ಧಾರವಾಡ 11 : ಅಂಕಣ ಬರಹ ಸರಳವಲ್ಲ ಈ ಕಠಿಣ ಕಥೆ ಸಿದ್ದಿಸಿಕೊಂಡ ಸುರೇಶ ಗುದಗನವರ ಅಂಕಣಗಳಿಂದ ವಿವಿಧ ಕ್ಷೇತ್ರದ ವ್ಯಕ್ತಿಗಳನ್ನು ಸಮಾಜಕ್ಕೆ ಪರಿಚಯಿಸುವ ಕಾರ್ಯ ಮಾಡಿದ್ದಾರೆ ಎಂದು ಹಿರಿಯ ಸಾಹಿತಿ ಡಾಽವೀರಣ್ಣ ರಾಜೂರ ಹೇಳಿದರು.
ಇಲ್ಲಿಯ ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರ್ಸ್ ಸಭಾಂಗಣದಲ್ಲಿ ಮಂಗಳವಾರ ನಡೆದ ಪ್ರೊ ಸುರೇಶ ಗುದಗನವರ ಅವರ ’ಸಾಹಿತ್ಯ ಸಡಗರ ಹಾಗೂ ’ಲೋಕಾನುಭೂತಿ’ ಕೃತಿಗಳ ಲೋಕಾರೆ್ಣ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವರ್ತಮಾನವನ್ನು ಬಿಟ್ಟ ಕಣ್ಣುಗಳಿಂದ ನೋಡುತ್ತ, ವಿದ್ಯಮಾನಗಳ ಆಳ ಅಗಲ ತಿಳಿದು, ವ್ಯಕ್ತಿಯ ಜೀವನ ಸಾಧನೆ ಅರಿತು ಕೆಲವೇ ಶಬ್ದಗಳಲ್ಲಿ ಕಟ್ಟಿಕೊಡುವುದು ಕಠಿಣ. ಇಂತಹ ಕಲೆಯನ್ನು ಸಿದ್ದಿಸಿಕೊಂಡ ಸುರೇಶ ಗುದಗನವರ ಸಂಕ್ಷಿಪ್ತತೆಯಲ್ಲಿ ಸಮಗ್ರತೆ ತಂದಿದ್ದಾರೆ. ಗುಣಗ್ರಾಹಕ ದೃಷ್ಟಿ ಜೋಡಿಸುವ ಜಾಣ್ಣೆ ಅವರಲ್ಲಿದೆ ಎಂದರು.
ಜನಪದ ತಜ್ಞ ಡಾಽಬಸವರಾಜ ಜಗಜಂಪಿ ಮಾತನಾಡಿ, ಎಲೆಮರೆ ಕಾಯಿಗಳಂತಿರುವ ಸದ್ದಿಲ್ಲದ ಸಾಧಕರನ್ನು ಅಂಕಣಗಳ ಮೂಲಕ ಪರಿಚಯಿಸುವ ಮಹತ್ಕಾರ್ಯ ಪ್ರೊ. ಸುರೇಶ ಗುದಗನವರ ಮಾಡುತ್ತಿದ್ದಾರೆ. ಯಾರನ್ನೂ ಹೊಗಳದೇ ತೆಗಳದೇ ವಸ್ತುನಿಷ್ಟವಾಗಿ ಬರೆದಿದ್ದು, ಸಾಮಾನ್ಯರಲ್ಲಿ ಅಸಾಮಾನ್ಯರ ವ್ಯಕ್ತಿ ಚಿತ್ರಗಳನ್ನು ವಿಶೇಷವಾಗಿ ಬರೆಯುವ ಇವರೊಬ್ಬ ವ್ಯಕ್ತಿಚಿತ್ರಗಳ ಚಿತ್ರಗುಪ್ತ. ಜ್ವಲಂತ ಸಮಸ್ಯೆಗಳನ್ನು ಕುರಿತು ಬರೆದು ಬೆಳಕು ಚೆಲ್ಲಿದ್ದಾರೆ. ಸುರೇಶ ಅವರ ಕೃತಿಗಳು ಆಕರ ಗ್ರಂಥಗಳಾಗಿವೆ ಯುವಕರು ಕೃತಿಗಳನ್ನು ಓದಿ ಸಾಧನೆ ಮಾಡಲು ಪ್ರೇರಣೆ ಪಡೆಯಬೇಕು ಎಂದರು.
ಕೃತಿ ಪರಿಚಯಿಸಿದ ಪ್ರೊ. ಶಶಿಧರ ತೋಡಕರ ಮಾತನಾಡಿ, ಘಟನೆಗಳನ್ನು ಸಂಘ-ಸಂಸ್ಥೆಗಳು ಸಾಧಕ ವ್ಯಕ್ತಿಗಳನ್ನು ಪರಿಚಯಿಸುತ್ತಿರುವುದು ಶ್ಲಾಘನೀಯ. ಆದರೆ ಅವಸರದಿಂದ ಕೆಲ ತಪ್ಪು ಮಾಹಿತಿನುಸುಳಿದ್ದು ತಪ್ಪು ಮಾಹಿತಿ ಹರಡುವುದನ್ನು ತಡೆಯಲು ಪ್ರಕಟ ಮಾಡುವ ಮುನ್ನ ಮತ್ತೊಮ್ಮೆ ಅವಲೋಕಿಸುವುದು ಸೂಕ್ತ ಎಂದು ಸಲಹೆ ನೀಡಿದರು. ಡಾ. ರಾಜಶ್ರೀ ಗುದಗನವರ, ಡಾ. ಎನ್. ಜಿ. ಮಹಾದೇವಪ್ಪ, ಡಾ.ಬಾಳಣ್ಣ ಶೀಗಿಹಳ್ಳಿ, ಡಾ.ಹೇಮಾವತಿ ಸೊನೊಳ್ಳಿ, ಹರ್ಷ ಡಂಬಳ, ಡಾ.ಪಿ.ಜಿ.ಕೆಂಪಣ್ಣವರ, ನರಸಿಂಹ ಪರಾಂಜಪೆ, ಡಾ.ಮೃತ್ಯುಂಜಯ ಶೆಟ್ಟರ, ಡಾ.ಶಾಂತಿನಾಥ ದಿಬ್ಬದ, ಡಾ.ಶಶಿಧರ ನರೇಂದ್ರ, ಡಾ.ಶಾಂತಾರಾಮ ಹೆಗಡೆ, ಡಾ.ರತ್ನಪ್ರಭಾ ಕಡಪಟ್ಟಿ, ಶಂಕರ ಕೆಂಗಾನೂರ ಮತ್ತು ಲಯನ್ಸ್ ಸದಸ್ಯರು ಇದ್ದರು. ಡಾ.ಆರಿ್ಬ.ಚಿಲಮಿ ಸ್ವಾಗತಿಸಿದರು. ಡಾ.ರುದ್ರೇಶ ಮೇಟಿ ನಿರೂಪಿಸಿದರು. ಡಾ.ನಾಗರಾಜ ಗುದಗನವರ ವಂದಿಸಿದರು.