ಗಂಗಾವತಿ-ದರೋಜಿ ರೈಲ್ವೆ ಮಾರ್ಗದ ಅನುದಾನ ಕೋರಿ ರಾಜ್ಯ ರೈಲ್ವೆ ಸಚಿವರ ಬಳಿ ನಿಯೋಗ

Delegation to the State Railway Minister seeking grant of Gangavati-Daroji railway line

ಗಂಗಾವತಿ-ದರೋಜಿ ರೈಲ್ವೆ ಮಾರ್ಗದ ಅನುದಾನ ಕೋರಿ ರಾಜ್ಯ ರೈಲ್ವೆ ಸಚಿವರ ಬಳಿ ನಿಯೋಗ

ಕಂಪ್ಲಿ 23: ಇಲ್ಲಿನ ಶಿವಶಕ್ತಿ ಅಕ್ಕಿಗಿರಣಿ ಆವರಣದಲ್ಲಿ ಶುಕ್ರವಾರ ಕಂಪ್ಲಿ ತಾಲೂಕು ರೈಲ್ವೆ ಮಾರ್ಗಕ್ಕಾಗಿ ಕ್ರಿಯಾ ಸಮಿತಿ ಸದಸ್ಯರ ಸಭೆ ನಡೆಯಿತು. ಸಭೆಯ ಅಧ್ಯಕ್ಷತೆವಹಿಸಿ ಕಂಪ್ಲಿ ತಾಲೂಕು ರೈಲ್ವೆ ಮಾರ್ಗಕ್ಕಾಗಿ ಕ್ರಿಯಾ ಸಮಿತಿ ಅಧ್ಯಕ್ಷ ಕೆ.ಎಂ.ಹೇಮಯ್ಯಸ್ವಾಮಿ ಮಾತನಾಡಿ, ಕಂಪ್ಲಿ ಮೂಲಕ ಗಂಗಾವತಿ-ದರೋಜಿ ಬ್ರಾಡ್‌ಗೇಜ್ ರೈಲ್ವೆ ಸಂಪರ್ಕ ಕಾಮಗಾರಿ ಸಮೀಕ್ಷೆ ಪೂರ್ಣಗೊಳಿಸಿ, 919.49ಕೋಟಿ ರೂಪಾಯಿಗಳ ಅಂದಾಜಿಸಿದೆ. ರಾಜ್ಯ ಸರ್ಕಾರ ಬಜೆಟ್‌ನಲ್ಲಿ ತನ್ನ ಪಾಲನ್ನು ಮೀಸಲಿಡಬೇಕಿದೆ.  ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರ ತನ್ನ ಪಾಲನ್ನು ಬಿಡುಗಡೆಗೊಳಿಸಬೇಕಿದೆ. ಈ ಹಿನ್ನಲೆಯಲ್ಲಿ ಕಂಪ್ಲಿ ಮೂಲಕ ಗಂಗಾವತಿ-ದರೋಜಿ ರೈಲ್ವೆ ಸಂಪರ್ಕ ಕಾಮಗಾರಿಗೆ ಅನುದಾನ ಬಿಡುಗಡೆಗೆ ಆಗ್ರಹಿಸಲು ಸಿಎಂ ಮತ್ತು ರಾಜ್ಯ ರೈಲ್ವೆ ಸಚಿವರ ಬಳಿ ನಿಯೋಗ ತೆರಳಿ ಅನುದಾನ ಬಿಡುಗಡೆಗೆ ಒತ್ತಾಯಿಸಲಾಗುವುದು ಎಂದರು.  ಸಮಿತಿ ಪದಾಧಿಕಾರಿಗಳಾದ ನಾರಾಯಣ ಇಂಗಳಗಿ, ಹಾದಿಮನಿ ಕಾಳಿಂಗವರ್ಧನ, ಎಸ್‌.ಡಿ.ಬಸವರಾಜ, ಅಯ್ಯೋದಿ ವೆಂಕಟೇಶ, ಇಟಗಿ ವಿರುಪಾಕ್ಷಿ, ಮಡಿವಾಳರ ಹುಲುಗಪ್ಪ, ಬಂಗಿ ದೊಡ್ಡ ಮಂಜುನಾಥ ಇದ್ದರು.