ದೀಪಿಕಾಗೆ ಸಲ್ಮಾನ್ ಜೊತೆ ನಟಿವಾಸೆ Deepika to Actress with Salman
Lokadrshan Daily
11/20/24, 2:30 PM ಪ್ರಕಟಿಸಲಾಗಿದೆ
ಮುಂಬೈ, ಜ. 8 ಬಾಲಿವುಡ್ ದಬಾಂಗ್ ಸ್ಟಾರ್ ಸಲ್ಮಾನ್ ಖಾನ್ ಅವರೊಂದಿಗೆ ನಟಿ ದೀಪಿಕಾ ಪಡುಕೋಣೆ ನಟಿಸುವ ಇಚ್ಛೆ ವ್ಯಕ್ತಪಡಿಸಿದ್ದಾರೆ.
ದೀಪಿಕಾ ಅಭಿನಯದ ಛಪಾಕ್ ಚಿತ್ರ ಇದೇ ತಿಂಗಳ 10ರಂದು ತೆರೆಕಾಣಲಿದೆ.
ಇದುವರೆಗೂ ಸಲ್ಮಾನ್ ಹಾಗೂ ದೀಪಿಕಾ ಜೋಡಿಯಲ್ಲಿ ಯಾವುದೇ ಚಿತ್ರ ಹೊರಬಂದಿಲ್ಲ. ಸಲ್ಮಾನ್ ಜೊತೆಗೆ ತಮಗೆ ನಟಿಸುವ ಆಸೆ ಇದೆಯಾ ? ಎಂದು ದೀಪಿಕಾಗೆ ಸುದ್ದಿಗಾರರು ಪ್ರಶ್ನಿಸಿದರು.
ಇದಕ್ಕುತ್ತರಿಸಿದ ದೀಪಿಕಾ, ನಮ್ಮ ಅಭಿಮಾನಿಗಳು ಈ ವಿಷಯದ ಕುರಿತು ತುಂಬಾ ಉತ್ಸಾಹಿತರಾಗಿರುತ್ತಾರೆ. ನಾವಿಬ್ಬರೂ ಒಟ್ಟಿಗೆ ನಟಿಸುತ್ತಿದ್ದೇವಾ? ಅಥವಾ ಒಟ್ಟಿಗೆ ಯಾವಾಗ ನಟಿಸುವ ಯೋಜನೆ ಇದೆ ಎಂದು. ಆದರೆ, ನನಗೆ ಸಲ್ಮಾನ್ ಅವರೊಂದಿಗೆ ಒಟ್ಟಿಗೆ ನಟಿಸುವ ಆಸೆ ಇದೆ. ಆದರೆ, ಒಂದು ಉತ್ತಮ ಚಿತ್ರದೊಂದಿಗೆ ಇಬ್ಬರ ಜೋಡಿಯಲ್ಲಿ ಚಿತ್ರ ಹೊರಬರುವುದು ಮಹತ್ವಪೂರ್ಣವಾದುದು. ನಾವು ಯಾವಾಗಲೂ ಸಲ್ಮಾನ್ ಅವರನ್ನು ವಿಭಿನ್ನ ಚಿತ್ರದಲ್ಲಿ ನೋಡಿದ್ದೇವೆ ಎಂದರು.
ನಾನು ಸಲ್ಮಾನ್ ಅವರು ಅಭಿನಯದ ಹಮ್ ದಿಲ್ ದೇ ಚುಕೆ ಸನಮ್ ಚಿತ್ರದ ದೊಡ್ಡ ಅಭಿಮಾನಿ. ಅಂತಹ ಪಾತ್ರದಲ್ಲೇ ಸಲ್ಮಾನ್ ಅವರನ್ನು ನೋಡಲು ಇಷ್ಟಪಡುತ್ತೇನೆ. ಸದ್ಯ ಇಬ್ಬರ ಒಟ್ಟಿಗೆ ನಟಿಸುವ ಚಿತ್ರ ಇನ್ನು ದೊರಕಿಲ್ಲ. ಆದರೆ, ಅವರೊಂದಿಗೆ ನಟಿಸಲು ನಾನು ಇಷ್ಟಪಡುತ್ತೇನೆ ಎಂದು ದೀಪಿಕಾ ಹೇಳಿಕೊಂಡಿದ್ದಾರೆ.