ಕಾಗವಾಡ 26: ತಾಲೂಕಿನ ಮೋಳೆ ಗ್ರಾಮದ ಶ್ರೀಶೈಲ ಮಲ್ಲಿಕಾರ್ಜುನ ಮಂದಿರದಲ್ಲಿ ಸೋಮವಾರ ದಿ. 25 ರಂದು ಕಾರ್ತಿಕ ಮಾಸದ ಸೋಮವಾರ ದಿನ ದೀಪೋತ್ಸವ ಕಾರ್ಯಕ್ರಮ ಅತೀ ಸಂಭ್ರಮದಿಂದ ನಡೆಯಿತು.
ಪ್ರತಿ ವರ್ಷದಂತೆ ಈ ವರ್ಷವೂ ಸಹ ಗ್ರಾಮದ ಶ್ರೀ ಶ್ರೀಶೈಲ ಮಲ್ಲಿಕಾರ್ಜುನ ಮಂದಿರದಲ್ಲಿ ಕಾರ್ತಿಕ ಮಾಸದ ಸೋಮವಾರ ದಿನದಂದು ದೀಪೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಮೋಳೆ ಗ್ರಾಮದ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಮತ್ತು ಗ್ರಾಮಸ್ಥರು ಮಂದಿರಕ್ಕೆ ಆಗಮಿಸಿ, ದೀಪ ಬೆಳಗಿ, ಭಕ್ತಿ ತೋರಿದರು. ಭಕ್ತರ ದೀಪಗಳಿಂದ ಮಂದಿರವು ಕಂಗೋಳಿಸಿತು.
ಈ ಸಮಯದಲ್ಲಿ ಮಂದಿರ ಅರ್ಚಕ ಸಂಗಯ್ಯ ಮಠದ ಮಾತನಾಡಿ, ಅಂಧಕಾರದ ಕತ್ತಲೆಯನ್ನು ಹೋಗಲಾಡಿಸಿ ಜ್ಞಾನದ ಬೆಳಕು ಬೆಳಗುವ ಉದ್ದೇಶದಿಂದ ಈ ದೀಪೋತ್ಸವವನ್ನು ಪ್ರತಿ ವರ್ಷ ಆಚರಿಸಿಕೊಂಡು ಬರಲಾಗುತ್ತಿದೆ ಎಂದರು. ಇನ್ನೂ ಮಂದಿರ ಕಮೀಟಿಯ ಉಪಾಧ್ಯಕ್ಷ ರಾಯಪ್ಪ ಹಳಮನಿ ಮಾತನಾಡಿ ಈ ವರ್ಷದ ದೀಪೋತ್ಸವ ವಿಶೇಷವಾಗಿದ್ದು ನೂರಾರು ಭಕ್ತರು ಇದರಲ್ಲಿ ಪಾಲ್ಗೊಂಡಿರುವುದು ವಿಶೇಷವಾಗಿದೆ ಎಂದರು.
ಈ ಸಮಯದಲ್ಲಿ ಗ್ರಾಮ ಪಂಚಾಯತಿ ಸದಸ್ಯ ಬಸವರಾಜ ತೇಲಿ, ದುಂಡಪ್ಪ ಚಾಳೇಕರ, ಶಂಕರ ಹಿರೇಮಠ, ಮಿರಾಸಬ ನದಾಪ, ಸದಾಶಿವ ಐನಾಪೂರ, ಶ್ರೀಶೈಲ ತೇಲಿ, ಲಕ್ಷ್ಮಣ ನಿಮಗೋಜಿ, ಮಹಾದೇವ ಭಾವಿಕಟ್ಟಿ, ಮಲ್ಲಪ್ಪ ಬಡಿಗೇರ, ಗೀರೀಶ ನಿಂಗೋಜಿ, ಚನ್ನಪ್ಪ ಕೋಷ್ಠಿ, ಮೃತುಂಜಯ ಮಠದ, ಶ್ರೀಶೈಲ ಜಂಗಲಗಿ, ರಾಜು ಹಳ್ಳೋಳಿ, ಬಸವರಾಜ ಗುರ್ಕಿ, ಚನ್ನಪ್ಪ ಶಿಫೂರೆ, ಶಿವಾನಂದ ಸಂಭೋಜಿ ಸೇರಿದಂತೆ ಅನೇಕ ಮುಖಂಡರು, ಗ್ರಾಮಸ್ಥರು ಉಪಸ್ಥಿತರಿದ್ದರು.