ಕರೋನ ಗೆ ಸೋಲು ಖಚಿತ, ಭಾರತೀಯರಿಗೆ ಅಂತಿಮ ವಿಜಯ

ನವದೆಹಲಿ, ಏ 7,  ಭಾರತೀಯರಲ್ಲಿ ರೋಗ ನಿರೋಧಕ ಶಕ್ತಿ  ಹೆಚ್ಚಾಗಿದ್ದು  ಕರೋನ ಸೋಂಕಿನ ಹಾವಳಿಯಿಂದ ಲಾಕ್ ಡೌನ್ ಅವಧಿ ಮುಗಿಯುವ ಇದೆ   14 ವರೆಗೆ  ಹೆಚ್ಚೆಂದರೆ ಒಂದು ಸಾವಿರ ಜನರಿಗಿಂತ  ಹೆಚ್ಚು ಜನರು ಸಾಯುವುದಿಲ್ಲ ಸೋಂಕು  ಪ್ರಕರಣಗಳ   10 ಸಾವಿರವನ್ನೂ  ದಾಟುವುದಿಲ್ಲ   ಎಂದು ಕೆಲವು ಆರೋಗ್ಯ ವಲಯದ ಸಂಶೋಧನಾ ಪರಿಣಿತರೊಬ್ಬರು ಅಭಿಪ್ರಾಯಪಟ್ಟಿದ್ದಾರೆ .  ಲಾಕ್ ಕ್ ಡೌನ್ ಅವಧಿ  ಮುಗಿಯುವ ವೇಳೆ ಅಂದರೆ ಇದೆ 14ರ ವೇಳೆಗೆ ದೇಶದಲ್ಲಿ  ಒಂದು ಸಾವಿರಕ್ಕಿತ  ಹೆಚ್ಚು ಸಾವಿನ  ಪ್ರಕರಣ ವರದಿಯಾಗಲಾರದು  ಭಾರತೀಯರಲ್ಲಿ  ಅತಿ ಹೆಚ್ಚಿನ ರೋಗ ರೋಗ ನಿರೋಧಕ  ಶಕ್ತಿಯಿದೆ ಜನರೇ ಈ ಸಮರದಲ್ಲಿ   ಗೆಲ್ಲುತ್ತಾರೆ  ಕರೋನ ಮಾತ್ರ ಸೋಲುತ್ತದೆ ಎಂಬುದೂ  ಜಗತ್ತಿಗೆ ಮನವರಿಕೆಯಾಗಲಿದೆ  ಎಂದೂ  ಪಣಜಿ  ವಿಶ್ವವಿದ್ಯಾನಿಲಯದ ಬಯೋ ಕೆಮಿಸ್ಟ್ರಿ ವಿಬಾಗದ  ನಂದಕುಮಾರ್ ಕಾಮತ್ ಹೇಳಿದ್ದಾರೆ.
  ವೈರಸ್ಗಳ  ಹಾವಳಿ   ಭಾರತೀಯರಿಗೆ ಹೊಸ ವಿಚಾರವೇನಲ್ಲ ವೈರಸ್ ಗಳ   ದಾಳಿ, ಹಾವಳಿ  ನಿತ್ಯವೂ  ನಡೆದೇಯಿದೆ   ವೈರಸ್ ಗಳು ದಾಳಿ  ಮಾಡುತ್ತದೆ , ಅವುಗಳು   ಬರುತ್ತದೆ ಮತ್ತು ಹೋಗುತ್ತದೆ ಜನರ ಮೇಲೆ ಬಹಳ ಕೆಟ್ಟ ಪರಿಣಾಮ  ಬೀರುವುದಿಲ್ಲ ಎಂಬುದು ಅನುಭವಕ್ಕೆ ಬಂದಿರುವ  ಕಟು ಸತ್ಯ    ಎಂದಿದ್ದಾರೆ.  
ಭಾರತ,   ಆಫ್ರಿಕನ್ ದೇಶಗಳ ಮೇಲೆ  ಕರೋನ ಹೋರಾಟ,  ದಾಳಿ,  ಹಾವಳಿ ಆಟ್ಟಹಾಸ ಏನೇನೂ  ನಡೆಯುವುದಿಲ್ಲ ಇಲ್ಲಿ ಕರೋನ ಸೋಲುತ್ತದೆ ಜನರೇ ಗೆಲ್ಲುತ್ತಾರೆ  ಎಂದು ಖಚಿತವಾಗಿ ಹೇಳಿದ್ದಾರೆ  .  
ಬಹಳ ಸ್ವಚ್ಚತೆಯ ದೇಶಗಳಲ್ಲೇ  ಕರೋನ ಹಾವಳಿಗೆ  ಹೆಚ್ಚು ಜನರು ಸಾಯುತ್ತಿದ್ದಾರೆ ಎಂಬುದನ್ನು ಅವರು ಬೊಟ್ಟು ಮಾಡಿ ತೋರಿಸಿ ಹೇಳಿದ್ದಾರೆ.  ನಮ್ಮ ದೇಶದಲ್ಲಿ  ಕರೋನ ಅಟ್ಟಹಾಸ ನಡೆಯವುದಿಲ್ಲ,   ಜನರು ಕೇವಲ ಸಾಮಾಜಿಕ ಅಂತರ ಕಾಪಾಡಿಕೊಂಡರೆ ಸಾಕು ಹೆಚ್ಚು ಕಳವಳ, ಆತಂಕ  ಪಡಬೇಕಿಲ್ಲ ಎಂದು ಅವರು ಹೇಳಿದ್ದಾರೆ  ಭಾರತದಲ್ಲಿ ಇದುವರೆಗೆ 4,281 ಮಂದಿಗೆ ಕೋವಿಡ್-19 ಸೋಂಕು ತಗುಲಿದ್ದು, ಈವರಗೆ 138 ಜನ  ಮಂದಿ ಬಲಿಯಾಗಿದ್ದಾರೆ. ಮಹಾರಾಷ್ಟ್ರದಲ್ಲಿ ಇದುವರೆಗೆ 748 ಪ್ರಕರಣಗಳು ವರದಿಯಾಗಿದ್ದು, 45 ಮಂದಿ ಮೃತಪಟ್ಟಿದ್ದಾರೆ. ತಮಿಳುನಾಡಿನಲ್ಲಿ 571 ಪ್ರಕರಣಗಳು ಬೆಳಕಿಗೆ ಬಂದಿದ್ದು, ಐದು ಮಂದಿ ಬಲಿಯಾಗಿದ್ದಾರೆ.  ದೆಹಲಿ  ತೆಲಂಗಾಣದಲ್ಲಿ ತಲಾ ಏಳು ಮಂದಿ ಮೃತಪಟ್ಟಿದ್ದು, ಕ್ರಮವಾಗಿ 523 ಮತ್ತು 321 ಪ್ರಕರಣಗಳು ಬೆಳಕಿಗೆ ಬಂದಿವೆಯಾದರೂ ಕರೋನ ವಿರುದ್ದದ  ಹೋರಾಟದಲ್ಲಿ ಅಂತಿಮವಾಗಿ ದೇಶ ಗೆಲ್ಲಲಿದೆಯೇ ಹೊರತು  ಕರೋನ ವೈರಾಣು ಮಾತ್ರ ಸೋತು ಶರಣಾಗಲಿದೆ ಎಂದೂ ಕಾಮತ್ ಅವರು ಬಹಳ ಆತ್ಮ ವಿಶ್ವಾಸದಿಂದ ಸಾಮಾಜಿಕ ಜಾಲತಾಣದಲ್ಲಿ  ತಮ್ಮ ಸಂಶೋಧನೆಯ ಅನುಭವ ಹಂಚಿಕೊಂಡಿದ್ದಾರೆ.