ಲೋಕದರ್ಶನ ವರದಿ
ಅಥಣಿ: ಮತದಾರರಿಗೆ ವ್ಯಭಿಚಾರ ಮಾಡಿದ ಅನರ್ಹ ಶಾಸಕರನ್ನು ಉಪ ಚುನಾವಣೆಯಲ್ಲಿ ಸೋಲಿಸಿ ಎಂದು ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಆರ್.ಬಿ.ತಿಮ್ಮಾಪುರ ಅಥಣಿ ಮತಕ್ಷೇತ್ರದ ಮತದಾರರಲ್ಲಿ ಮನವಿ ಮಾಡಿದರು. ಅವರು ಕಾಂಗ್ರೆಸ್ ಅಭ್ಯಥರ್ಿ ಗಜಾನನ ಮಂಗಸೂಳಿ ಪರ ಪ್ರಚಾರಾರ್ಥ ಆಗಮಿಸಿದ್ದ ಸಂದರ್ಭದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡುತ್ತಿದ್ದರು.
ತಮ್ಮ ತಮ್ಮ ಕ್ಷೇತ್ರಗಳ ಅಭಿವೃದ್ಧಿ ಆಗಲಿಲ್ಲ ಎನ್ನುವ ಕುಂಟು ನೆಪ ಒಡ್ಡಿ ಹಣ ಹಾಗೂ ಅಧಿಕಾರದ ದುರಾಸೆಗಾಗಿ ಮಾತೃ ಪಕ್ಷಕ್ಕೆ ದ್ರೋಹ ಎಸಗಿ ಬಿಜೆಪಿ ಪಕ್ಷ ಸೇರ್ಪಡೆಗೊಂಡಿದ್ದಾರೆ.
ಇಂತಹ ದುರಾಸೆಯುಳ್ಳ ಶಾಸಕರನ್ನು ಸವರ್ೋಚ್ಚ ನ್ಯಾಯಾಲಯ ಅನರ್ಹಗೊಳಿಸಿದ್ದು, ಉಪ ಚುನಾವಣೆಯಲ್ಲಿ ಜನತಾ ನ್ಯಾಯಾಲಯದಲ್ಲಿ ಈ ಶಾಸಕರ ವಿರುದ್ಧ ಮತ ಚಲಾಯಿಸಿ ಶಾಶ್ವತವಾಗಿ ಅನರ್ಹಗೊಳಿಸಬೇಕು ಎಂದು ಮನವಿ ಮಾಡಿದ ಅವರು ಅಥಣಿ ಮತಕ್ಷೇತ್ರದ ಕಾಂಗ್ರೆಸ್ ಅಭ್ಯಥರ್ಿ ಗಜಾನನ ಮಂಗಸೂಳಿ ಸಾಮಾಜಿಕ ಕಳಕಳಿಯುಳ್ಳವರಾಗಿದ್ದು, ಕಳೆದ 20 ಕ್ಕೂ ಹೆಚ್ಚು ವರ್ಷಗಳಿಂದ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತಾನು ಗುರುತಿಸಿಕೊಂಡಿದ್ದಾರೆ ಇಂತಹ ಅಭ್ಯಥರ್ಿಗೆ ಮತ ನೀಡಿ ಕಾಂಗ್ರೆಸ್ ಪಕ್ಷವನ್ನು ಬಲಪಡಿಸಬೇಕು ಎಂದು ಮನವಿ ಮಾಡಿದರು.
2018 ರ ವಿಧಾನ ಸಭಾ ಚುನಾವಣಾ ಪೂರ್ವದಲ್ಲಿ ನಮ್ಮ ಸರಕಾರ ಅಧಿಕಾರಕ್ಕೆ ಬಂದಲ್ಲಿ ಪರಿಶಿಷ್ಠ ಪಂಗಡದ ನಾಯಕ ಶ್ರೀರಾಮುಲು ಇವರನ್ನು ಉಪ ಮುಖ್ಯಮಂತ್ರಿ ಮಾಡುತ್ತೇವೆ ಎಂದು ಇದೇ ಯಡಿಯುರಪ್ಪ ಅನೇಕ ಪ್ರಚಾರ ಸಭೆಗಳಲ್ಲಿ ಹೇಳುತ್ತಲೇ ಬಂದರು ಆದರೆ ಈಗ ಬಿಜೆಪಿ ಸರಕಾರ ಬಂದಿದೆ ತಾವೇ ಮುಖ್ಯಮಂತ್ರಿಗಳಾಗಿದ್ದಾರೆ.
ಈಗೇಕೆ ಶ್ರೀರಾಮುಲು ಇವರನ್ನು ಉಪ ಮುಖ್ಯಮಂತ್ರಿ ಮಾಡಿಲ್ಲ ಎಂದು ಪ್ರಶ್ನಿಸಿದ ಅವರು ಯಡಿಯುರಪ್ಪನವರದು ಬರಿ ನಾಟಕ ಉಸವಳ್ಳಿಯಂತೆ ಬಣ್ಣ ಬದಾಲಾಯಿಸುತ್ತಾರೆ ಇಂತಹ ಯಡಿಯುರಪ್ಪನವರಿಗೆ ಬುದ್ಧಿ ಕಲಿಸಿ ಎಂದು ಹೇಳಿದರು.
ಸಂಸದ ಅನಂತಕುಮಾರ ಸಂವಿಧಾನ ಬದಲಿಸುತ್ತೇವೆ ಎಂದು ಹೇಳಿಕೆ ನೀಡಿದಾಗ ದಲಿತ ಮುಖಂಡರೆಂದು ಉಪ ಮುಖ್ಯಮಂತ್ರಿ ಸ್ಥಾನ ಅಲಕಂರಿಸಿರುವ ಗೋವಿಂದ ಕಾರಜೋಳ ಅನಂತಕುಮಾರ ಹೇಳಿಕೆಯನ್ನು ಖಂಡಿಸಲಿಲ್ಲ ಆದರೆ ಈಗ ಎಲ್ಲಿಲ್ಲದ ದಲಿತರ ಮೇಲೆ ಪ್ರೀತಿ ತೋರುತ್ತಿದ್ದಾರೆ ಎಂದ ಅವರು ಕಾರಜೋಳ ಇವರು ನಿಜವಾಗಿಯೂ ದಲಿತ ಮುಖಂಡರಾಗಿದ್ದಲ್ಲಿ ಬಿಜೆಪಿಯ ದಲಿತ ವಿರೋಧಿ ನೀತಿಗಳನ್ನು ಖಂಡಿಸಬೇಕು ಎಂದರು.
ಪತ್ರಿಕಾಗೋಷ್ಟಿಯಲ್ಲಿ ಕಾಂಗ್ರೆಸ್ ಮುಖಂಡ ಎಸ್.ಕೆ.ಬುಟಾಳಿ, ಬ್ಲಾಕ್ ಅಧ್ಯಕ್ಷ ಸಿದ್ಧಾರ್ಥ ಸಿಂಗೆ, ಮುಖಂಡರಾದ ಸಂಜೀವ ಕಾಂಬಳೆ, ಮಹಾಂತೇಶ ಬಾಡಗಿ, ಕಪಿಪ ಘಟಕಾಂಬಳೆ, ವಿಲೀನರಾಜ ಯಳಮೇಲಿ, ಮಯೂರ ಸಿಂಗೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.