ಬಾಗಲಕೋಟೆ: ಅನಾದಿ ಕಾಲದಿಂದಲೂ ಗ್ರಾಮೀಣ ಪ್ರದೇಶದಲ್ಲಿ ಆಯಾ ಪಡೆಯುವ ಪದ್ದತಿಯಲ್ಲಿ ಕಾಯಕ ಜೀವಿಗಳಾಗಿದ್ದ ಹಡಪದ ಸಮಾಜ ಬಾಂಧವರು ಎಲ್ಲ ಜನಾಂಗದವರ ಜೊತೆ ಸ್ನೇಹ ಜೀವಿಗಳಾಗಿದ್ದರೆಂದು ಜಿ.ಪಂ ಅಧ್ಯಕ್ಷೆ ಬಾಯಕ್ಕ ಮೇಟಿ ಹೇಳಿದರು.
ನವನಗರದ ಡಾ.ಬಿ.ಆರ್.ಅಂಬೇಡ್ಕರ ಭವನದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಶಿವಶರಣ ಹಡಪದ ಅಪ್ಪಣ್ಣ ಅವರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಮೊದಲಿನಿಂದಲೂ ಸಮಾಜ ಶೋಷಣಕ್ಕೊಳಗಾಗಿದ್ದು, ಇದಕ್ಕೆ ಬಡತನ, ಅನಕ್ಷರತೆಗೆ ಕಾರಣವಾಗಿದೆ ಎಂದರು.
ಸಮಾಜ ಭಾಂದವರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡುವದರ ಜೊತೆಗೆ ಅಳುವಿನ ಅಂಚಿನಲ್ಲಿರುವ ಕ್ಷೌರಿಕ ಕಾಯಕವನ್ನು ಸುಧಾರಿಸಿದ ಮಾದರಿಯಲ್ಲಿ ನಿರುದ್ಯೋಗಿ ಯುವಕರು ಕೈಗೊಂಡು ಸಮಾಜದಲ್ಲಿ ಸೇವೆ ಗೈಯುವದರ ಜೊತೆಗೆ ಆಥರ್ಿಕವಾಗಿ ಪ್ರಭಲರಾಗಬೇಕು. ಮಾಜಿ ಶಾಸಕ ಎಚ್.ವಾಯ್.ಮೇಟಿ ಅವರು ನವನಗರದಲ್ಲಿ ಸಮುದಾಯ ಭವನಕ್ಕೆ ಜಾಗ ನೀಡಲಾಗಿದೆ. ಸಮಾಜ ಭಾಂದವರು ಅದರ ಸದುಪಯೋಗ ಪಡೆದುಕೊಳ್ಳಬೇಕೆಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ತಾ.ಪಂ ಅಧ್ಯಕ್ಷ ಚನ್ನನಗೌಡರ ಪರನಗೌಡರ ಮಾತನಾಡಿ ನಾಬಿಕ ಸಮಾಜ ಕಾಯಕ ಪ್ರಿಯರಾಗಿದ್ದು, ಕಾಯಕದಲ್ಲಿ ಕೈಲಾಸ ಕಂಡವರು. ತಮ್ಮ ಕಾಯಕಕ್ಕೆ ಹೋದಾಗ ಮುಂಜಾನೆ ಸ್ನಾನ, ಸಂದ್ಯಾವಂದನೆ ಮುಗಿಸಿ, ಲಿಂಗ ಪೂಜೆ ಮುಗಿಸಿ ಗ್ರಾಮದ ದೇವಾಲಯಕ್ಕೆ ಹೋಗಿ ಪೂಜೆ ಸಲ್ಲಿಸುತ್ತಿರುವ ಸಂದರ್ಭ ನನಗೆ ಇನ್ನು ನೆನಪಿದೆ ಎಂದರು.
ಸಮಾಜದಲ್ಲಿರುವ ಜಾತಿ, ಮತ ಹಾಗೂ ಪಂಥಗಳನ್ನು ತೊಡೆದು ಹಾಕಿ ಪ್ರೀತಿಯ ಮೇಲೆ ಸಮಾಜವನ್ನು ನಿಮರ್ಿಸಿದವರು ಹಡಪದ ಅಪ್ಪಣ್ಣನವರು. ಸುಡಗಾಡ ಸಿದ್ದರಂತೆ ಕಲ್ಲು, ಮಣ್ಣು ಹಾಗೂ ಗಾಜುಗಳನ್ನು ತಿಂದು ಪವಾಡ ಮಾಡಿದವರಲ್ಲ. ಒಬ್ಬ ಕಳ್ಳನನ್ನು ಉತ್ತಮ ವ್ಯಕ್ತಿಯನ್ನಾಗಿ ಮಾಡುವುದು ಅಪ್ಪಣ್ಣನವರ ಪವಾಡವಾಗಿತ್ತು ಎಂದರು.
ಕಾರ್ಯಕ್ರಮದಲ್ಲಿ ಸಮಾಜದ ಮುಖಂಡರಾದ ಗೆದ್ದಲಮರಿ, ಅಶೋಕ ತೋಟದ, ವಿಠಲ ಮುಗಳೊಳ್ಳಿ, ಸಂಗಪ್ಪ ಕುಂದಗೋಳ ಸೇರಿದಂತೆ ಇತರರು ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿದರ್ೇಶಕಿ ಶಶಿಕಲಾ ಹುಡೇದ ಸ್ವಾಗತಿಸಿದರು. ಸುರೇಶ ಹಡಪದ ವಂದಿಸಿದರು. ಶಂಕರಲಿಂಗ ದೇಸಾಯಿ ನಿರೂಪಿಸಿದರು.
ಕಾರ್ಯಕ್ರಮ ಪೂರ್ವದಲ್ಲಿ ಜಿಲ್ಲಾಡಳಿತ ಭವನದಲ್ಲಿ ಹಡಪದ ಅಪ್ಪಣ್ಣ ಅವರ ಭಾವಚಿತ್ರಕ್ಕೆ ಜಿ.ಪಂ ಅಧ್ಯಕ್ಷೆ ಬಾಯಕ್ಕ ಮೇಟಿ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆ ಜಿಲ್ಲಾಡಳಿತ ಭವನದಿಂದ ಪ್ರಾರಂಭವಾಗಿ ನವನಗರದ ಬಸ್ ನಿಲ್ದಾಣ, ಎಲ್.ಐ.ಸಿ ವೃತ್ತದ ಮಾರ್ಗವಾಗಿ ಅಂಬೇಡ್ಕರ ಭವನಕ್ಕೆ ತಲುಪಿತು. ಮೆರವಣಿಗೆಯಲ್ಲಿ ವಿವಿಧ ಜಾನಪದ ಕಲಾತಂಡಗಳು ಭಾಗವಹಿಸಿದ್ದವು.
ಮಹಿಳೆಯರು ಕುಂಬ ಹೊತ್ತು ಮೆರವಣಿಗೆಯ ಆಕರ್ಷಣೀಯ ಕೇಂದ್ರ ಬಿಂದು ಆಗಿದ್ದರು. ಮೆರವಣಿಗೆಯಲ್ಲಿ ಜಿ.ಪಂ ಉಪಾಧ್ಯಕ್ಷ ಮುತ್ತಪ್ಪ ಕೋಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಸಾರ, ಅಪರ ಜಿಲ್ಲಾಧಿಕಾರಿ ದುಗರ್ೇಶ ರುದ್ರಾಕ್ಷಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.