ವಿಜಯಪುರ 06: ನಗರದಲ್ಲಿ ಡಿಸೆಂಬರ್ 22 ರಂದು ನಡೆಯಲಿರುವ ವೃಕ್ಷಥಾನ್ ಹೆರಿಟೇಜ್ ರನ್-2024ರಲ್ಲಿ ಪಾಲ್ಗೊಳ್ಳಲು ಹೆಸರು ನೋಂದಾಯಿಸಲು ಇಂದು ಡಿಸೆಂಬರ್ 7, ಶನಿವಾರ ಕೊನೆಯ ದಿನವಾಗಿದ್ದು, ಆಸಕ್ತರು ಕೂಡಲೇ ತಮ್ಮ ಹೆಸರು ನೊಂದಾಯಿಸಬೇಕು ಎಂದು ಕೋರ್ ಕಮಿಟಿ ನೋಂದಣಿ ವಿಭಾಗದ ಡಾ. ರಾಜು ಯಲಗೊಂಡ ಮತ್ತು ವೀರೇಂದ್ರ ಗುಚ್ಚೆಚ್ಚಿ ತಿಳಿಸಿದ್ದಾರೆ.
ಸಾರ್ವಜನಿಕರ ಒತ್ತಾಯದ ಹಿನ್ನಲೆಯಲ್ಲಿ ಹೆಸರು ನೋಂದಣಿ ಅವಧಿಯನ್ನು ಡಿಸೆಂಬರ್ 7ರ ವರೆಗೆ ವಿಸ್ತರಿಸಲಾಗಿತ್ತು. ಈಗಾಗಲೇ ನೋಂದಣಿ ಕಾರ್ಯ ಭರದಿಂದ ಸಾಗಿದ್ದು, ದೇಶದ ನಾನಾ ಭಾಗಗಳ ಸಾವಿರಾರು ಓಟಗಾರರು ತಮ್ಮ ಹೆಸರು ನೋದಾಯಿಸಿದ್ದಾರೆ. ಕಳೆದ ಬಾರಿ ಸುಮಾರು 10 ಸಾವಿರ ಓಟಗಾರರು ಪಾಲ್ಗೊಂಡಿದ್ದು, ಈ ಸಲ ಸುಮಾರು 15 ರಿಂದ 20 ಸಾವಿರ ಜನ ಪಾಲ್ಗೋಳ್ಳುವ ನೀರೀಕ್ಷೆಯಿದೆ. ಈ ಓಟದಲ್ಲಿ ಪಾಲ್ಗೋಳ್ಳಲು ಅನೇಕ ಸಂಘ, ಸಂಸ್ಥೆಗಳು ಗ್ರುಪ್ ರೆಜಿಸ್ಟ್ರೇಷನ್ ಕೂಡ ಮಾಡಿಸಿವೆ. ಹೀಗಾಗಿ ಆಸಕ್ತರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬಹುದಾಗಿದೆ. ಆನಲೈನ್ ಮೂಲಕ ಣಣಠಿ://ತಿತಿತಿ.ಜತಜಟಿಣದಚಿಟಟಜಥಿ.ಛಿಠ/ಜತಜಟಿಣ-ಜಜಣಚಿ/211 ನಲ್ಲಿ ಹೆಸರು ನೋಂದಾಯಿಸಬಹುದಾಗಿದೆ.
ನೋಂದಣಿ ಸಂಬಂಧಿತ ಮಾಹಿತಿಗಾಗಿ ಮೊಬೈಲ್ ಸಂಖ್ಯೆ- 8095190218 ಮತ್ತು9886668498 ಸಂಪರ್ಕಿಸಬಹುದಾಗಿದೆ ಎಂದು ಡಾ. ರಾಜು ಯಲಗೊಂಡ ಮತ್ತು ವೀರೇಂದ್ರ ಗುಚ್ಚೆಟ್ಟಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.