ದೆಹಲಿ, ಮತ್ತೊಮ್ಮೆ ಎಎಪಿ ಗೆ ದಿಗ್ವಿಜಯ: ಅರವಿಂದ ಕೇಜ್ರಿವಾಲ್ ವಿಶ್ವಾಸ

ನವದೆಹಲಿ, ಫೆ 8 ,ಹಲವು ವಾಹಿನಿಗಳ  ಸಮೀಕ್ಷಾ ವರದಿಯಂತೆ ದೆಹಲಿಯಲ್ಲಿ ಮತ್ತೊಮ್ಮೆ ಎಎಪಿ ದಿಗ್ವಿಜಯ ಸಾಧಿಸಲಿದ್ದು,  ಅಧಿಕಾರ ಹಿಡಿಯಲಿದೆ  ಎಂಬ  ವಿಶ್ವಾಸವನ್ನು  ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.  ಉತ್ತರ ದೆಹಲಿಯ ಸಿವಿಲ್ ಲೈನ್ಸ್ನಲ್ಲಿ ಕುಟುಂಬದ ಸದಸ್ಯರ ಜೊತೆ  ಮತ ಚಲಾಯಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು , ದೆಹಲಿಯಲ್ಲಿ ಸರ್ಕಾರದಉತ್ತಮ ಕೆಲಸ, ಮಾಡಿದ ಸಾಧನೆ ಪಕ್ಷದ  ಗೆಲುವಿಗೆ ಶೀರಕ್ಷೆಯಾಗಲಿದೆ ಎಂದರು.ಕೇಜ್ರಿವಾಲ್ ಅವರ ವಿರುದ್ಧ ಬಿಜೆಪಿ ದೆಹಲಿ ಘಟಕದ ಯುವ ಮೋರ್ಚಾ ಅಧ್ಯಕ್ಷ ಸುನಿಲ್ ಯಾದವ್ ಅವರನ್ನು ಕಣಕ್ಕೆ ಇಳಿಸಿದೆ. ಕಾಂಗ್ರೆಸ್ನಿಂದ ರೊಮೇಶ್ ಸಬರವಾಲ್ ಸ್ಪರ್ಧಿಸಿದ್ದಾರೆ. ಎಎಪಿ ಎಲ್ಲ 70 ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೆ, ಬಿಜೆಪಿಯು 67 ಸ್ಥಾನಗಳಿಗೆ ಮಾತ್ರ ಅಭ್ಯರ್ಥಿಗಳನ್ನು ಹಾಕಿದೆ . ಕಾಂಗ್ರೆಸ್ 66 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದು, ನಾಲ್ಕು ಕ್ಷೇತ್ರಗಳನ್ನು ಮೈತ್ರಿ ಪಕ್ಷ ಆರ್ಜೆಡಿಗೆ ಬಿಟ್ಟುಕೊಟ್ಟಿದೆ.