ನ್ಯೂಯಾರ್ಕ್, ಮಾರ್ಚ್ 23, ಅಮೇರಿಕಾದಲ್ಲಿ ಕೊರೋನಾ ವೈರಸ್ ಸೋಂಕಿನಿಂದಾಗಿ ಒಟ್ಟು 400 ಜನರು ಸಾವನ್ನಪ್ಪಿರುವುದಾಗಿ ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ಭಾನುವಾರ ತನ್ನ ವರದಿಯಲ್ಲಿ ತಿಳಿಸಿದೆ.ಕರೋನವೈರಸ್‌ನಿಂದ ಒಟ್ಟು 402 ಜನರು ಸಾವನ್ನಪ್ಪಿದ್ದು, ದೇಶದೆಲ್ಲೆಡೆ 32,644 ಪ್ರಕರಣಗಳು ದೃಢಪಟ್ಟಿವೆ. ಅಮೇರಿಕಾದಲ್ಲಿ ನ್ಯೂಯಾರ್ಕ್ ರಾಜ್ಯದಲ್ಲೇ 114 ಮಂದಿ ಸಾವನ್ನಪ್ಪಿದ್ದು, ವಾಶಿಂಗ್ಟನ್ ನಲ್ಲಿ 94 ಜನರು ಸೋಂಕಿಗೆ ಬಲಿಯಾಗಿದ್ದಾರೆ. ಒಟ್ಟಾರೆ ಇಡೀ ದೇಶದಲ್ಲೇ ನ್ಯೂಯಾರ್ಕ್ ನಗರದಲ್ಲಿ ಹೆಚ್ಚು ಸಾವು ಸಂಭವಿಸಿದೆ.