ಶಶಿಧರ ಶಿರಸಂಗಿ
ಶಿರಹಟ್ಟಿ: ಮಹಾತ್ಮಾ ಗಾಂಧೀಜಿಯವರ ಹಾಗೂ ನಮ್ಮ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕನಸಿನ ಯೋಜನೆಯು ದೇಶಾದ್ಯಂತ ನಡೆಯುತ್ತಿದ್ದು, ಹಿಂದುಳಿದ ಹಾಗೂ ಸೌಲಭ್ಯ ವಂಚಿತ ಹಳ್ಳಿಗಳನ್ನು ಆಯ್ಕೆ ಮಾಡಿ ಅವುಗಳನ್ನು ಸಂಸದರ ಆದರ್ಶ ಗ್ರಾಮ ಯೋಜನೆಯ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ.
ಈ ಗ್ರಾಮವು ಮೊದಲು ಸ್ವಚ್ಛ ಗ್ರಾಮ ಯೋಜನೆಗೆ ಆಯ್ಕೆ ಆಗಿ ಗ್ರಾಮದಲ್ಲಿ ಸುಮಾರು 20 ಲಕ್ಷರೂಗಳ ಹಲವಾರು ಪ್ರಗತಿ ಕಾರ್ಯಗಳು ನಡೆದವು. ಸ್ವಲ್ಪ ವರ್ಷಗಳು ಗತಿಸಿದ ನಂತರ ಮತ್ತೇ ಇದೇ ಗ್ರಾಮಕ್ಕೆ ಸುವರ್ಣ ಗ್ರಾಮ ಯೋಜನೆಗೆ ಆಯ್ಕೆಗೊಂಡಿತು. ಈ ಯೋಜನೆಯು ಸಂಪೂರ್ಣವಾಗಿ ಯಶಸ್ಸನ್ನು ಕಾಣದೇ ಅರ್ಧಕ್ಕೇ ಮೊಟಕುಗೊಂಡಿತು. ನಂತರ ಇದೇ ಗ್ರಾಮ ಸಾಂಸದರ ಆದರ್ಶ ಗ್ರಾಮಕ್ಕೆ ಆಯ್ಕೆ ಆಗಿತ್ತು.
ಕಳೆದ ಅವಧಿಯ ಸರ್ಕಾರದಲ್ಲಿ ಹಾವೇರಿ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಯಳವತ್ತಿ ಗ್ರಾಮ ಈ ಯೋಜನೆಯಲ್ಲಿ ಹಲವಾರು ಪ್ರಗತಿಪರ ಕೆಲಸಗಳು ಕೇಂದ್ರ ಹಾಗೂ ರಾಜ್ಯ ಸಕರ್ಾರದ ಸಹಯೋಗದಲ್ಲಿ ನಡೆದಿವೆ. ಮಾಗಡಿ ರಸ್ತೆಯಲ್ಲಿನ ದೊಡ್ಡ ಹಳ್ಳ ಹಾಗೂ ಯತ್ತಿಹಳ್ಳಿ ರಸ್ತೆಯಲ್ಲಿನ ದೊಡ್ಡಹಳ್ಳಗಳಿಗೆ ಎಂದೂ ಕಾಣದ ಬೃಹತ್ ಬ್ರಿಜ್ಗಳ ಕಾಮಗಾರಿ ನಡೆದಿವೆ. ಈ ಗ್ರಾಮವು ಪ್ರಗತಿ ಸಾಧಿಸುವಲ್ಲಿ ದೇಶದಲ್ಲಿಯೇ ನಂ. 1 ಗ್ರಾಮವಾಗಿದೆ ಎಂದು ಮಾಜಿ ಹಾಗೂ ಹಾಲಿ ಸಂಸದ ಶಿವಕುಮಾರ ಉದಾಸಿ ಹರ್ಷ ವ್ಯಕ್ತ ಪಡಿಸಿದ್ದಾರೆ.
ಆದರೆ ಈ ಎಲ್ಲಾ ಯೋಜನೆಗಳನ್ನು ಕಂಡ ಈ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮಾಗಡಿ-ಶಿರಹಟ್ಟಿ-ಗದಗ-ಲಕ್ಷ್ಮೇಶ್ವರ ಪಟ್ಟಣಗಳಿಗೆ ಸಾಗಬೇಕೆಂದರೆ ಜೀವವನ್ನು ಮಾತ್ರ ಕೈಯಲ್ಲಿಟ್ಟುಕೊಂಡೇ ಸಾಗಬೇಕು, ಹಗಲಿನಲ್ಲಿ ಬೈಕ್ ಸವಾರರು, 3 ಗಾಳಿಗಳ ವಾಹನ ಹಾಗೂ ಬಸ್ಸುಗಳು, ಟ್ರಕ್ಗಳು ಹೇಗೋ ಈ ರಸ್ತೆಗಳಲ್ಲಿ ಸರ್ಕಸ್ ಮಾಡಿಕೊಂಡು ಸಾಗುತ್ತವೆ, ಆದರೆ ಸಂಜೆ ಆದರೆ ಸಾಕು ಎಷ್ಟೋ ಬೈಕ್ ಸವಾರರು, ಕಾರುಗಳು ಈ ರಸ್ತೆಗಳನ್ನು ದಾಟುವಲ್ಲಿ ಶ್ರಮವಹಿಸಿ ಅಫಘಾತಕ್ಕೆ ಈಡಾಗಿವೆ. ಈ ಹದಗೆಟ್ಟ ರಸ್ತೆಗಳಿಗೆ ಮರು ಜನ್ಮ ಯಾವಾಗ? ರಸ್ತೆ ರಿಪೇರಿ ಯಾವಾಗ? ಸುಂದರ ಸುಗಮ ರಸ್ತೆ ಭಾಗ್ಯ ಯಾವಾಗ?
ಇನ್ನೂ ಅನೇಕ ರೀತಿಯ ಬದಲಾವಣೆಗಳು ಹಾಗೂ ಪ್ರಗತಿ ಪರ ಕೆಲಸಗಳು ಆಗಬೇಕಿದೆ ಇದಕ್ಕೆ ಗ್ರಾಮಸ್ಥರು ಗ್ರಾಮ ಪಂಚಾಯತದ ಪ್ರತಿನಿಧಿಗಳಿಗೆ ಸಹಕಾರವನ್ನು ನೀಡಿ ಎಲ್ಲ ರೀತಿಯ ಬದಲಾವಣೆಗಳಾದಾಗ ಮಾತ್ರ ಯಳವತ್ತಿ ಗ್ರಾಮ ದೇಶದಲ್ಲೇ ನಂ:01 ಗ್ರಾಮವಾದೀತು.