ರೇಲ್ವೆ ಸಚಿವರಿಗೆ ನಿಯೋಗದೊಂದಿಗೆ ಭೇಟಿ
Delegation meets Railway Minister
ಧಾರವಾಡ 07: ರೇಲ್ವೆ ಇಲಾಖೆಯ ಆಂತರಿಕ ನೇಮಕಾತಿಗಳಲ್ಲಿ ಮತ್ತು ಇಲಾಖಾ ಬಡ್ತಿ ಹುದ್ದೆಗಳಿಗೆ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶವಿಲ್ಲದ್ದನ್ನು ಕರ್ನಾಟಕ ವಿದ್ಯಾವರ್ಧಕ ಸಂಘವು ಪ್ರತಿಭಟಿಸಿ ಕೇಂದ್ರದ ರೇಲ್ವೆ ರಾಜ್ಯ ಸಚಿವ ವ್ಹಿ. ಸೋಮಣ್ಣನವರನ್ನು ಹುಬ್ಬಳ್ಳಿಯಲ್ಲಿ ಭೆಟ್ಟಿಯಾಗಿ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಅವರ ನೇತೃತ್ವದಲ್ಲಿ ಕಾರಾ್ಯಧ್ಯಕ್ಷ ಬಸವಪ್ರಭು ಹೊಸಕೇರಿ, ಉಪಾಧ್ಯಕ್ಷ ಡಾ. ಸಂಜೀವ ಕುಲಕರ್ಣಿ, ಕೋಶಾಧ್ಯಕ್ಷ ಸತೀಶ ತುರಮರಿ, ಸಹ ಕಾರ್ಯದರ್ಶಿ ಶಂಕರ ಕುಂಬಿ ಹಾಗೂ ಮಹೇಂದ್ರ ಸಿಂಘಿ ಮುಂತಾದವರು ಸೇರಿ ಆಂತರಿಕ ಮತ್ತು ಬಡ್ತಿ ಸಂದರ್ಭದಲ್ಲಿ ಪ್ರಾದೇಶಿಕ ಭಾಷೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ಮಾಡದ್ದರಿಂದ ರೇಲ್ವೆ ಇಲಾಖೆಯಲ್ಲಿ ಕನ್ನಡಿಗರಿಗೆ ಅನ್ಯಾಯ ಎಸಗುತ್ತಿರುವುದು ಖಂಡನೀಯ. ಪ್ರಾದೇಶಿಕ ಭಾಷಿಕರಿಗೆೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕು ಇಲ್ಲದೇ ಹೋದಲ್ಲಿ ಹಿಂದಿಯೇತರ ಎಲ್ಲ ಭಾಷಿಕರಿಗೆ ಅನ್ಯಾಯವಾಗುತ್ತದೆ. ಕಾರಣ ಕೂಡಲೆ ಕನ್ನಡದಲ್ಲಿ ಪರೀಕ್ಷೆ ಬರೆಯಲು ಆದೇಶ ಹೊರಡಿಸಬೇಕೆಂದು ರೇಲ್ವೆ ಮಂತ್ರಿಗಳನ್ನು ಒತ್ತಾಯಿಸಿ ನಿಯೋಗದೊಂದಿಗೆ ಮನವಿಯನ್ನು ಸಂಘವು ಮಂತ್ರಿಗಳಿಗೆ ಸಲ್ಲಿಸಿತು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 