ಬಿನೋದಿನಿ ದಾಸಿ ಚಿತ್ರದಲ್ಲಿ ನಟಿಸಲು ದೀಪಿಕಾ ನಕಾರ

ಮುಂಬೈ, ಜ. 19 :     ಬಂಗಾಳಿ ಚಿತ್ರ ನಟಿ ಜೀವನಾಧಾರಿತ ಚಿತ್ರದಲ್ಲಿ ಅಭಿನಯಿಸಲು ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ನಿರಾಕರಿಸಿದ್ದಾರೆ.

ಬಾಲಿವುಡ್ ನಿರ್ದೇಶಕ ಪ್ರದೀಪ್ ಸರ್ಕಾರ್ ನಿರ್ದೇಶಿಸುತ್ತಿದ್ದ ಬಂಗಾಳಿ ನಟಿ-ಗಾಯಕಿ ಬಿನೋದಿನಿ ದಾಸಿ ಅವರ ಜೀವನಾಧಾರಿತ ಚಿತ್ರಕ್ಕೆ ಬಣ್ಣ ಹಚ್ಚಲು, ದೀಪಿಕಾ ಒಲ್ಲೆ ಎಂದಿದ್ದಾರೆ.

ರಂಗಭೂಮಿ  ನಾಯಕಿ- ಗಾಯಕಿಯಾಗಿದ್ದ ಬಿನೋದಿನಿ ಅವರನ್ನು ನಾಟಿ ಬಿನೋದಿನಿ ಎಂದು  ಕರೆಯಲಾಗುತ್ತಿತ್ತು. ಒಂದು ಕಾಲದಲ್ಲಿ ಕೊಲ್ಕತ್ತಾ ಚಿತ್ರರಂಗವನ್ನೇ ಇವರು ಆಳಿದ್ದರು. 

ಈ  ಚಿತ್ರದ ನಾಯಕಿಯ ಪಾತ್ರಕ್ಕಾಗಿ ಪ್ರದೀಪ್ ಅವರು ದೀಪಿಕಾ ಜೊತೆಗೆ ಮಾತುಕತೆ  ನಡೆಸಿದ್ದರು. ಅಲ್ಲದೇ, ಚಿತ್ರಕಥೆಯು ದೀಪಿಕಾ ಗೆ ಇಷ್ಟವಾಗಿತ್ತು. ಆದರೆ, ಗಂಭೀರ ವಿಷಯ  ಕುರಿತಾದ ಚಿತ್ರ ಹಾಗೂ ಎಮೋಷನಲ್ ಆಗುವಂತಹ ಚಿತ್ರದಲ್ಲಿ ನಟಿಸಲು ತಮಗೆ ಇಷ್ಟವಿಲ್ಲ  ದಿರುವುದರಿಂದ ಚಿತ್ರಕ್ಕೆ ಗುಡ್ ಬೈ ಹೇಳಿದ್ದಾರೆ ಎಂದು ದೀಪಿಕಾ ಅವರ ತಂಡ ತಿಳಿಸಿದೆ.

12  ವರ್ಷಕ್ಕೆ ಬಣ್ಣ ಹಚ್ಚಿದ ಬಿನೋದಿನಿ ಅವರು 23 ವರ್ಷದಲ್ಲಿ ಚಿತ್ರರಂಗ ತೊರೆದಿದ್ದರು.  ಅವರು ಆಮಾರಾ ಕಾಥಾ, ಆಮಾರಾ ಅಭಿನೇತ್ರಿ ಜೀಬನ್ ಎಂಬ ಎರಡು ಆತ್ಮಕಥೆ ಗಳನ್ನು  ಬರೆದಿದ್ದಾರೆ. 

ಅಲ್ಲದೇ, ವಿಭಿನ್ನ ನಾಟಕಗಳಲ್ಲಿ ಸುಮಾರು 80ಕ್ಕೂ ಅಧಿಕ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ.