ಲೋಕದರ್ಶನವರದಿ
ಖಾನಾಪೂರ: ಕರ್ನಾಟಕ ರಾಜ್ಯೋತ್ಸವವನ್ನು ತಾಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ, ಶಿಕ್ಷಕರು, ಕನ್ನಡಪರ ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಸೇರಿ ಉತ್ಸಾಹದಿಂದ ಆಚರಿಸುವಂತೆ ಮತ್ತು ಸಂಘ ಸಂಸ್ಥೆಗಳು, ಅಧಿಕಾರಿಗಳು ರಾಜ್ಯೋತ್ಸವದ ವಂತಿಗೆಯನ್ನು ಸಕಾಲದಲ್ಲಿ ನೀಡಿ ಸಹಕರಿಸಬೇಕು ಎಂದು ತಹಶೀಲ್ದಾರ ಶಿವಾನಂದ ಉಳ್ಳೇಗಡ್ಡಿ ಅವರು ಕರೆ ನೀಡಿದರು.
ಈ ಸಲದ ನ. 1 ರಂದು ಕರ್ನಾಟಕ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ಖಾನಾಪೂರ ತಹಶೀಲ್ದಾರ ಕಾರ್ಯಾಲಯದಲ್ಲಿ ಏರ್ಪಡಿಸಿದ್ದ ಪೂರ್ವ ಭಾವಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಸಭೆಯಲ್ಲಿ ರಾಜ್ಯೋತ್ಸವ ಆಚರಣೆಯ ಕುರಿತಂತೆ ತಾಲೂಕು ಆಡಳಿತ ವತಿಯಿಂದ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚಚರ್ೆ ನಡೆದು ರಾಜ್ಯೋತ್ಸವದ ದಿನ ಕನ್ನಡ ನಾಡು ನುಡಿಯ ಬಗ್ಗೆ ಬೆಳಕು ಚೆಲ್ಲುವ ರೂಪಕಗಳನ್ನು ಆಯೋಜಿಸುವ ನಿರ್ಣಯ ಕೈಗೊಳ್ಳಲಾಯಿತು.ಹೆಸ್ಕಾಂ ಇಲಾಖೆ ಪಟ್ಟಣದ ಪ್ರಮುಖ ವೃತ್ತಗಳಲ್ಲಿ ವಿದ್ಯುತ್ ಅಲಂಕಾರ, ಪೋಲಿಸ್ ಇಲಾಖೆ ಕಾನೂನು ಸುವ್ಯವಸ್ಥೆ ಹಾಗೂ ಮೆರವಣಿಗೆ ವಾಹನಗಳನ್ನು ಪೂರೈಕೆ ಜವಾಬ್ದಾರಿ,ಪಟ್ಟಣ ಪಂಚಾಯಿತಿ ಸಮಾರಂಭ ಜರುಗುವ ವೇದಿಕೆಯ ಸಿದ್ಧತೆ ಸೇರಿದಂತೆ ಇನ್ನಿತರ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವಂತೆ ಸಭೆಯಲ್ಲಿ ಸೂಚಿಸಲಾಯಿತು.
ಈ ಸಂದರ್ಭದಲ್ಲಿ ಶಾಸಕಿ ಡಾ. ಅಂಜಲಿ ನಿಂಬಾಳ್ಕರ ಅವರು ಅಧ್ಯಕ್ಷತೆ ವಹಿಸಿದ್ದರು.ಸಿಪಿಐ ಮೊತಿಲಾಲ ಪವಾರ,ತಾ.ಪಂ.ಇ.ಓ ಲಕ್ಷ್ಮಣರಾವ ಯಕ್ಕುಂಡಿ,ರವಿ ಕಾರಡಗಿ, ಮೇಘಾ ಕುಂದರಗಿ,ಚಂಬಣ್ಣ ಹೊಸಮನಿ,ದಶರಥ ಬನೋಶಿ,ಜಯಂತ ತಿಣೈಕರ,ರವಿ ಹೆಬ್ಬಾಳಕರ,ರೇವಣಸಿದ್ಧಯ್ಯ ಹೀರೇಮಠ,ಸುರೇಶ ಶಿಂಗೆ,ಮಲ್ಲೇಶಿ ಪೋಳ, ಸೇರಿದಂತೆ ಇನ್ನಿತರ ಕನ್ನಡ ಪರ ಸಂಘಟನೆಗಳ ಮುಖಂಡರು ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.ಮಾರುತಿ ಚೋಟಣ್ಣವರ ಕಾರ್ಯಕ್ರಮ ನಿರೂಪಿಸಿದರು.