ದಾವೋಸ್ ವಿಶ್ವ ಆರ್ಥಿಕ ಶೃಂಗಸಭೆಯಲ್ಲಿ ದೀಪಿಕಾ ಪಡುಕೋಣೆಗೆ ಸನ್ಮಾನ

ನವದೆಹಲಿ, ಜ 19 :       ಸ್ವಿಟ್ಜರ್ ಲ್ಯಾಂಡ್  ನ   ದಾವೋಸ್  ನಲ್ಲಿ   ಸೋಮವಾರದಿಂದ ಆರಂಭಗೊಳ್ಳಲಿರುವ ವಿಶ್ವ ಆರ್ಥಿಕ ಶೃಂಗಸಭೆಯಲ್ಲಿ   ಬಾಲಿವುಡ್ ನಟಿ ದೀಪಿಕಾ ಪಡುಕೋಣೆ  ಸೇರಿದಂತೆ  ಹಲವು ಗಣ್ಯರನ್ನು   "ಅಸಾಧಾರಣ ಸಾಂಸ್ಕೃತಿಕ  ನಾಯಕರೆಂದು  ರೆಂದು  ಗೌರವಿಸಲಾಗುತ್ತದೆ.

ತಮ್ಮ  ಅಸಾಧಾರಣ   ಪ್ರಯತ್ನಗಳ   ಮೂಲಕ  ಜಗತ್ತಿಗೆ   ನೀಡಿರುವ  ಕೊಡುಗೆಗಾಗಿ  ನಟಿ  ದೀಪಿಕಾ ಪಡುಕೋಣೆ  ಹಾಗೂ ಇತರ ನಾಲ್ವರನ್ನು  ವಾರ್ಷಿಕ ಕ್ರಿಸ್ಟಲ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ  ಗೌರವಿಸಲಾಗುವುದು ಎಂದು  ಹೇಳಿಕೆಯಲ್ಲಿ ತಿಳಿಸಿದೆ.

ಮಾನಸಿಕ ಅಸ್ವಸ್ಥತೆಯ ಬಗ್ಗೆ   ಹರಡಿರುವ  ಕಳಂಕ ನಿವಾರಣೆಗೆ   ಕೊಡುಗೆ  ಹಾಗೂ ಆರೋಗ್ಯ ಕುರಿತ ಅಧಿವೇಶನದಲ್ಲಿ ದೀಪಿಕಾ ಪಡುಕೋಣೆ  ಪ್ರಮುಖ ಭಾಷಣಕಾರರ ಪೈಕಿ  ಒಬ್ಬರಾಗಿದ್ದಾರೆ. 

ಜನವರಿ 21 ಮಂಗಳವಾರ ವಿಶ್ವ ಆರೋಗ್ಯ ಸಂಸ್ಥೆಯ  ಮಹಾ ಪ್ರಧಾನ ಕಾರ್ಯದರ್ಷಿ  ಟೆಡ್ರೊಸ್ ಅಧಾನಮ್ ಘೆಬ್ರೆಯೆಸಸ್   ಪಾಲ್ಗೊಳ್ಳಲಿರುವ  ಕಾರ್ಯಕ್ರಮದಲ್ಲಿ   ಪಡುಕೋಣೆ   ವೇದಿಕೆ ಹಂಚಿಕೊಳ್ಳಲಿದ್ದಾರೆ.

ವಿಶ್ವ ಆರ್ಥಿಕ  ಶೃಂಗಸಭೆಯಲ್ಲಿ   'ಸುಸಂಬಂಧ ಮತ್ತು ಸುಸ್ಥಿರ ಜಗತ್ತು"   ವಿಷಯಗಳನ್ನು ಚರ್ಚಿಸಲು ಭಾರತದಿಂದ 100 ಕ್ಕೂ ಹೆಚ್ಚು ಸಿಇಒಗಳು  ಭಾಗವಹಿಸಲಿದ್ದಾರೆ.

ಭಾರತದ  ಮತ್ತೊಬ್ಬ   ಜನಪ್ರಿಯ ಅಧ್ಯಾತ್ಮಿಕ  ನಾಯಕ ಸದ್ಗುರು  ಶೃಂಗಸಭೆಯಲ್ಲಿ ಬೆಳಗಿನ  ಧ್ಯಾನ  ಅಧಿವೇಶನ  ನಡೆಸಿಕೊಡಲಿದ್ದಾರೆ. 

ಮಂಗಳವಾರ  ಅಮೆರಿಕಾ ಅಧ್ಯಕ್ಷ  ಡೊನಾಲ್ಡ್ ಟ್ರಂಪ್  ಸೇರಿ ಹಲವು ಜಾಗತಿಕ ನಾಯಕರು  ಶೃಂಗಸಭೆ ಉದ್ದೇಶಿಸಿ ಮಾತನಾಡಲಿದ್ದಾರೆ. 

"ವ್ಯೂಹಾತ್ಮಕ  ದೃಷ್ಟಿ ಕೋನ;  ಹಿಂದೂ ಮಹಾಸಾಗರ ರಿಮ್' ಅಧಿವೇಶನದಲ್ಲಿ ಕೇಂದ್ರ ವಾಣಿಜ್ಯ, ರೈಲ್ವೆ ಸಚಿವ ಪಿಯೂಷ್ ಗೋಯಲ್ ತಮ್ಮ  ಅಭಿಪ್ರಾಯ ಮಂಡಿಸಲಿದ್ದಾರೆ.  ಅವರು ಡಿಪಿ ವಲ್ರ್ಡ ಸಮೂಹ ಅಧ್ಯಕ್ಷ ಮತ್ತು ಸಿಇಒ ಸುಲ್ತಾನ್ ಅಹ್ಮದ್ ಬಿನ್ ಸುಲಾಯೆಮ್ ಅವರೊಂದಿಗೆ ವೇದಿಕೆಯನ್ನು ಹಂಚಿಕೊಳ್ಳಲಿದ್ದಾರೆ. 

ದಾವೋಸ್  ಪ್ರಣಾಳಿಕೆ  2020  ಭಾಗೀದಾರ ಬಂಡವಾಳವಾದಕ್ಕೆ  ಮುಂದಾಲೋಚನೆಯನ್ನು  ಒದಗಿಸಲಿದೆ. ಭ್ರಷ್ಟಾಚಾರ ಹಾಗೂ ಮಾನವ ಹಕ್ಕುಗಳ  ಬಗ್ಗೆ  ಶೂನ್ಯ  ಸಹಿಷ್ಣುತೆ ಸೇರಿದಂತೆ ಹಲವು   ಮಹತ್ವದ  ವಿಷಯಗಳನ್ನು  ಪ್ರಸ್ತಾಪಿಸಲಿದೆ. 

ಉದ್ಯಮ ವ್ಯವಹಾರ   ಪ್ರಸ್ತುತ   ಭಾಗೀದಾರ  ಬಂಡವಾಳವಾದವನ್ನು  ಸಂಪೂರ್ಣವಾಗಿ ಅಳವಡಿಸಿಕೊಳ್ಳಬೇಕಾಗಿದೆ, ಇದರರ್ಥ ಲಾಭವನ್ನು ಹೆಚ್ಚಿಸುವುದು ಮಾತ್ರವಲ್ಲ, ಈ ದಶಕದ ಪ್ರಮುಖ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರ ಹಾಗೂ ನಾಗರಿಕ ಸಮಾಜದ ಸಹಕಾರದೊಂದಿಗೆ   ಸಾಮಥ್ರ್ಯ ಮತ್ತು ಸಂಪನ್ಮೂಲಗಳನ್ನು ಬಳಸಿಕೊಳ್ಳುವುದಾಗಿದೆ. ಇದರಿಂದ ವಿಶ್ವಕ್ಕೆ   ಸುಸಂಬದ್ಧ ಮತ್ತು ಸುಸ್ಥಿರ   ನಿಶ್ಚಿತ ಕೊಡುಗೆ  ನೀಡಲು ಸಾಧ್ಯವಾಗಲಿದೆ ಎಂದು ವಿಶ್ವ ಆಥರ್ಿಕ  ಶೃಂಗಸಭೆಯ  ಸ್ಥಾಪಕ ಮತ್ತು ಕಾರ್ಯನಿರ್ವಾಹಕ ಅಧ್ಯಕ್ಷ ಕ್ಲಾಸ್ ಶ್ವಾಬ್ ಹೇಳಿದ್ದಾರೆ.