ತಾಲೂಕಾ ಆಡಳಿತದಿಂದ ಅದ್ಧೂರಿ ಗಣರಾಜ್ಯೋತ್ಸವ ಆಚರಣೆಗೆ ನಿರ್ಧಾರ

ಗುಳೇದಗುಡ್ಡ21: ತಾಲೂಕು ಆಡಳಿತ ಸೇರಿದಂತೆ ತಾಲೂಕಿನ ಎಲ್ಲ ರಿಸರ್ಕಾರಿ  ಕಚೇರಿಗಳ ಆಶ್ರಯದಲ್ಲಿ ಗುಳೇದಗುಡ್ಡ ತಾಲೂಕು ಕೇಂದ್ರವಾದ ಬಳಿಕ ಪ್ರಥಮಬಾರಿಗೆ  ಜ.26ರ ಗಣರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲು ತಹಸೀಲ್ದಾರ ಜಿ.ಎಂ.ಕುಲಕರ್ಣಿ  ಅವರ ಅಧ್ಯಕ್ಷತೆಯಲ್ಲಿ ಸೋಮವಾರ ಜರುಗಿದ  ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಯಿತು. 

     ಅವರು ಪಟ್ಟಣದ ತಹಸೀಲ್ದಾರ ಕಚೇರಿಯಲ್ಲಿ ನಡೆದ ಗಣರಾಜ್ಯೋತ್ಸವದ ಪೂರ್ವಭಾವಿ ಸಭೆಯಲ್ಲಿ ತಹಶೀಲ್ದಾರ ಜಿ.ಎಂ.ಕುಲಕರ್ಣಿ  ಮಾತನಾಡಿ, ಗುಳೇದಗುಡ್ಡ ನೂತನ ತಾಲೂಕು ಕೇಂದ್ರವಾಗಿ ರಚನೆಗೊಂಡಿದ್ದು, ತಾಲೂಕು ಧ್ವಜಾರೋಹಣವನ್ನು ಈ ಬಾರಿ ಅದ್ಧೂರಿಯಾಗಿ ಆಚರಿಸಲು ತಿಮರ್ಾನಿಸಲಾಗಿದೆ. ಪಟ್ಟಣದ ಬಾಲಕರ ಸರಕಾರಿ ಪಪೂ ಮಹಾವಿದ್ಯಾಲಯದ ಮೈದಾನದಲ್ಲಿ ತಾಲೂಕು ಆಡಳಿತದಿಂದ ಬೆಳಿಗ್ಗೆ 9:30ಕ್ಕೆ ಧ್ವಜಾರೋಹಣ ನಡೆಯಲಿದೆ ಎಂದು ಹೇಳಿದರು. 

     ಧ್ವಜಾರೋಹಣದಲ್ಲಿ ಪಟ್ಟಣದ ಎಲ್ಲ ಶಾಲಾ ಕಾಲೇಜುಗಳ ಸುಮಾರು 2 ಸಾವಿರ ವಿದ್ಯಾರ್ಥಿಗಳು  ಪಾಲ್ಗೊಳ್ಳುವ ನೀರಿಕ್ಷೆಯಿದೆ. ಸ್ಥಬ್ದ ಚಿತ್ರಗಳ ಮೆರವಣಿಗೆ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ಸರ್ಕಾರಿ ಕಚೇರಿ ಅಧಿಕಾರಿಗಳು, ಸಿಬ್ಬಂದಿಗಳು ಪಾಲ್ಗೊಳ್ಳಬೇಕು. ಕಾರ್ಯಕ್ರಮಕ್ಕೆ ಬರುವ ಶಾಲಾ ಕಾಲೇಜು ಮಕ್ಕಳಿಗೆ ಅಲ್ಪೋಹಾರದ ವ್ಯವಸ್ಥೆ ಮಾಡಲಾಗಿದೆ. ಐದು ಶಾಲೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಹೇಳಿದರು. 

     ಪುರಸಭೆ ಮುಖ್ಯಾಧಿಕಾರಿ ರವೀಂದ್ರನಾಥ  ಅಂಗಡಿ ಮಾತನಾಡಿ, ಪುರಸಭೆ ವತಿಯಿಂದ ಧ್ವಜಾರೋಹಣ ನಡೆಯುವ ಕಾಲೇಜಿನ ಆವರಣವನ್ನು ಸ್ವಚ್ಛಗೊಳಿಸಿ, ನೀರಿನ ವ್ಯವಸ್ಥೆ ಸೇರಿದಂತೆ ಅಗತ್ಯ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಹೇಳಿದರು. 

     ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ವಿನೋದ ಮದ್ದಾನಿ, ಸಂತೋಷ ನಾಯನೇಗಲಿ, ಕೃಷಿ ಇಲಾಖೆಯ ತಾಲೂಕು ಅಧಿಕಾರಿ ಆನಂದ ಗೌಡರ, ಹೆಸ್ಕಾಂನ ಎಸ್ಓ ಬಸವರಾಜ ಬಿದರಿಕರ, ಕಂದಾಯ ನೀರಿಕ್ಷಕ ಎಂ.ಎಸ್.ಅಂಗಡಿ, ಪ್ರಾಥಮಿಕಶಾಲಾ ಸಿಆರ್ಸಿ ಉಂಕಿ, ಪುರಸಭೆ ವ್ಯವಸ್ಥಾಪಕ ರಮೇಶ ಪದಕಿ, ಬಾಲಕರ ಪಪೂ ಕಾಲೇಜಿನ ಪ್ರಾಚಾರ್ಯ ವಿಠ್ಠಲ ಕಳಸಾ, ಬಾಲಕಿಯರ ಪಪೂ ಕಾಲೇಜಿನ ಪ್ರಾಚಾರ್ಯ ಪ್ರಕಾಶ ಜೇವೂರ, ಆರ್.ಎನ್.ಕಾಟವಾ ಸೇರಿದಂತೆ ಇತರರು ಇದ್ದರು.