ತಿರುವನಂತಪುರಂ, ಜ 21 : ನೇಪಾಳದಲ್ಲಿ ತೀರ್ಥಯಾತ್ರೆಯಲ್ಲಿದ್ದ ಐದು ಮಕ್ಕಳು ಸೇರಿದಂತೆ ಕೇರಳದ ಆರು ಜನ ಹೋಟೆಲ್ ಕೊಠಡಿಯಯಲ್ಲೇ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.
ಈ ನಗರದ ಗುಂಪಿನ ಭಾಗವಾಗಿದ್ದ ಸಂತ್ರಸ್ತರು ಕಠ್ಮಂಡುವಿನ ದಮನ್‌ನಲ್ಲಿರುವ ಎವರೆಸ್ಟ್ ಪನೋರಮಾ ರೆಸಾರ್ಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಗುಂಪಿನಲ್ಲಿದ್ದ ಕೆಲವು ಸದಸ್ಯರು ಕಠ್ಮಂಡುವಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಇದೆ ಮೂಲಗಳು ತಿಳಿಸಿವೆ.