ಇಟಾನಗರ, ನವೆಂಬರ್ 15 : ಎರಡು ದಿನಗಳ ಅರುಣಾಚಲ ಪ್ರದೇಶ ಪ್ರವಾಸದಲ್ಲಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಶುಕ್ರವಾರ ಭಾರತ-ಚೀನಾ ಗಡಿಯ ತವಾಂಗ್ ಬಳಿಯ ಬುಮ್ಲಾದಲ್ಲಿರುವ ಭಾರತೀಯ ಸೇನೆಯ ಮುಂಚೂಣಿ ಠಾಣೆಗಳಿಗೆ ಭೇಟಿ ನೀಡಿದ್ದಾರೆ.
ಅರುಣಾಚಲ ಪ್ರದೇಶದ ತವಾಂಗ್ ಬಳಿಯ ಬುಮ್ಲಾದ ಮುಂಚೂಣಿ ಪ್ರದೇಶಗಳಿಗೆ ಭೇಟಿ ನೀಡಿದ್ದೇನೆ. ಅಲ್ಲದೆ, ಭಾರತೀಯ ಸೈನ್ಯದ ಕೆಚ್ಚೆದೆಯ ಜವಾನರು ಮತ್ತು ಅಧಿಕಾರಿಗಳೊಂದಿಗೆ ಅದ್ಭುತ ಸಂವಾದ ನಡೆಸಲಾಗಿದೆ. ಸೇನೆಯು ಅತ್ಯಂತ ಸವಾಲಿನ ವಾತಾವರಣದಲ್ಲಿಯೂ ಭಾರತದ ಗಡಿಗಳನ್ನು ಭದ್ರಪಡಿಸುತ್ತಿದೆ ಎಂದು ರಕ್ಷಣಾ ಸಚಿವರು ಟ್ವೀಟ್ ಮಾಡಿದ್ದಾರೆ.
ನನ್ನ ಬುಮ್ಲಾ ಭೇಟಿಯ ಸಮಯದಲ್ಲಿ, ಗಡಿ ವಿಷಯದಲ್ಲಿ ಗ್ರಹಿಕೆಯ ವ್ಯತ್ಯಾಸಗಳ ಹೊರತಾಗಿಯೂ, ಭಾರತೀಯ ಸೇನೆ ಮತ್ತು ಪಿಎಲ್ಎ ಎರಡೂ ಎಲ್ಎಸಿಯ ಮೇಲಿನ ಉದ್ವಿಗ್ನತೆಯನ್ನು ಕಡಿಮೆ ಮಾಡುವಷ್ಟು ಸಂವೇದನಾಶೀಲವಾಗಿವೆ ಎಂದು ನಾನು ತಿಳಿದುಕೊಂಡಿದ್ದೇನೆ. ಎಲ್ಲಾ ಸಂದರ್ಭಗಳಲ್ಲಿಯೂ ಹೆಚ್ಚಿನ ಪ್ರಬುದ್ಧತೆಯನ್ನು ತೋರಿಸಿದ್ದಕ್ಕಾಗಿ ನಾನು ಭಾರತೀಯ ಸೇನೆಯನ್ನು ಅಭಿನಂದಿಸುತ್ತೇನೆ ಎಂದು ಅವರು ಹೇಳಿದ್ದಾರೆ.
ಗುರುವಾರ, ತವಾಂಗ್ನಲ್ಲಿ ನಡೆದ 11 ನೇ ಮೈತ್ರೀ ದಿವಾಸ್ ಕಾರ್ಯಕ್ರಮದಲ್ಲಿ ರಾಜನಾಥ್ ಸಿಂಗ್ ಭಾಗವಹಿಸಿದ್ದರು.