ನವದೆಹಲಿ, ಅ.12- ನ್ಯಾಯಾಲಯಗಳಲ್ಲಿ ಬಾಕಿ ಇರುವ ಅಸಂಖ್ಯಾತ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಗೊಳಿಸಲು ಮುಂದಾಗಿರುವ ಸುಪ್ರೀಂಕೋಟರ್್ ಮುಖ್ಯ ನ್ಯಾಯಮೂತರ್ಿ ರಂಜನ್ ಗೊಗಯ್, ಕೆಲಸದ ದಿನಗಳಲ್ಲಿ ನ್ಯಾಯಾಧೀಶರ ರಜೆಗಳ ನಿಷೇಧಕ್ಕೆ ನಿರ್ಧರಿಸಿದ್ದಾರೆ. ಇದರೊಂದಿಗೆ ಸುಪ್ರೀಂಕೋಟರ್್, ದೇಶದ ಎಲ್ಲ ಹೈಕೋಟರ್್ಗಳು ಮತ್ತು ಅಧೀನ ನ್ಯಾಯಾಲಯಗಳ ನ್ಯಾಯಾಧೀಶರಿಗೆ ಇನ್ನು ಮುಂದೆ ಅನಗತ್ಯ ರಜೆ ಸೌಲಭ್ಯಗಳಿಗೆ ಕತ್ತರಿ ಬೀಳಲಿದೆ.
ಒಬ್ಬರಿಗಿಂತ ಹೆಚ್ಚು ನ್ಯಾಯಾಧೀಶರು ತೀಪರ್ು ನೀಡುವ ಪ್ರಕರಣಗಳಲ್ಲಿ ನ್ಯಾಯಮೂತರ್ಿಯೊಬ್ಬರ ಗೈರು ಹಾಜರಿ ಅಥವಾ ರಜೆಯಿಂದ ವಿಚಾರಣೆಗೆ ಅಡ್ಡಿಯಾಗುವುದನ್ನು ತಪ್ಪಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗುತ್ತಿದೆ.
ಕೋಟರ್್ಗಳಲ್ಲಿ ಇತ್ಯರ್ಥವಾಗದೇ ಬಾಕಿ ಉಳಿದಿರುವ ಬೃಹತ್ ಸಂಖ್ಯೆಯ ಪ್ರಕರಣಗಳನ್ನು ಕ್ಷಿಪ್ರವಾಗಿ ಬಗೆಹರಿಸಲು ಕೆಲಸದ ದಿನಗಳಲ್ಲಿ ನ್ಯಾಯಾಧೀಶರು ರಜೆ ಪಡೆಯುವುದಕ್ಕೆ ಕೊಕ್ಕೆ ಹಾಕುವ ರೆಜೆ ಇಲ್ಲ ಎಂಬ ಹೊಸ ಸೂತ್ರವನ್ನು ಜಾರಿಗೊಳಿಸುತ್ತಿದ್ದಾರೆ.
ತುತರ್ು ಪರಿಸ್ಥಿತಿಗಳನ್ನು ಹೊರತುಪಡಿಸಿ, ಕೆಲಸದ ದಿನಗಳಲ್ಲಿ ರಜೆ ಪಡೆಯುವುದನ್ನು ನಿಷೇಧಿಸಿರುವ ಸಿಜೆಐ, ಹೈಕೋಟರ್್ ನ್ಯಾಯಾಧೀಶರು ಅಥವಾ ಅಧೀನ ನ್ಯಾಯಾಲಯಗಳ ನ್ಯಾಯಾಂಗ ಅಧಿಕಾರಿಗಳು ವಕರ್ಿಂಗ್ ಡೇಗಳಲ್ಲಿ ಲೀವ್ ಪಡೆಯುವುದಕ್ಕೆ ಕಟ್ಟುನಿಟ್ಟಿನ ನಿರ್ಬಂಧ ಹೇರಲಿದ್ದಾರೆ.
ಕೋಟರ್್ ಕೆಲಸದ ದಿನಗಳಲ್ಲಿ ನ್ಯಾಯಮೂತರ್ಿಗಳು ರಜೆ ಪ್ರವಾಸ ವಿನಾಯಿತಿ(ಲೀವ್ ಟ್ರಾವಲ್ ಕನ್ಸಿಷನ್ ಅಥವಾ ಎಲ್ಟಿಸಿ) ಪಡೆಯುವುದಕ್ಕೂ ಸಹ ಮು.ನ್ಯಾ.ಗೊಗಯ್ ಕಡಿವಾಣ ಹಾಕಿದ್ದಾರೆ.
ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸದ ಹಾಗೂ ತಪ್ಪಿತಸ್ಥ ಉನ್ನತಾಧಿಕಾರಿಗಳಿಂದ ನ್ಯಾಯಾಂಗ ಕಾರ್ಯಗಳನ್ನು ಹಿಂದಕ್ಕೆ ಪಡೆದು ದಕ್ಷ ಮತ್ತು ಸಮರ್ಥವಾಗಿ ಕೆಲಸ ಮಾಡುವವರಿಗೆ ಅವುಗಳ ಹೊಣೆಯನ್ನು ವಗರ್ಾಯಿಸುವಂತೆಯೂ ಸಿ???ೆ ದೇಶದ ಎಲ್ಲ ಹೈಕೋಟರ್್ಗಳ ಮುಖ್ಯ ನ್ಯಾಯಧೀಶರಿಗೂ ಸ್ಪಷ್ಟ ನಿದರ್ೇಶನ ನೀಡಿದ್ದಾರೆ.
ರಂಜನ್ ಗೊಗಯ್ ಅವರು ಅ.3ರಂದು ಭಾರತದ ಮುಖ್ಯ ನ್ಯಾಯಮೂತರ್ಿಯಾಗಿ ಪ್ರಮಾಣ ಸ್ವೀಕರಿಸಿದ ನಂತರ ಬಾಕಿ ಉಳಿದಿರುವ ಪ್ರಕರಣ ತ್ವರಿತ ಇತ್ಯರ್ಥಕ್ಕಾಗಿ ಕೆಲವು ಮಾನದಂಡಗಳನ್ನು ಅನುಸರಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳುವುದಾಗಿ ತಿಳಿಸಿದ್ದರು.
ಸುಪ್ರೀಂಕೋಟರ್್, ಹೈಕೋಟರ್್ಗಳು, ಅಧೀನ ನ್ಯಾಯಾಲಯಗಳು ಮತ್ತು ವಿಚಾರಣಾ ನ್ಯಾಯಾಲಯಗಳಲ್ಲಿ ಬಾಕಿ ಇರುವ ಮೂರು ಕೋಟಿಗಳಿಗೂ ಅಧಿಕ ಪ್ರಕರಣಗಳ ಹೊರೆ ಇಳಿಸಲು ಹೊಸ ವ್ಯವಸ್ಥೆಯಲ್ಲಿ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವುದಾಗಿ ರಂಜನ್ ಗೊಗಯ್ ಹೇಳಿದ್ದರು.
ಇದಾದ ಒಂದು ವಾರದಲ್ಲೇ ಅವರು ದೇಶದ ಪ್ರತಿಯೊಂದು ಹೈಕೋಟರ್್ನ ಮುಖ್ಯ ನ್ಯಾಯಮೂತರ್ಿಗಳು ಹಾಗೂ ಅತ್ಯಂತ ಹಿರಿಯ ನ್ಯಾಯಾಧೀಶರೊಂದಿಗೆ ವಿಡಿಯೋ ಕಾನ್ಫೆರನ್ಸ್ ಮೂಲಕ ಸಂವಾದ ನಡೆಸಿ ಪ್ರಕರಣಗಳ ತ್ವರಿತ ವಿಲೇವಾರಿ ಸೇರಿದಂತೆ ಕೆಲವು ಸುಧಾರಣೆಗಳಿಗಾಗಿ ಬಲವಾದ ಸೂತ್ರವನ್ನು ಪ್ರಸ್ತಾಪಿಸಿದರು. ಅವುಗಳನ್ನು ಹಂತಹಂತವಾಗಿ ಜಾರಿಗೊಳಿಸಲೂ ಸಿಜೆಐ ಕಾಯರ್ೊನ್ಮುಖರಾಗಿದ್ದಾರೆ.
ತಾವು ಜಾರಿಗೊಳಿಸಲಿರುವ ನಿಯಮ ಮತ್ತು ಸೂತ್ರಗಳಿಗೆ ಬದ್ಧರಾಗದೇ ಇರುವ ನ್ಯಾಯಾಧೀಶರಿಗೆ ರಂಜನ್ ಗೊಗಯ್ ಬಿಸಿ ಮುಟ್ಟಿಸಿದ್ದಾರೆ. ಹೊಸ ಕಾರ್ಯ ಶಿಸ್ತು ಮತ್ತು ಸುಧಾರಣೆ ನಿಯಮಗಳನ್ನು ಪಾಲಿಸದ ನ್ಯಾಯಾಂಗ ಅಧಿಕಾರಿಗಳ ಬಗ್ಗೆ ತಕ್ಷಣ ತಮಗೆ ಮಾಹಿತಿ ನೀಡುವಂತೆಯೂ ಅವರು ದೇಶ ನ್ಯಾಯಾಲಯಗಳ ಮುಖ್ಯ ನ್ಯಾಯಮೂತರ್ಿಗಳಿಗೆ ಸೂಚನೆ ನೀಡಿದ್ದಾರೆ. ಅಂಥವರ ವಿರುದ್ಧ ಸುಪ್ರೀಂಕೋಟರ್್ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಿದೆ ಎಂದೂ ಅವರು ಎಚ್ಚರಿಕೆ ನೀಡಿದ್ದಾರೆ.
ಕರ್ತವ್ಯದ ವೇಳೆಯಲ್ಲಿ ವಿಚಾರಗೋಷ್ಠಿಗಳು, ಸಮಾವೇಶಗಳು ಅಥವಾ ಸಕರ್ಾರಿ ಕಾರ್ಯಕ್ರಮಗಳಲ್ಲಿ ಹಾಜರಾಗುವ ನೆಪದಲ್ಲಿ ಪ್ರಕರಣಗಳ ವಿಚಾರಣೆಗೆ ಅಡ್ಡಿಯಾಗುತ್ತಿರುವ ವಿದ್ಯಮಾನಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಗೊಗಯ್, ಇಂಥ ಸಂದರ್ಭಗಳಲ್ಲಿ ವಿಚಾರಣೆ ಪ್ರಕ್ರಿಯೆಗೆ ಅಡ್ಡಿಯಾಗದಂತೆ ಕ್ರಮಗಳನ್ನು ಕೈಗೊಳ್ಳಬೇಕು ಅಥವಾ ಪಯರ್ಾಯ ವ್ಯವಸ್ಥೆ ಮಾಡಬೇಕೆಂದೂ ಸೂಚಿಸಿದ್ದಾರೆ.
ಪ್ರಕರಣ ಕಡತಗಳ ವಿಷಯದಲ್ಲಿ ಅತ್ಯಂತ ಕಟ್ಟುನಿಟ್ಟಾಗಿರುವ ಸಿಜೆಐ, ವಾಸ್ತವ ಸಂಗತಿಗಳನ್ನು ಹೊರತು ಪಡಿಸಿ ಕಪೋಲಕಲ್ಪಿತ ಕಥೆಗಳನ್ನು ಕಟ್ಟದಂತೆಯೂ ವಕೀಲರಿಗೆ ಅವರು ಸ್ಪಷ್ಟ ಸೂಚನೆ ನೀಡಿದ್ಧಾರೆ.