ಕೊಪ್ಪಳ ೧೦: ರಾಜ್ಯದ ಹಂಪಿ,ಆನೆಗೊಂದಿ, ಬೇಲೂರು,ಹಳೆಬೀಡು ಮೊದಲಾದ ಐತಿಹಾಸಿಕ ಸ್ಥಳಗಳು ಸೇರಿದಂತೆ.ಕಲ್ಯಾಣ ಕರ್ನಾಟಕ ಭಾಗದ ಅನೇಕ ಸ್ಥಳಗಳನ್ನು ಮುಂದಿನ ಮೂರು ವರ್ಷಗಳಲ್ಲಿ ಸಮಗ್ರವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಕರ್ನಾಟಕ ಸರ್ಕಾರದ ಉಪಮುಖ್ಯಮಂತ್ರಿಗಳು, ಸಾರಿಗೆ ಮತ್ತು ಕೃಷಿ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮಣ ಸಂಗಪ್ಪ ಸವದಿ ಅವರು ಹೇಳಿದರು.
ಆನೆಗೊಂದಿಯ ಶ್ರೀಕೃಷ್ಣದೇವರಾಯ ಮುಖ್ಯವೇದಿಕೆಯಲ್ಲಿ ಇಂದು ಆನೆಗೊಂದಿ ಉತ್ಸವ 2020 ನ್ನು ವಿಧ್ಯುಕ್ತವಾಗಿ ಉದ್ಘಾಟಿಸಿ ಅವರು ಮಾತನಾಡಿದರು.
ಇಂಡೊನೇಷ್ಯಾ ,ಮಲೇಷ್ಯಾ, ಕಾಂಬೋಡಿಯಾ ಸರ್ಕಾರಗಳು ಖಾಸಗಿ ಸಹಭಾಗಿತ್ವದಲ್ಲಿ ಅಲ್ಲಿನ ಐತಿಹಾಸಿಕ ಸ್ಮಾರಕಗಳು ಹಾಗೂ ಪ್ರವಾಸಿ ತಾಣಗಳನ್ನು ಅಭಿವೃದ್ಧಿ ಪಡಿಸುತ್ತಿವೆ. ನಮ್ಮ ರಾಜ್ಯದಲ್ಲಿಯೂ ಅದರ ಉತ್ತಮ ಅಂಶಗಳನ್ನು ಅಳವಡಿಸಿಕೊಳ್ಳಬೇಕು.ಐತಿಹಾಸಿಕ ಸ್ಮಾರಕಗಳನ್ನು ನಾಶಮಾಡುವ ದುಷ್ಕಮರ್ಿಗಳ ವಿರುದ್ಧ ನಿದರ್ಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಸಂಸದ ಸಂಗಣ್ಣ ಕರಡಿ ಮಾತನಾಡಿ, ಕಂಪಿಲರಾಯ, ಕುಮಾರರಾಮ, ಹಕ್ಕ - ಬುಕ್ಕರು,ಶ್ರೀಕೃಷ್ಣದೇವರಾಯರ ಮೂಲಕ ಈ ನಾಡು ವಿಶ್ವದ ಗಮನ ಸೆಳೆದಿದೆ. ಹಂಪಿ, ಅನೆಗೊಂದಿಯ ಪಾರಂಪರಿಕ ಸ್ಮಾರಕಗಳ ರಕ್ಷಣೆಗೆ ರಾಜ್ಯ ಸಕರ್ಾರದಿಂದ ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸಿಕೊಡಬೇಕು.ಕೇಂದ್ರ ಸರ್ಕಾರ ಮಟ್ಟದಲ್ಲಿ ಅಗತ್ಯ ಸಹಕಾರ ನೀಡಲಾಗುವುದು.ಅಂಜನಾದ್ರಿ ಬೆಟ್ಟಕ್ಕೆ ರೋಪ್ ವೇ ನಿರ್ಮಾಣವಾಗಬೇಕು ಎಂದರು.
ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿ, ವಿಶ್ವಪರಂಪರೆಯ ತಾಣ, ವಿಜಯನಗರದ ಮಾತೃಸ್ಥಾನ ಆನೆಗೊಂದಿ, ರಾಮಾಯಣ ಕಾಲದಲ್ಲಿ ಇದು ವಾನರ ತಾಣವಾಗಿತ್ತು. ಹಲವಾರು ವೃಕ್ಷ,ಪಕ್ಷಿ, ಔಷಧೀಯ ಸಸ್ಯಗಳ ಪ್ರದೇಶವಾಗಿರುವ ಈ ಸ್ಥಳ , ಹನುಮನುದಿಸಿದ ನಾಡು ಎಂದು ಖ್ಯಾತಿ ಪಡೆದಿದೆ. ಇಲ್ಲಿನ ಇತಿಹಾಸದ ಪುನರ್ ಮನನ ಮಾಡಿಕೊಳ್ಳಲು ಕರ್ನಾಟಕ ಸರ್ಕಾರ ಅನುದಾನ ನೀಡಿ ಆನೆಗೊಂದಿ ಉತ್ಸವದ ಅದ್ದೂರಿ ಆಚರಣೆಗೆ ಕ್ರಮ ಕೈಗೊಂಡಿದೆ ಎಂದರು.
ಶಾಸಕ ಅಮರೇಗೌಡ ಪಾಟೀಲ ಬಯ್ಯಾಪುರ ಮಾತನಾಡಿ, ಉತ್ಸವ ಆಚರಣೆಗಳು ನಮ್ಮ ನಾಡು ಕಟ್ಟಿದ ಹಿರಿಯರು, ಪೂರ್ವಾಕರ ಸಂಸ್ಕಾರದ ಸ್ಮರಣೆಗೆ ಪೂರಕವಾಗಿವೆ. ಮಹರ್ಷಿ ವಾಲ್ಮೀಕಿ ರಚಿತ ರಾಮಾಯಣ ಹಲವಾರು ಮೌಲ್ಯಗಳನ್ನು ಮನುಕುಲಕ್ಕೆ ನೀಡಿದೆ. ನಮ್ಮ ಇತಿಹಾಸ ಅರಿಯಲು ಇಂತಹ ಉತ್ಸವಗಳಿಗೆ ಸಾರ್ವಜನಿಕರು,ಯುವಜನರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದರು.
ಜಿಪಂ ಅಧ್ಯಕ್ಷ ಹೆಚ್.ವಿಶ್ವನಾಥರೆಡ್ಡಿ, ಶಾಸಕ ಹಾಲಪ್ಪ ಆಚಾರ್, ಬಸವರಾಜ ದಢೇಸುಗೂರ, ತಾಪಂ ಅಧ್ಯಕ್ಷ ಮಲ್ಲಿಕಾರ್ಜುನಗೌಡ ಪೊಲೀಸ್ ಪಾಟೀಲ, ಜಿಪಂ ಸದಸ್ಯೆ ಜಿ.ಅನಿತಾ ಮಾರುತಿ, ತಾಪಂ ಸದಸ್ಯರನ್ನು ವೈ.ರಮೇಶ ಸಣಾಪೂರ, ಆನೆಗೊಂದಿ ಗ್ರಾಪಂ ಅಧ್ಯಕ್ಷೆ ಅಂಜನಾದೇವಿ, ವಿಜಯನಗರ ಅರಸು ವಂಶಸ್ಥ,ಮಾಜಿ ಸಚಿವ ಶ್ರೀರಂಗದೇವರಾಯಲು,ರಾಜಮಾತೆ ಚಂದ್ರಕಾಂತದೇವಿ, ಶ್ರೀಕೃಷ್ಣದೇವರಾಯ,ರಾಣಿ ರತ್ನಶ್ರೀರಾಯ , ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಎಸ್.ರಂಗಪ್ಪ, ಜಿಪಂ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ರಘುನಂದನ ಮೂತರ್ಿ,ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಸಂಗೀತ, ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಯಶಪಾಲ್, ಅಪರ ಜಿಲ್ಲಾಧಿಕಾರಿ ಎಂ.ಪಿ.ಮಾರುತಿ ಮತ್ತಿತರರು ವೇದಿಕೆಯಲ್ಲಿ ಇದ್ದರು.
ಜಿಲ್ಲಾಧಿಕಾರಿ ಪಿ.ಸುನೀಲಕುಮಾರ್ ಸ್ವಾಗತಿಸಿದರು.ಅಪಣರ್ಾ ಮತ್ತು ಶಂಕರ್ ಪ್ರಕಾಶ ನಿರೂಪಿಸಿದರು.ಗಂಗಾವತಿ ಶ್ರೀ ಪುಟ್ಟರಾಜ ಸಂಗೀತ ವಿದ್ಯಾಲಯದ ರಿಜ್ವಾನ್ ಎಫ್.ಮುದ್ದಾಬಳ್ಳಿ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಉಪವಿಭಾಗಾಧಿಕಾರಿ ಸಿ.ಡಿ.ಗೀತಾ ವಂದಿಸಿದರು.