ಜುನಾಗಢ್, ಡಿ 18 ಗಿರ್ ಅರಣ್ಯದಿಂದ ಒಂದು ವಾರದ ಹಿಂದೆ ರಕ್ಷಿಸಲ್ಪಟ್ಟಿದ್ದ ಹೆಣ್ಣು ಸಿಂಹ ಬುಧವಾರ ಗುಜರಾತ್ ನ ಗಿರ್
ಸೋಮನಾತ್ ಜಿಲ್ಲೆಯ ಜಸಾಧರ್ ಪ್ರಾಣಿ ಕೇಂದ್ರದಲ್ಲಿ
ಸಾವನ್ನಪ್ಪಿದೆ. 12 ವರ್ಷದ ಸಿಂಹವನ್ನು ಇಲ್ಲಿನ ಸೊನಾರಿಯಾ
ಗ್ರಾಮದಲ್ಲಿ ಡಿ.9ರಂದು ರಕ್ಷಿಸಲಾಗಿತ್ತು. ಆದರೆ, ವಯೋಸಹಜ ಕಾಯಿಲೆಯಿಂದ ಅದು ಮೃತಪಟ್ಟಿದೆ ಎಂದು
ಅರಣ್ಯ ಸಂರಕ್ಷಣಾಧಿಕಾರಿ ಡಿ.ಟಿ.ವಾಸವಾಡ ಹೇಳಿದ್ದಾರೆ.