ರಾಯಬಾಗ 27: ತಾಲೂಕಿನ ಕೆಲವೊಂದು ಗ್ರಾಮಗಳಲ್ಲಿ ಮದ್ಯವನ್ನು ಕಿರಾಣಿ ಅಂಗಡಿ ಮತ್ತು ಪಾನ್ ಶಾಪ್ಗಳಲ್ಲಿ ಮಾರಾಟ ಮಾಡುತ್ತಿದ್ದರೂ ಅಬಕಾರಿ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತುಕೊಂಡಿದ್ದಾರೆ. ಪ್ರತಿ ತಿಂಗಳು ಇವರಿಂದ ಹಣ ವಸೂಲಿ ಮಾಡಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲು ಕುಮ್ಮಕ್ಕು ನೀಡುತ್ತಾರೆಂದು ಗಂಭೀರವಾಗಿ ಆರೋಪಿಸಿದ ತಾ.ಪಂ.ಸದಸ್ಯರು ಒಕ್ಕೊರಲಿನಿಂದ ಅಬಕಾರಿ ಅಧಿಕಾರಿ ವಾಯ್.ಬಿ.ಗಜಾಕೋಶ ಅವರನ್ನು ತರಾಟೆಗೆ ತೆಗೆದುಕೊಂಡ ಘಟನೆ ತಾ.ಪಂ.ಸಾಮಾನ್ಯ ಸಭೆಯಲ್ಲಿ ನಡೆಯಿತು.
ಗುರುವಾರ ಪಟ್ಟಣದ ತಾ.ಪಂ.ಸಭಾಭವನದಲ್ಲಿ ತಾ.ಪಂ.ಅಧ್ಯಕ್ಷೆ ಸುಜಾತಾ ಪಾಟೀಲ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅಬಕಾರಿ ಅಧಿಕಾರಿಗಳು ಅಕ್ರಮ ಮದ್ಯ ಮಾರಾಟ ಮಾಡುವವರ ವಿರುದ್ಧ ಕ್ರಮಕೈಗೊಂಡಿರುವುದಾಗಿ ಉತ್ತರಿಸುತ್ತಿದ್ದಂತೆ, ಸದಸ್ಯರು ಎದ್ದು ನಿಂತು ನಿಖರವಾಗಿ ಎಲ್ಲಿ ದಾಳಿ ಮಾಡಿದ್ದಿರಿ ಹೇಳಿ ಎಂದು ಪ್ರಶ್ನಿಸಿದಾಗ, ಇದಕ್ಕೆ ಉತ್ತರ ನೀಡಲು ತಡಬಡಿಸಿದ ಅಧಿಕಾರಿ, ಮಾಹಿತಿ ನೀಡುವುದಾಗಿ ಹೇಳಿ ಜಾರಲು ಪ್ರಯತ್ನಿಸಿದರು.
ಬೆಕ್ಕೇರಿ ಕೇಂದ್ರ ಸರಕಾರಿ ಶಾಲೆ ಹಂಚುಗಳು ಒಡೆದು ಸೋರುವಂತಾಗಿದ್ದು, ಮಳೆಗಾಲ ಪ್ರಾರಂಭವಾಗುವ ಮುಂಚಿತವಾಗಿ ಸರಿಪಡಿಸುವಂತೆ ಕಳೆದ ಸಭೆಯಲ್ಲಿ ಮನವಿ ಮಾಡಿಕೊಂಡಿದ್ದರು, ಬಿಇಒ ಅವರು ಮಳೆಗಾಲ ಪ್ರಾರಂಭವಾಗಿ ಶಾಲೆ ಸೋರುತ್ತಿದ್ದರೂ ಇನ್ನುವರೆಗೆ ಶಾಲೆ ಹಂಚು ಹಾಕಿಸಲು ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಸದಸ್ಯ ಅಶೋಕ ಬಾನಸಿ ಅಸಮಾಧಾನ ವ್ಯಕ್ತಪಡಿಸಿದರು. ಮಧ್ಯ ಪ್ರವೇಶಿಸಿ ಮಾತನಾಡಿದ ಅಧ್ಯಕ್ಷೆ ಸುಜಾತಾ ಪಾಟೀಲ, ತಾಲೂಕಿನ ಬಹಳಷ್ಟು ಶಾಲೆಯಲ್ಲಿ ಶೌಚಾಲಯಗಳಿಲ್ಲ, ಇದ್ದರೂ ಅವುಗಳು ಸ್ವಚ್ಛತೆ ಇಲ್ಲದೆ ಉಪಯೋಗಕ್ಕೆ ಬಾರದಂತಾಗಿದೆ. ಇನ್ನು ಶೌಚಾಲಯಗಳಿಗೆ ಕೀಲಿ ಹಾಕುವುದರಿಂದ ವಿದ್ಯಾಥರ್ಿಗಳು ಉಪಯೋಗಿಸಲು ಸಾಧ್ಯವಾಗುತ್ತಿಲ್ಲವೆಂದು ತರಾಟೆಗೆ ತೆಗೆದುಕೊಂಡ ಅವರು, ಪ್ರತಿಯೊಂದು ಶಾಲೆಗೆ ಹೆಣ್ಣು ಮಕ್ಕಳಿಗೆ ಮತ್ತು ಗಂಡು ಮಕ್ಕಳಿಗೆ ಪ್ರತ್ಯೇಕ ಶೌಚಾಲಯ ನಿಮರ್ಿಸಲು ಕ್ರಮಕೈಗೊಳ್ಳುವಂತೆ ಸೂಚಿಸಿದರು.
ಬಿಇಒ ಅವರು ಜವಾಬ್ದಾರಿಯಿಂದ ತಾಲೂಕಿನ ಎಲ್ಲ ಶಾಲೆಗಳಿಗೆ ಭೇಟಿ ನೀಡಿ, ಶಾಲೆಗಳಲ್ಲಿರುವ ಮೂಲಭೂತ ಸೌಲಭ್ಯಗಳ ಕೊರತೆಗಳ ಬಗ್ಗೆ ಗಮನ ವಹಿಸಿ ಸೂಕ್ತ ಕ್ರಮಕೈಗೊಳ್ಳುವಂತೆ ಸದಸ್ಯರೆಲ್ಲರೂ ಒತ್ತಾಯಿಸಿದರು.
ತಾ.ಪಂ.ಸದಸ್ಯರು ಕೊಟ್ಟಿರುವ ಹೆಸರುಗಳನ್ನು ಬದಲಾಯಿಸಿ, ಸದಸ್ಯರ ಗಮನಕ್ಕೆ ತರದೇ ಬೇರೆ ಫಲಾನುಭವಿಗಳನ್ನು ಆಯ್ಕೆಮಾಡಿರುವುದು ಎಷ್ಟು ಸರಿ ಎಂದು ಸದಸ್ಯರೆಲ್ಲರೂ ತೋಟಗಾರಿಕೆ ಇಲಾಖೆ ಅಧಿಕಾರಿ ಎಮ್.ಆರ್.ಕಳ್ಳಿಮನಿ ಅವರನ್ನು ತರಾಟೆಗೆ ತೆಗೆದುಕೊಂಡು ಪ್ರಸಂಗ ಸಭೆಯಲ್ಲಿ ನಡೆಯಿತು.
ಕೆಆರ್ಡಿಎಎಲ್ ವತಿಯಿಂದ ನಿಮರ್ಿಸಿದ ಶುದ್ಧ ನೀರಿನ ಘಟಕಗಳು (ಆರ್.ಒ ಪ್ಲಾಂಟ್) ಸರಿಯಾಗಿ ನಿರ್ವಹಣೆ ಇಲ್ಲದೇ ಬಂದು ಬಿಳುತ್ತಿವೆ. ಇದರಿಂದ ಜನರಿಗೆ ಶುದ್ಧ ಕುಡಿಯುವ ನೀರು ದೊರಕುತ್ತಿಲ್ಲವೆಂದು ಸದಸ್ಯರು ಆರೋಪಿಸಿದರು.
ಅಳಗವಾಡಿಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರ ತಿಪ್ಪೆಗುಂಡಿಯಾಗಿದೆ. ಇಲ್ಲಿ ವೈದ್ಯರು ಮತ್ತು ಸಿಬ್ಬಂದಿ ಇಲ್ಲದೇ ಇರುವುದರಿಂದ ಆರೋಗ್ಯ ಕೇಂದ್ರ ಇದ್ದು ಇಲ್ಲದಂತಾಗಿದೆ ಎಂದು ಅಳಗವಾಡಿ ಸದಸ್ಯರು ಗಂಭೀರವಾಗಿ ಆರೋಪಿಸಿದರು. ಇದಕ್ಕೆ ಉತ್ತರಿಸಿದ ಆರೋಗ್ಯ ಇಲಾಖೆ ಅಧಿಕಾರಿ, ತಾಲೂಕಿನಲ್ಲಿ ವೈದ್ಯರ ಕೊರತೆ ಇರುವುದರಿಂದ ತೊಂದರೆ ಆಗಿದೆ ಎಂದು ತಿಳಿಸಿದರು.
ಪ್ರಾರಂಭದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಗೈರು ಹಾಜರು ಇರುವುದನ್ನು ಕಂಡು ಸದಸ್ಯರೆಲ್ಲರೂ ಆಕ್ರೋಶ ವ್ಯಕ್ತಪಡಿಸಿದಾಗ, ಮಧ್ಯ ಪ್ರವೇಶಿಸಿ ಮಾತನಾಡಿದ ಅಧ್ಯಕ್ಷೆ ಸುಜಾತಾ ಪಾಟೀಲ ಅವರು, ತಹಶೀಲ್ದಾರ ಅವರು ಬೆಳಗಾವಿಯಲ್ಲಿ ಸಭೆ ಇರುವುದರಿಂದ ಸಭೆಗೆ ಬಂದಿರುವುದಿಲ್ಲ. ಅವರ ಬದಲಾಗಿ ಬೇರೆ ಅಧಿಕಾರಿ ಬರುವುದಾಗಿ ತಿಳಿಸಿದ್ದಾರೆಂದು ಹೇಳಿದಾಗ ಸದಸ್ಯರು ಸಮಾಧಾನಗೊಂಡರು.
ತಾಲೂಕು ಅನುಷ್ಠಾನಾಧಿಕಾರಿಗಳು ತಮ್ಮ ತಮ್ಮ ಇಲಾಖೆಯಲ್ಲಿರುವ ಸೌಲಭ್ಯ ಮತ್ತು ಪ್ರಗತಿ ಕುರಿತು ಸಭೆ ತಿಳಿಸಿದರು.
ಸಭೆಯಲ್ಲಿ ಉಪಾಧ್ಯಕ್ಷೆ ಸವಿತಾ ನಾಯಿಕ, ತಾ.ಪಂ.ಕಾರ್ಯನಿವಾರ್ಹಕ ಅಧಿಕಾರಿ ಸಂದೀಪ ಚೌಗಲಾ, ತಾ.ಪಂ.ಸದಸ್ಯರಾದ ಅಶೋಕ ಬಾನಸಿ, ನಾಮದೇವ ಕಾಂಬಳೆ, ಶ್ರವಣ ಕಾಂಬಳೆ, ಮಹಾದೇವ ಮಾರಾಪೂರ ಹಾಗೂ ತಾಲೂಕಾ ಎಲ್ಲ ಅನುಷ್ಠಾನಾಧಿಕಾರಿಗಳು ಪಾಲ್ಗೊಂಡಿದ್ದರು.