ಬೆಂಗಳೂರು/ಮುಂಬೈ, ನ 12 : ಬಾಲಿವುಡ್ ನಟಿ, ಕನ್ನಡತಿ ದೀಪಿಕಾ ಪಡುಕೋಣೆಗೆ ಹುಶಾರಿಲ್ವಂತೆ. ಹೀಗಂತ ಅವರೇ ಹೇಳಿಕೊಂಡಿದ್ದಾರೆ. ಇತ್ತೀಚೆಗಷ್ಟೇ ತನ್ನ ಬೆಸ್ಟ್ ಫ್ರೆಂಡ್ ಮದುವೆಯಲ್ಲಿ ಪಾಲ್ಗೊಂಡಿದ್ದ ದೀಪಿಕಾ ವಿವಾಹ ಕಾರ್ಯಕ್ರಮಗಳಲ್ಲಿ ಪತಿ ರಣ್ವೀರ್ ಸಿಂಗ್ ಜೊತೆಗೆ ಸಿಕ್ಕಾಪಟ್ಟೆ ಎಂಜಾಯ್ ಮಾಡಿದ್ದರು ಹೀಗಾಗಿ ಆರೋಗ್ಯ ಕೊಂಚ ಏರುಪೇರಾಗಿದ್ದು, ಸುಸ್ತು ಮತ್ತು ಜ್ವರದಿಂದ ಬಳಲುತ್ತಿದ್ದಾರೆ. ಲೇಟೆಸ್ಟ್ ಇನ್ಸ್ಟಾಗ್ರಾಮ್ನಲ್ಲಿ ಅನಾರೋಗ್ಯದಿಂದ ಬಳಲುತ್ತಿರುವ ಫೋಟೊ ಹಾಕಿಕೊಂಡಿರುವ ದೀಪಿಕಾ, ಬೆಸ್ಟ್ ಫ್ರೆಂಡ್ ಮದುವೆಯಲ್ಲಿ ಅತಿಯಾಗಿ ಮಸ್ತಿ ಮಾಡಿದಾಗ.. ಎಂಬ ಕ್ಯಾಪ್ಷನ್ ಕೊಟ್ಟಿದ್ದಾರೆ. ಸುಸ್ತಾದಂತಿರುವ ಅವರ ಭಾವಚಿತ್ರವನ್ನು ನೋಡಿ ಬೇಗ ಹುಷಾರಾಗಿ ಅಂತ ಅಭಿಮಾನಿಗಳು ದೀಪಿಕಾ ಪಡುಕೋಣೆಗೆ ಹಾರೈಸುತ್ತಿದ್ದಾರೆ. ಇತ್ತೀಚೆಗಷ್ಟೆ ದೀಪಿಕಾ ಪಡುಕೋಣೆ ಗರ್ಭಣಿ ಎಂಬ ಗಾಳಿಸುದ್ದಿ ಬಾಲಿವುಡ್ ತುಂಬಾ ಹಬ್ಬಿತ್ತು. ಈ ಬಗ್ಗೆ ದೀಪಿಕಾ ಆಗಲಿ, ರಣ್ವೀರ್ ಸಿಂಗ್ ಆಗಲಿ ತುಟಿ ಬಿಚ್ಚಿಲ್ಲ. ಸದ್ಯ ದೀಪಿಕಾ ಪಡುಕೋಣೆ '83', 'ಚಪಕ್' ಮತ್ತು 'ಮಹಾಭಾರತ್' ಚಿತ್ರಗಳಲ್ಲಿ ಬಿಜಿಯಾಗಿದ್ದಾರೆ.