ಬಾಗಲಕೋಟೆ೦೭: ಜಿಲ್ಲಾ ಕೇಂದ್ರ ಗ್ರಂಥಾಲಯದಲ್ಲಿ ಗ್ರಂಥಾಲಯದ ಸಹಾಯಕರಾಗಿ 25 ವರ್ಷಗಳ ಕಾರ್ಯನಿರ್ವಹಿಸಿ ವಯೋನಿವೃತ್ತಿ ಹೊಂದಿದ ವಿ.ಬಿ.ಜಿರಗಾಳ ಅವರನ್ನು ಆತ್ಮೀಯವಾಗಿ ಬೀಳ್ಕೊಡಲಾಯಿತು.
ವಯೋನಿವೃತ್ತಿ ಹೊಂದಿದ ವಿ.ಬಿ.ಜಿರಗಾಳ ದಂಪತಿಗಳಿಗೆ ಸನ್ಮಾನಿಸಿ ನೆನಪಿನ ಕಾಣಿಕೆ ನೀಡಲಾಯಿತು. ನಂತರ ಗ್ರಂಥಾಲಯದ ಸಿಬ್ಬಂದಿಗಳಾದ ಸುನಿಲ್ ಮುದಗಲ್ಲ, ಆರ್.ಎನ್.ವಾಲಿಕಾರ ಮಾತನಾಡಿ ಸರಕಾರಿ ಸೇವೆಯಲ್ಲಿ ನಿವೃತ್ತಿ ಸಹಜವೆಂದರು. ಜಗತ್ತಿನಲ್ಲಿರುವ ಎಲ್ಲ ಜೀವರಾಶಿಗಳ ನೋವು-ನಲಿವಿನ ಜೊತೆಗೆ ನಾನು ಕೂಡ ಒಬ್ಬರಾಗಿ ಇರುಬೇಕು. ಏಕಾಂಗಿಯಾಗಿ ಇರದೇ ಹಸುವಿನಂತಹ ಮನಸ್ಸಿನಿಂದ ಎಲ್ಲರ ಜೊತೆ ಸಹ ಬಾಳ್ವೆಯಿಂದ ಬದುಕಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮುಖ್ಯ ಗ್ರಂಥಾಲಯ ಅಧಿಕಾರಿ ಎಂ.ಎಸ್.ರಬ್ಬಿನಾಳ ಮಾತನಾಡಿ ಪ್ರತಿಯೊಬ್ಬರು ಪ್ರಮಾಣಿಕ ಮತ್ತು ದಕ್ಷತೆಯಿಂದ ಕಾರ್ಯನಿರ್ವಹಿಸಬೇಕು. 25 ವರ್ಷ ನಿರಂತರ ಸೇವೆಯಲ್ಲಿ ಒಂದು ಕಪ್ಪು ಚುಕ್ಕೆ ಇಲ್ಲದೇ ಕಾರ್ಯನಿರ್ವಹಿಸಿ ವಯೋನಿವೃತ್ತಿ ಹೊಂದಿದ ಜಿರಗಾಳ ಅವರ ಕಾರ್ಯವನ್ನು ಶ್ಲಾಘಿಸಿದರು. ಅವರ ನಿವೃತ್ತಿ ಜೀವನ ಸುಖವಾಗಿರಲೆಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಎಂ.ನಾಡಗೌಡ, ಎಂ.ಎನ್.ತಳವಾರ, ಎ.ಎಸ್.ಆಲಗೂರ, ಮುತ್ತಪ್ಪ ಜಂಗಮ ಶೆಟ್ಟಿ, ಮುತ್ತಪ್ಪ ಬಿಂಗಿ ಸೇರಿದಂತೆ ಇತರರು ಉಪಸ್ಥಿತರಿದ್ದರು. ಸುನೀಲ ಮುದಗಲ್ ನಿರೂಪಿಸಿದರು. ಎ,ಜಿ ಕಬ್ಬಿನ ಸ್ವಾಗತಿಸಿ, ಅಸೋದಿ ವಂದಿಸಿದರು.