ಮಂಗಳೂರು / ಮೈಸೂರು, ಜ. 6 ಮಂಗಳೂರು ಮತ್ತು ದೇಶದ ಇತರ ಭಾಗಗಳಲ್ಲಿ ಸರ್ಫಿ೦ಗ್ (ಸಮುದ್ರ ಕ್ರೀಡೆ)ನ ಪರಿಣಿತರಾದ ಸರ್ಫಿ೦ಗ್ಗ್ ಸ್ವಾಮಿ (ಸ್ವಾಮಿ ನರಸಿಂಗ) ಸೋಮವಾರ ಇಲ್ಲಿ ನಿಧನರಾದರು.
ಅವರಿಗೆ 76 ವಯಸ್ಸಾಗಿತ್ತು.
ಸ್ವಾಮಿ ಅವರು 2004 ರಲ್ಲಿ ಕರಾವಳಿಯ ಮುಲ್ಕಿಯಲ್ಲಿನ ಮಂತ್ರ ಸರ್ಫಿ೦ಗ್ ಕ್ಲಬ್ನ ಸ್ಥಾಪಕರಾಗಿದ್ದರು. ಈ ಕ್ಲಬ್ನ ಮೂಲಕ ಅವರು ಈ ಪ್ರದೇಶದ ಅನೇಕ ಯುವಕರಿಗೆ ಸರ್ಫಿ೦ಗ್ನಲ್ಲಿ ತರಬೇತಿ ನೀಡಿದರು.
ಸ್ವಾಮಿಯವರು ನಾಥ್ರ್ ಫ್ಲೋರಿಡಾದ ಮೊದಲ ಸರ್ಫಿ೦ ಕ್ಲಬ್ನ ಸ್ಥಾಪಕ ಸದಸ್ಯರಾಗಿದ್ದರು. ಅಮೆರಿಕದ ಈಸ್ಟ್ ಕೋಸ್ಟ್ ನ ಸರ್ಫಿ೦ಗ್ ನಲ್ಲಿ ಪರಿಣಿತರಲ್ಲಿ ಒಬ್ಬರಾಗಿದ್ದರು. ದೇಶದಲ್ಲಿ ಸರ್ಫಿ೦ಗ್ ಅನ್ನು ಮಾನ್ಯತೆ ಪಡೆದ ಕ್ರೀಡೆಯನ್ನಾಗಿಸುವ ಗುರಿಯೊಂದಿಗೆ ತಮ್ಮ ವಿದ್ಯಾರ್ಥಿಗಳೊಂದಿಗೆ ಸೇರಿ ಭಾರತದಲ್ಲಿ ಸರ್ಫಿ೦ಗ್ ಆಂದೋಲನದ ವಿವಿಧ ಆಯಾಮಗಳಲ್ಲಿ ಸ್ವಾಮಿ ಪರಿಣಿತಿ ಪಡೆದಿದ್ದರು.
ಅನೇಕರ ಬದುಕನ್ನು ಬೆಳಗಿಸಿದ ಸ್ವಾಮಿ ಅವರ ನಿಧನದಿಂದ ತುಂಬಾ ದು:ಖವಾಗಿದೆ ಎಂದು ಸ್ವಾಮಿ ಅವರಿಂದ ತರಬೇತಿ ಪಡೆದ ಮೊದಲ ತಲೆಮಾರಿನ ಸರ್ಫರ್ಗಳಲ್ಲಿ ಒಬ್ಬರಾದ ಸರ್ಫಿ೦ಗ್ ಫೆಡರೇಶನ್ ಆಫ್ ಇಂಡಿಯಾ ಅಧ್ಯಕ್ಷ ಮತ್ತು ಮಂತ್ರ ಸರ್ಫಿ ಕ್ಲಬ್ನ ಮುಖ್ಯ ಬೋಧಕ ಕಿಶೋರ್ ಕುಮಾರ್ ಕಂಬನಿ ಮಿಡಿದಿದ್ದಾರೆ.