ಗಣರಾಜ್ಯೋತ್ಸವವನ್ನು ತಾ. ಕ್ರೀಡಾಂಗಣದಲ್ಲಿ ಆಚರಿಸಲು ನಿರ್ಧಾರ

ಗಣರಾಜ್ಯೋತ್ಸವವನ್ನು ತಾ. ಕ್ರೀಡಾಂಗಣದಲ್ಲಿ ಆಚರಿಸಲು ನಿರ್ಧಾರ Decision to celebrate Republic Day at Taluk. Stadium

ರಾಯಬಾಗ, 09 : ಈ ಬಾರಿ ಗಣರಾಜ್ಯೋತ್ಸವ ದಿನವನ್ನು ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಅದ್ದೂರಿಯಿಂದ ಆಚರಿಸಲು ನಿರ್ಧರಿಸಲಾಗಿದೆ ಎಂದು ತಹಶೀಲ್ದಾರ ಮಹಾದೇವ ಸನಮುರಿ ಹೇಳಿದರು. 

ಶುಕ್ರವಾರ ಪಟ್ಟಣದ ತಹಶೀಲ್ದಾರ ಕಚೇರಿಯಲ್ಲಿ 77ನೇ ಗಣರಾಜ್ಯೋತ್ಸವ ಆಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ಅಂದು ಬೆಳ್ಳಿಗ್ಗೆ ತಾಲೂಕಾ ಮಟ್ಟದ ಎಲ್ಲ ಕಚೇರಿಗಳಲ್ಲಿ ಧ್ವಜಾರೋಹಣ ನೆರವೇರಿಸಿ, ನಂತರ ತಾಲೂಕಾ ಕ್ರೀಡಾಂಗಣದಲ್ಲಿ ನಡೆಯುವ ಗಣರಾಜ್ಯೋತ್ಸವ ಸಮಾರಂಭದಲ್ಲಿ ಎಲ್ಲ ತಾಲೂಕಾ ಅನುಷ್ಠಾನಾಧಿಕಾರಿಗಳು ಕಡ್ಡಾಯವಾಗಿ ಹಾಜರಿರಬೇಕು, ಪಟ್ಟಣದ ಎಲ್ಲ ಶಾಲೆಗಳ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಬಿಇಒ ಅವರು ನೋಡಿಕೊಳ್ಳಬೇಕೆಂದು ತಿಳಿಸಿದರು. 

 ಗಣರಾಜ್ಯೋತ್ಸವ ಸಮಾರಂಭಕ್ಕೆ ಗೈರು ಹಾಜರಾದ ಅಧಿಕಾರಿಗಳ ವಿರುದ್ಧ ಹಾಗೂ ಎಲ್ಲ ಸಭೆಗಳಿಗೆ ಗೈರು ಇರುವ ರಾಯಬಾಗ ಸಾರಿಗೆ ಘಟಕದ ವ್ಯವಸ್ಥಾಪಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ವಿವಿಧ ಸಂಘಟನೆಯ ಮುಖಂಡರು ಒತ್ತಾಯಿಸಿದರು.   

ಇದೇ ಸಭೆಯಲ್ಲಿ ಶಿವಯೋಗಿ ಸಿದ್ಧರಾಮ, ಮಹಾಯೋಗಿ ವೇಮನ, ಅಂಬಿಗರ ಚೌಡಯ್ಯ, ಸವಿತಾ ಮಹರ್ಷಿ ಮತ್ತು ಮಡಿವಾಳ ಮಾಚಯ್ಯ ಅವರ ಜಯಂತಿಗಳನ್ನು ತಾಲೂಕಾ ಆಡಳಿತದಿಂದ ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ. ಮತ್ತು ಎಲ್ಲ ಗ್ರಾ.ಪಂ. ಹಾಗೂ ತಾಲೂಕಾ ಅಧಿಕಾರಿಗಳು ತಮ್ಮ ತಾಲೂಕಾ ಕಚೇರಿಗಳಲ್ಲಿ ಕಡ್ಡಾಯವಾಗಿ ಈ ಎಲ್ಲ ಜಯಂತಿಗಳನ್ನು ಆಚರಿಸಬೇಕೆಂದು ತಿಳಿಸಿದರು. 

ಸಭೆಯಲ್ಲಿ ಸಿಪಿಐ ಎಮ್‌.ಎಮ್‌.ಡಪ್ಪಿನ, ಕೃಷಿ ಅಧಿಕಾರಿ ವಿನೋದ ಮಾವರಕರ, ಡಾ.ಎಸ್‌.ಎಮ್‌.ಪಾಟೀಲ, ಆರಿ​‍್ಬ.ಮನುವಡ್ಡರ, ಸುಭಾಷ ಭಜಂತ್ರಿ, ಎಮ್‌.ಆರ್‌.ಯಡನಟ್ಟಿ, ಎಚ್‌.ಎಲ್‌.ಪೂಜಾರಿ, ವೈ.ಎಸ್‌.ಸನಮನಿ, ಭಾರತಿ ಕಾಂಬಳೆ, ಚೈತ್ರಾಂಜಲಿ ಭೊಸಲೆ, ವಿಶ್ವನಾಥ ಹಾರೂಗೇರಿ, ಡಾ.ಸಚಿವ ಸೌಂದಲಗಿ, ವಿನಾಯಕ ಭಾಟೆ, ಎಸ್‌.ಬಿ.ಕದಮ, ವಿವಿಧ ಸಂಘಟನೆ ಮುಖಂಡರಾದ ಅನೀಲ ಶೆಟ್ಟಿ, ದೀಲಿಪ ಪಾಯನ್ನವರ, ರಾಕೇಶ ಅವಳೆ, ಗಜಾನನ ಮಾಳಿ, ಉತ್ತಮ ಕಾಂಬಳೆ, ಇರ್ಫಾನ ತಾಂಬೋಳೆ, ಅನೀಲ ಕೋರವಿ ಸೇರಿ ಅನೇಕರು ಇದ್ದರು.