ್ಯ ದೆಹಲಿಯ ಹಿಂಸಾಚಾರ ಕುರಿತಂತೆ ಮಧ್ಯಾಹ್ನ ದೊಳಗೆ ಪ್ರತಿಕ್ರಿಯೆ ಕೊಡಬೇಕು ಎಂದು ಗಡುವು ಹಾಕಿದೆ ಗಳಬೆ ಮತ್ತು ದೊಂಬಿ, ಲೂಟಿಯಲ್ಲಿ ತೊಡಗಿರುವವರನ್ನು ಹತ್ತಿಕ್ಕಲು ಪೊಲೀಸರು ಯಾವ ಆದೇಶಕ್ಕೆ ಕಾಯದೆ ಸ್ವಯಂ ಕಾನೂನು ಕ್ರಮ ಜರುಗಿಸಬೇಕು ಎಂದೂ ಕೋರ್ಟ್ ಖಡಕ್ಕಾಗಿ ಹೇಳಿದೆ.