ದೆಹಲಿ ಜಾಮಿಯಾ ಮಿಲಿಯಾ ಪ್ರದೇಶದಲ್ಲಿ ಭಾನುವಾರ ರಾತ್ರಿ ಮತ್ತೊಂದು ಗುಂಡಿನ ದಾಳಿ ಘಟನೆ ವರದಿ

ನವದೆಹಲಿ, ಫೆ ೩, ದೆಹಲಿಯ ಜಾಮಿಯ ಮಿಲಿಯಾ ಇಸ್ಲಾಮಿಯಾ  ವಿಶ್ವವಿದ್ಯಾಲಯದ ಬಳಿ ಭಾನುವಾರ ಗುಂಡು ಹಾರಿಸಿರುವ ಮತ್ತೊಂದು ಘಟನೆ ವರದಿಯಾಗಿದೆ.ಚಲಿಸುತ್ತಿರುವ ವಾಹನದಿಂದ ಇಬ್ಬರು ವ್ಯಕ್ತಿಗಳು  ಗುಂಡಿನ ದಾಳಿ ನಡೆಸಿರುವದನ್ನು ಸ್ಥಳದಲ್ಲಿದ್ದ  ಕಾನೂನು ವಿದ್ಯಾರ್ಥಿ  ಅರ್ಷಾನ್  ಅಫಕ್  ಗುರುತಿಸಿದ್ದಾರೆ.  ಮೊದಲು  ಗೇಟ್ ಸಂಖ್ಯೆಯ ೫ರ ಬಳಿ  ಗುಂಡು ಹಾರಿಸಿದರು,  ವಾಹನ,  ಗೇಟ್ ಸಂಖ್ಯೆ  ೧ಅನ್ನು ದಾಟಿದಾಗಲೂ ಗುಂಡಿನ ಶಬ್ದ  ನಮಗೆ ಕೇಳಿಬಂತು  ಎಂದು ಹೇಳಿದ್ದಾರೆ. ಘಟನೆಯಲ್ಲಿ  ಒಬ್ಬರು ಗಾಯಗೊಂಡಿದ್ದು, ಸ್ಥಳದಲ್ಲಿ   ಬಿಗುವಿನ ಪರಿಸ್ಥಿತಿ ಮೂಡಿದೆ. ದಾಳಿ ನಡೆಸಿದವರು  ಬಳಸಿದ್ದ  ವಾಹನ ಸಂಖ್ಯೆಯನ್ನು  ದಾಖಲಿಸಿಕೊಂಡಿದ್ದೇವೆ ಎಂದು  ಪ್ರತ್ಯಕ್ಷದರ್ಶಿ ತಿಳಿಸಿದ್ದಾರೆ.

ಇಬ್ಬರು ವ್ಯಕ್ತಿಗಳು ಓಕ್ಲಾದಿಂದ  ಸ್ಕೂಟಿಯೊಂದರಲ್ಲಿ ಬಂದು  ಜುಲೆನಾ ಕಡೆ ಹೋದರು ಎಂದು  ಜಾಮಿಯಾ  ಬಳಿ  ನಿಯೋಜಿಸಲಾಗಿದ್ದ   ಸೆಕ್ಯುರಿಟಿ ಗಾರ್ಡ್ ಗಳು    ತಿಳಿಸಿದ್ದು,  ಸಂಖ್ಯೆ ೬ ಗೇಟ್ ಬಳಿ ಮೊದಲು,  ನಂತರ  ಗೇಟ್  ಒಂದರ   ಬಳಿ    ಗುಂಡಿನ ದಾಳಿ   ನಡೆಸಿದರು ಎಂದು    ಅಧಿಕಾರಿಗಳಿಗೆ  ಮಾಹಿತಿ ನೀಡಿದ್ದಾರೆ.

ಘಟನೆಯ  ನಂತರ  ಜಾಮಿಯಾ ನಗರ್  ಠಾಣೆಯ  ಎಸ್ ಹೆಚ್ ಓ  ಅವರ ತಂಡ  ಸ್ಥಳಕ್ಕೆ ತೆರಳಿ  ಘಟನೆ ನಡೆದ  ಪ್ರದೇಶವನ್ನು ಪರೀಶೀಲಿಸಿದ್ದಾರೆ.   ಸ್ಥಳದಲ್ಲಿ   ಖಾಲಿ ಬುಲೆಟ್ ಶೆಲ್ ಗಳು ಪತ್ತೆಯಾಗಿಲ್ಲ.  ದಾಳಿಕೋರರು  ಬಳಸಿದ್ದರೆಂದು ಹೇಳಿದ ವಾಹನದ ಬಗ್ಗೆಯೂ  ವಿಭಿನ್ನ ಹೇಳಿಕೆಗಳು ವ್ಯಕ್ತವಾಗಿವೆ. ಕೆಲವರು  ಸ್ಕೂಟರ್ ಎಂದರೆ, ಕೆಲವರು  ನಾಲ್ಕು ಚಕ್ರಗಳ ವಾಹನ ಎಂದು ಹೇಳಿದ್ದಾರೆ   ಎಂದು  ದಕ್ಷಿಣ ಪೂರ್ವ  ಹೆಚ್ಚುವರಿ ಡಿಸಿಪಿ ಕುಮಾರ್ ಜ್ಞಾನೇಶ್  ಹೇಳಿದ್ದಾರೆ. ಈ ನಡುವೆ  ವಿದ್ಯಾರ್ಥಿಗಳು  ಸೇರಿದಂತೆ  ಹಲವು ಜನರು  ಪೊಲೀಸ್ ಠಾಣೆಯ  ಹೊರಗೆ  ಜಮಾಯಿಸಲು ಆರಂಭಿಸಿದ್ದು,  ಘಟನೆ ಕುರುತಂತೆ   ದೂರು ನೀಡಿದರೆ,   ಕಾನೂನಿನಂತೆ ಕ್ರಮ ಕೈಗೊಳ್ಳಲಾಗುವುದು  ಎಂದು  ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.