ಶ್ರೀನಗರ, ಫೆ 4 ,ಭೂಮಿಯ ಮೇಲಿನ ಸ್ವರ್ಗ ಎಂದೇ ಹೆಸರುವಾಸಿ, ಚಿರಪರಿಚಿತವಾದ ಕಣಿವೆ ರಾಜ್ಯ ಕಾಶ್ಮೀರಕ್ಕೆ ಬರುವ ಪ್ರವಾಸಿಗರ ಸಂಖ್ಯೆಯಲ್ಲಿ ಭಾರಿ ಮುಖವಾಗಿದ್ದು, ಪರಿಣಾಮ ಭಾರೀ ಪ್ರಮಾಣದ ಉದ್ಯೋಗ, ಆದಾಯ ನಷ್ಟ ಸಂಭವಿಸಿದೆ ಎಂದು ಐಎಸ್ ವರದಿ ಹೇಳಿದೆ. 370ನೇ ವಿಧಿಯನ್ನು ರದ್ದು ಮಾಡಿ, ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿದ ನಂತರ ಪ್ರವಾಸೋದ್ಯಮಕ್ಕೆ ಭಾರಿ ಹೊಡೆತ, ಹಿನ್ನಡೆಯಾಗಿದೆ ಎನ್ನಲಾಗಿದೆ.ಇದರ ಪರಿಣಾಮ ಸ್ಥಳೀಯರಿಗೆ ಉದ್ಯೋಗ ಸೇರಿದಂತೆ ಅನೇಕ ರೀತಿಯ ಆರ್ಥಿಕ ಸಮಸ್ಯೆಗಳು ತಲೆದೋರಿವೆ, ಪ್ರವಾಸೋದ್ಯಮ ಕುಸಿತದಿಂದ ಹೆಚ್ಚಿನ ಉದ್ಯೋಗ ಮತ್ತು ಆದಾಯಕ್ಕೂ ನಷ್ವಾಗಿದೆ. ಕಾಶ್ಮೀರ ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾಗಿದೆ ರಾಜ್ಯದ ಪ್ರಮುಖ ಆದಾಯ ಇದನ್ನೆ ಅವಲಂಭಿಸಿದೆ. ಆದರೆ ಕಳದೆ 2018ರ ಅಗಸ್ಟ್-ಡಿಸೆಂಬರ್ ತಿಂಗಳಲ್ಲಿ ಭಾರೀ ಸಂಖ್ಯೆಯ ಪ್ರವಾಸಿಗರು ಭೇಟಿ ನೀಡಿದ್ದರು ಎಂದೂ ವರದಿ ಹೇಳಿದೆ.