ದೆಹಲಿ ಚುನಾವಣೆ: ರಾಹುಲ್, ಪ್ರಿಯಾಂಕಾ ಅಬ್ಬರದ ಪ್ರಚಾರ

ನವದೆಹಲಿ, ಫೆ 4, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ  ವಿಧಾನಸಭಾ ಚುನಾವಣೆಯ ಪ್ರಚಾರದ ಕಾವು ದಿನದಿಂದ ದಿನಕ್ಕೆ ಏರುತ್ತಲೇ  ಇದೆ, ಚುನಾವಣೆಯೂ ಸಮೀಪವಾಗುತ್ತಿದೆ.  ಇಂದು  ಕಾಂಗ್ರೆಸ್ ಮುಖಂಡ, ಯುವ ನಾಯಕ  ರಾಹುಲ್ ಗಾಂಧಿ ಮತ್ತು ಯುವ ನಾಯಕಿ  ಪ್ರಿಯಾಂಕಾ ಗಾಂಧಿ ವಾದ್ರಾ  ನಾಲ್ಕು  ಕಡೆಯಲ್ಲಿ ಚುನಾವಣಾ ಪ್ರಚಾರ  ಸಭೆ ನಡೆಸಲಿದ್ದಾರೆ. ನಿನ್ನೆಯಷ್ಠೆ  ಪ್ರಧಾನಿ   ನರೇಂದ್ರ ಮೋದಿ ಅವರು ಚುನಾವಣಾ  ಪ್ರಚಾರದ   ಅಖಾಡಕ್ಕೆ  ಧುಮುಕಿದ್ದರು.ರಾಜಕೀಯ ನಾಯಕರ  ಆರೋಪ –ಪ್ರತ್ಯಾರೋಪಗಳು ತಾರಕ್ಕೆ ಮುಟ್ಟುತ್ತಿವೆ ಬರುವ ಶನಿವಾರ ದೆಹಲಿ ವಿಧಾನಸಭೆಗೆ ಮತದಾನ ನಡೆಯಲಿದೆ.  ಪ್ರಕಟಿತ  ಸಮೀಕ್ಷೆಗಳು  ಮತ್ತೊಮ್ಮ ದೆಹಲಿಯಲ್ಲಿ ಎಎಪಿ ಅಧಿಕಾರಕ್ಕೆ  ಬರಲಿದೆ ಎಂದು ಸಮೀಕ್ಷಾ ವರದಿ ಹೇಳಿವೆ.