5 ವರ್ಷಗಳಲ್ಲಿ ಶೇಕಡ 71 ರಷ್ಟು ಸಾಲ ಹೆಚ್ಚಳ : ಕಾಂಗ್ರೆಸ್ ದೂರು

ನವದೆಹಲಿ, ಜ 28 :      ಆರ್ಥಿಕ  ಪರಿಸ್ಥಿತಿ ಸುಧಾರಣೆಯಾಗದಷ್ಟು ಹಳಿತಪ್ಪಿದೆ ಎಂಬ ಮಾತು, ಟೀಕೆ  ನಿತ್ಯ ಕೇಳಿಬರುತ್ತಿರುವಾಗಲೇ ನರೇಂದ್ರ ಮೋದಿ ಸರ್ಕಾರ 5 ವರ್ಷಗಳ ಅವಧಿಯಲ್ಲಿ  ರಾಷ್ಟ್ರೀಯ ಸಾಲದ ಪ್ರಮಾಣ ಶೇಕಡಾ 71 ರಷ್ಟು ಹೆಚ್ಚಾಗಿದೆ ಎಂದು ಕಾಂಗ್ರೆಸ್ ಮಂಗಳವಾರ ಗಂಬೀರ ಆರೋಪ ಮಾಡಿದೆ.

ಮುಂಬರುವ ಸಾಮಾನ್ಯ ಬಜೆಟ್‌ನಲ್ಲಿ ಸರ್ಕಾರ ಈ ಸಮಸ್ಯೆಯನ್ನು ಬಗೆಹರಿಸಲು ಹಣಕಾಸು ಸಚಿವರು ಗಮನ ಹರಿಸಬೇಕು ಎಂದು ಪಕ್ಷದ ವಕ್ತಾರ ಪ್ರೊ. ಗೌರವ್ ವಲ್ಲಭ್, ಆಗ್ರಹಪಡಿಸಿದ್ದಾರೆ. 

ಕಳೆದ 5.5 ವರ್ಷಗಳಲ್ಲಿ, ದೇಶದ ಸಾಲ ವಿಪರೀತ ಹೆಚ್ಚಾಗಿದೆ   ಮಾರ್ಚ್ 2014 ರಲ್ಲಿ ಒಟ್ಟು ಸಾಲ 53.11 ಲಕ್ಷ ಕೋಟಿ ರೂ. ಆಗಿದ್ದರೆ, 2019 ರ ಸೆಪ್ಟೆಂಬರ್‌ನಲ್ಲಿ ಅದೂ  91.01 ಲಕ್ಷ ಕೋಟಿರೂಪಾಯಿಗೆ ಏರಿಕೆಯಾಗಿದೆ ಎಂದೂ  ಅವರು ಅಂಕಿ ಆಂಶಗಳ ವಿವರ ನೀಡಿದರು.

ಪಕ್ಷದ ಪ್ರಧಾನ ಕಚೇರಿಯಲ್ಲಿ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಅವರು ಒಟ್ಟಾರೆ  ಸಾಲ , 37.9 ಲಕ್ಷ ಕೋಟಿ ಆಗಿದ್ದು  5 ವರ್ಷದ ಅವಧಿಯಲ್ಲಿ ಸಾಲದ ಪ್ರಮಾಣ ಶೇಕಡ 71.ರಷ್ಟು ಹೆಚ್ಚಳವಾಗಿದೆ ಎಂದರು.

ಫೆಬ್ರವರಿ 1 ರಂದು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡಿಸಲಿರುವ ಕಾರಣ  ಆರ್ಥಿಕ ಪರಿಸ್ಥಿತಿಯನ್ನು ಜನತೆಗೆ ಮನವರಿಕೆ ಮಾಡಿಕೊಡಲು ಪಕ್ಷ ಪ್ರತಿದಿನ 'ವಿಶೇಷ ಪತ್ರಿಕಾಗೋಷ್ಠಿಗಳು' ನಡೆಸುವುದಾಗಿ ಹೇಳಿದರು. 

ಒಟ್ಟು ಸಾಲವು ಅಗತ್ಯವಿರುವ ಮಿತಿಯಲ್ಲಿದೆಯೇ  ಮತ್ತು ಅಭಿವೃದ್ಧಿ ಚಟುವಟಿಕೆಗಳಿಗೆ ಪರಿಣಾಮಕಾರಿಯಾಗಿ ಬಳಸಲಾಗಿದೆಯೇ  ಎಂದು ಖಚಿತಪಡಿಸಿಕೊಳ್ಳುವುದು ಮತ್ತು ಜನರ ಒಟ್ಟಾರೆ ಜೀವನ ಮಟ್ಟವನ್ನು ಸುಧಾರಿಸುವುದು ಸರ್ಕಾರಕ್ಕೆ ಬಹಳ ಮಹತ್ವ, ನಿರ್ಣಾಯಕವಾಗಿದೆ ಕಳೆದ 5.5 ವರ್ಷಗಳಲ್ಲಿ , ತಲಾವಾರು  ಸಾಲವೂ   27,200 ರೂ.ಗಳಿಗೆ ಹೆಚ್ಚಾಗಿದೆ ಎಂದರು.

2010 ರಲ್ಲಿ ಜಿಡಿಪಿಗೆ ರಾಷ್ಟ್ರೀಯ ಸಾಲವು ಶೇಕಡಾ 65 ರಷ್ಟಿತ್ತು, ಇದು 2019 ರಲ್ಲಿ 69.7 ಕ್ಕೆ ಏರಿದೆ ಮತ್ತು 2020 ರ ಮಾರ್ಚ್ ವೇಳೆಗೆ 70.1 ಕ್ಕೆ ಏರಿಕೆಯಾಗಲಿದೆ ಎಂದು ಅವರು ಹೇಳಿದರು.

ಪರೋಕ್ಷ ತೆರಿಗೆ ಆದಾಯದಲ್ಲಿ ಗಮನಾರ್ಹ ಇಳಿಕೆ ಕಂಡುಬಂದರೆ, ವಿತ್ತೀಯ  ಕೊರತೆಯು ಆಪಾಯ ಮೀರುವ ಸಾಧ್ಯತೆಯಿದೆ ಎಂಬ ಆತಂಕ  ವ್ತಕ್ತಪಡಿಸಿದ್ದಾರೆ. ಇದರಿಂದಾಗಿ ಸರ್ಕಾರವು ಅಭಿವೃದ್ಧಿ ಕಾರ್ಯಗಳಿಗೆ ಸಾಕಷ್ಟು ಹಣ ಖರ್ಚು ಮಾಡದೆ ಅದೂ ಜನರ ಮೇಲೆ ಗಂಬೀರ ಪರಿಣಾಮ ಬೀರಲಿದೆ ಎಂದು ಅವರು ಹೇಳಿದರು.

ಯಾವುದೇ ಆದಾಯ, ಸಂಪನ್ಮೂಲದ  ಮಾರ್ಗವಿಲ್ಲದೇ,   ಉದ್ಯೋಗಗಳಿಲ್ಲದೇ,   ಹೊಸ ಹೂಡಿಕೆಗಳಿಲ್ಲದೆ  ಸಾಲವನ್ನು ಮರುಪಾವತಿಮಾಡುವುದಾದರೂ ಎಂದು ಮೋದಿ ಸರ್ಕಾರವನ್ನುಅವರು  ಪ್ರಶ್ನೆ ಮಾಡಿದ್ದಾರೆ .