೨ ಲಕ್ಷ ಲಂಚ ಸ್ವೀಕರಿಸುತ್ತಿದ್ದಾಗ ಸಿಬಿಐ ಬಲೆಗೆ ಬಿದ್ದ ದೆಹಲಿ ಡಿಸಿಎಂ ಓ ಎಸ್ ಡಿ

ನವದೆಹಲಿ, ಫೆ೭,  ದೆಹಲಿ ವಿಧಾನಸಭಾ ಚುನಾವಣೆಗೆ   ಮತದಾನ ಸಮೀಪಿಸುತ್ತಿರುವಂತೆಯೇ    ದೆಹಲಿ   ಉಪ ಮುಖ್ಯಮಂತ್ರಿ,  ಎಎಪಿ ನಾಯಕ ಮನೀಶ್ ಸಿಸೋಡಿಯಾ  ಅವರ ಬಳಿ  ಓ ಎಸ್ ಡಿಯಾಗಿ   ಕಾರ್ಯನಿರ್ವಹಿಸುತ್ತಿದ್ದ ಗೋಪಾಲಕೃಷ್ಣ ಮಾಧವ್,   ವ್ಯಕ್ತಿಯೊಬ್ಬರಿಂದ   ೨  ಲಕ್ಷ  ರೂ  ಹಣವನ್ನು  ಲಂಚ ಪಡೆಯುತ್ತಿದ್ದಾಗ  ಸಿಬಿಐ ಅಧಿಕಾರಿಗಳು ದಾಳಿ ನಡೆಸಿ    ಲಂಚದ ಹಣದ ಸಮೇತ  ಸೆರೆ ಹಿಡಿದಿದ್ದಾರೆ.   ಅಂಡಮಾನ್  ನಿಕೋಬಾರ್  ಡಿಯು ಡಮನ್   ನಾಗರೀಕ ಸೇವೆಗಳಿಗೆ ಸೇರಿದ ಆಧಿಕಾರಿಯಾಗಿರುವ  ಆರೋಪಿ ಗೋಪಾಲಕೃಷ್ಣ ಮಾಧವ್,  ಒಬ್ಬ ವ್ಯಕ್ತಿಯಿಂದ  ೨ ಲಕ್ಷರೂಪಾಯಿ  ಪಡೆದುಕೊಳ್ಳುತ್ತಿದ್ದ    ವೇಳೆ  ಸಿಬಿಐ ಅಧಿಕಾರಿಗಳು   ಸೆರೆಹಿಡಿದಿದ್ದಾರೆ.   ಆರೋಪಿಯನ್ನು ಸಿಬಿಐ  ಅಧಿಕಾರಿಗಳು   ಕೇಂದ್ರ ಕಚೇರಿಯಲ್ಲಿ  ಪ್ರಶ್ನಿಸುತ್ತಿದ್ದಾರೆ.  ಈ ಪ್ರಕರಣದಲ್ಲಿ ಮನೀಶ್ ಸಿಸೋಡಿಯಾ  ಪಾತ್ರ  ಇದೆಯೇ  ಎಂಬುದನ್ನು ಸಿಬಿಐ ಅಧಿಕಾರಿಗಳು ವಿಚಾರಿಸುತ್ತಿದ್ದಾರೆ. ೨೦೧೫ ರಲ್ಲಿ ದೆಹಲಿಯ ಉಪ  ಮುಖ್ಯಮಂತ್ರಿ   ಓ ಎಸ್ ಡಿ  ಯಾಗಿ ನೇಮಕಗೊಂಡಿದ್ದ ಗೋಪಾಲಕೃಷ್ಣ ಅವರನ್ನು  ಚುನಾವಣೆಯ  ಸಂದರ್ಭದಲ್ಲಿ  ಬಂಧಿಸಿರುವುದು   ತೀವ್ರ  ಚರ್ಚೆಯ ವಿಷಯವಾಗಿದೆ.   ಮನೀಶ್ ಸಿಸೋಡಿಯಾ  ವಿರುದ್ದ   ಜಾಮಿಯಾ ಮಿಲಿಯಾ ಬಳಿ   ಬಸ್ಸಿಗೆ  ಬೆಂಕಿ  ಹಚ್ಚಿದ್ದ  ಪ್ರಕರಣವನ್ನು ಈ ಮೊದಲು   ದೆಹಲಿ ಪೊಲೀಸರು ದಾಖಲಿದ್ದರು.