ದೆಹಲಿ ಚುನಾವಣೆ: 11 ಗಂಟೆಗೆ ಮೊದಲ ಟ್ರೆಂಡ್ ಲಭ್ಯ

ನವದೆಹಲಿ, ಫೆ 11, ದೆಹಲಿ ವಿಧಾನಸಭಾ ಚುನಾವಣೆಯ ಮತಎಣಿಕೆ ಮಂಗಳವಾರ  8ಗಂಟೆಗೆ ಆರಂಭವಾಗಿದ್ದು, , ಮಧ್ಯಾಹ್ನ 11ಗಂಟೆ ಹೊತ್ತಿಗೆ ಮೊದಲ ಟ್ರೆಂಡ್  ಲಭ್ಯವಾಗಲಿದೆ. ಕಳೆದ ಶನಿವಾರ  70 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆದಿತ್ತು. ಹಲವು ಸುದ್ದಿವಾಹಿನಿಗಳ  ಸಮೀಕ್ಷೆ ಪ್ರಕಾರ, ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಮೂರನೇ ಬಾರಿ ಅಧಿಕಾರದ ಗದ್ದುಗೆ ಏರಲಿದೆ ಎಂದು ಭವಿಷ್ಯ ಹೇಳಿದ್ದವು. ಹೀಗಾಗಿ ಎಎಪಿ ಕಾರ್ಯಕರ್ತರಲ್ಲಿ, ನಾಯಕರಲ್ಲಿ ಸಹಜವಾಗಿ ಉತ್ಸಾಹ ಇಮ್ಮಡಿಗೊಂಡಿದೆ.