‘ಪ್ರಣತೆ ಬೆಳಗುತ್ತದೆ...ಮನವು ಅರಳುತ್ತದೆ’: ಶಿವಾಚಾರ್ಯ ಸ್ವಾಮೀಜಿ

Deepotsava at the temple of Amminabavi village deity

ಧಾರವಾಡ 30 : ಕವಿದ ಕತ್ತಲೆಯ ತಡಕಾಡುವ ಸಂದರ್ಭದಲ್ಲಿ ಒಂದು ಪ್ರಣತೆ ಬೆಳಗುತ್ತದೆ; ಆಗ ಹರಡುವ ಬೆಳಕನು ಕಂಡು ಮನವು ಪ್ರಫುಲ್ಲತೆಯಿಂದ ಅರಳುತ್ತದೆ ಎಂದು ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಕಿರಿಯ ಶ್ರೀಗಳಾದ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು. 

ಅವರು ಇತ್ತೀಚೆಗೆ ತಾಲೂಕಿನ ಅಮ್ಮಿನಬಾವಿ ಗ್ರಾಮದೇವತೆಯ ದೇವಾಲಯದಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ದೀಪೋತ್ಸವ ಉದ್ಘಾಟಿಸಿ ಮಾತನಾಡುತ್ತಿದ್ದರು. ಜ್ಯೋತಿಯು ಜ್ಞಾನದ ಸಂಕೇತ. ಆಚರಿಸುವ ದೀಪೋತ್ಸವದ ಜೊತೆಗೆ ಎಲ್ಲರೂ ಹೊಸತು ಜ್ಞಾನಾರ್ಜನೆಯ ಸಂಕಲ್ಪ ಮಾಡಬೇಕು ಎಂದರು.  

ಅಮ್ಮಿನಬಾವಿ ಗ್ರಾಮದ ಎಲ್ಲಾ ಓಣಿಗಳ ಮತ್ತು ಹೊಸ ಬಡಾವಣೆಗಳ ಭಕ್ತ ಸಮೂಹ ದೇವಾಲಯದ ಆವರಣದಲ್ಲಿ ದೀಪಗಳನ್ನು ಬೆಳಗಿಸಿ ಭಕ್ತಿಯ ನಮನಗಳನ್ನು ಸಲ್ಲಿಸಿದರು. ದೀಪೋತ್ಸವದ ಅಂಗವಾಗಿ ಅನ್ನಸಂತರ್ಪಣೆ ಜರುಗಿತು.