ಲೋಕದರ್ಶನ ವರದಿ
ಮುನವಳ್ಳಿ : ಅ. 21 ರಂದು ಸಮೀಪದ ಮದ್ಲೂರ ಗ್ರಾಮದಲ್ಲಿ ಚಂದ್ರಮಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ ಸಂಘದ ರೈತ ಶೇರು ಸದಸ್ಯರಿಗೆ ಸಾಲಪತ್ರ ವಿತರಣಾ ಕಾರ್ಯಕ್ರಮ ಜರುಗಿತು.
ಸಾಲಪತ್ರ ವಿತರಿಸಿ ಮಾತನಾಡಿದ ಶಾಸಕ ಹಾಗೂ ಬಿ.ಡಿ.ಸಿ.ಸಿ. ಬ್ಯಾಂಕ ನಿದರ್ೇಶಕ ಆನಂದ ಮಾಮನಿ ಈ ಮೊದಲು ಸವದತ್ತಿ ತಾಲೂಕಿನಲ್ಲಿ ಕೃಷಿ ಪತ್ತಿನ ಸಹಕಾರಿ ಸಂಘಗಳ ಹಾಗೂ ಪತ್ತಿನ ಕೊರತೆಯಿಂದ ರೈತರ ಅಭಿವೃದ್ದಿ ಕುಂಠಿತಗೊಂಡಿತ್ತು ಆದರೆ ನಾನು ಬಿ.ಡಿ.ಸಿ.ಸಿ. ಬ್ಯಾಂಕ ನಿದರ್ೇಶಕನಾಗಿ ಆಯ್ಕೆಗೊಂಡ ತದನಂತರ ತಾಲೂಕಿನಲ್ಲಿ ಅತೀ ಕಡಿಮೆ ಅವಧಿಯಲ್ಲಿ ಹೊಸದಾಗಿ 23 ಸಹಕಾರಿ ಸಂಘಗಳನ್ನು ಹುಟ್ಟುಹಾಕಿ ಒಟ್ಟು ತಾಲೂಕಿನ 99 ಸಂಘಗಳಿಗೆ 210 ಕೋಟಿ ರೂ. ಪತ್ತು (ಸಾಲ) ಹಾಗೂ 58 ಟ್ರ್ಯಾಕ್ಟರಗಳಿಗೆ ಸಾಲವನ್ನು ಬಿ.ಡಿ.ಸಿ.ಸಿ. ಬ್ಯಾಂಕ ಅಧ್ಯಕ್ಷರಾದ ರಮೇಶ ಕತ್ತಿಯವರ ಸಹಾಯ ಸಹಕಾರದಿಂದ ಒದಗಿಸಿ ರೈತರಿಗೆ ಅನುಕೂಲ ಮಾಡಿಕೊಡಲಾಗಿದೆ ಇವತ್ತು ರೈತರಿಗೆ ಸರಕಾರದ ಯೋಜನೆಗಳನ್ನು ಮುಟ್ಟಿಸುವಲ್ಲಿ ಕೃಷಿ ಪತ್ತಿನ ಸಹಕಾರಿ ಸಂಘ ಪ್ರಮುಖವಾಗಿ ಕಾರ್ಯನಿರ್ವಹಿಸುತ್ತಿದೆ ಇಲ್ಲಿಯವರೆಗೆ ತಾಲೂಕಿನಲ್ಲಿ 80 ಕೋಟಿ ರೈತರ ಸಾಲ ಮನ್ನಾ ಆಗಿದೆ ಇನ್ನೂ 30 ಕೋಟಿ ಮನ್ನಾ ಆಗುವುದು ಬಾಕಿ ಇದ್ದು ರೈತರು ಹೆದರುವ ಪ್ರಶ್ನೆ ಇಲ್ಲ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಬಾಬುಸಾಬ ಪರಾಶಿ ಸಂಘ ಪ್ರಾರಂಭವಾಗಿ ಕೆಲವೇ ತಿಂಗಳುಗಳಲ್ಲಿ ಬಿ.ಡಿ.ಸಿ.ಸಿ. ಬ್ಯಾಂಕ ನಿದರ್ೇಶಕರಾದ ಆನಂದ ಮಾಮನಿ ಯವರು 90 ಲಕ್ಷ ಸಾಲವನ್ನು ಸಂಘಕ್ಕೆ ಮಂಜೂರು ಮಾಡಿಸಿ ರೈತರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ಶ್ಲಾಘಿಸಿದರು.
ಕಾರ್ಯಕ್ರಮದ ಸಾನಿಧ್ಯವನ್ನು ಸವದತ್ತಿ ಬ್ರಹ್ಮಾನಂದ ಆಶ್ರದ ಶ್ರೀ ಶಿವಾನಂದ ಮಹಾಸ್ವಾಮಿಗಳು, ಬಸಯ್ಯಸ್ವಾಮಿ ಪೂಜೇರ ವಹಿಸಿದ್ದರು. ಮುಖ್ಯಅತಿಥಿಗಳಾಗಿ ಸಂಘದ ಉಪಾಧ್ಯಕ್ಷ ಮಲ್ಲೇಶಪ್ಪ ಕಲಕುಟ್ರಿ, ಎ.ಪಿ.ಎಂ.ಸಿ. ಅಧ್ಯಕ್ಷ ಜಗದೀಶ ಹನಸಿ, ಬಿಜೆಪಿ ಧುರೀಣರಾದ ಪುಂಡಲೀಕ ಮೇಟಿ, ಜಿ.ಪಂ. ಸದಸ್ಯೆ ಮಂಜುಳಾ ಬೈರನ್ನವರ, ಸುಭಾಸಗೌಡ ಪಾಟೀಲ, ರೇಣುಕಾ ಜುಂಜನ್ನವರ, ನಾಗಪ್ಪ ಸಾಲಿ, ಆರ್.ಎಚ್.ಪಾಟೀಲ. ಎಸ್.ಎಸ್.ಸಿದ್ದನ್ನವರ ಸೇರಿದಂತೆ ಸಂಘದ ನಿದರ್ೇಶಕರಾದ ಹುಲೆಪ್ಪ ಪಚ್ಚಿ, ಬಸಪ್ಪ ಕಲ್ಲೋಳ್ಳಿ, ಬಸವರಾಜ ಮನಿಕಟ್ಟಿ, ಷಡಕ್ಷರಿ ಮುರಗೋಡ, ಫಕೀರಪ್ಪ ಕುರಿ, ದ್ಯಾಮಪ್ಪ ಮಾದರ, ಪ್ರಕಾಶ ಪಾಟೀಲ, ಈರಪ್ಪ ತಳವಾರ, ಚನ್ನಮ್ಮಾ ಸಾಲಿ, ಸಾಂವಕ್ಕ ಬಿಜರ್ಿ, ಮುಖ್ಯಕಾರ್ಯನಿವರ್ಾಹಕ ಫಕೀರಪ್ಪ ಮನಿಕಟ್ಟಿ ಇತರರು ಇದ್ದರು. ಕಾರ್ಯಕ್ರಮದ ಸ್ವಾಗತವನ್ನು ಬಸವರಾಜ ಮನಿಕಟ್ಟಿ, ನಿರೂಪಣೆಯನ್ನು ಅಶೋಕ ಬಡಿಗೇರ ಮಾಡಿದರು.