ಪ್ರತಿಯೊಬ್ಬರಿಂದ ಸಮಾಜದ ಋಣವನ್ನು ತೀರಿಸುವ ಕಾರ್ಯವಾಗಬೇಕು: ಡಾ. ಸಿದ್ಧರಾಮ ಶ್ರೀಗಳು

ಲೋಕದರ್ಶನ ವರದಿ

ಬೆಳಗಾವಿ 08:  ಪ್ರತಿಯೊಬ್ಬರು ಸಮಾಜದ ಋಣವನ್ನುಂಡೆ ಬೆಳೆದವರು ಇದರಿಂದ ಯಾರೂ ಹೊರತಲ್ಲ ಸ್ವಾಮಿಜಿಗಳೂ ಹೊರತಲ್ಲ  ಅವರೂ ಸಹ ಸಮಾಜದ ಋಣದಲ್ಲಿರುವವರೇ ಕಾರಣ ಪ್ರತಿಯೊಬ್ಬರೂ ಸಮಾಜ ಸೇವೆಯ ಮೂಲಕ ಸಮಾಜದ ಋಣವನ್ನು ತೀರಿಸುವ ಕಾರ್ಯ ಮಾಡಬೇಕು ಎಂದು ಡಾ.ತೋಂಟದ ಸಿದ್ಧರಾಮ ಸ್ವಾಮಿಜಿ ನುಡಿದರು.

ಅವರು ಬೆಳಗಾವಿ ನಾಗನೂರು ರುದ್ರಾಕ್ಷಿ ಮಠದ ದಿ:ಶಿವಬಸವ ಸ್ವಾಮಿಜಿಯವರ 129 ನೇ ಜಯಂತಿ ಮಹೋತ್ಸವ ಮತ್ತು ಡಾ:ತೋಂಟದ ಸಿದ್ಧರಾಮ ಸ್ವಾಮಿಜಿ ,ನಾಗನೂರು ರುದ್ರಾಕ್ಷಿ ಮಠ,ಬೆಳಗಾವಿ ಅವರ ಗುರುವಂದನ ಕಾರ್ಯಕ್ರಮದ ಅಂಗವಾಗಿ ಮೂರನೇ ದಿನವಾದ ಇಂದು ಹಮ್ಮಿಕೊಳ್ಳಲಾಗಿದ್ದ  "ಸೇವಾರತ್ನ"  ಮತ್ತು  "ಮಕ್ಕಳ ಸಾಹಿತ್ಯ ಪ್ರಶಸ್ತಿ" ಪ್ರದಾನ ಕಾರ್ಯಕ್ರಮದಲ್ಲಿ ಆಶಿರ್ವಚನ ನೀಡುತ್ತಿದ್ದರು.

ಗಾಳಿ, ಬೆಳಕು, ನೀರು, ಆಹಾರ ಎಲ್ಲರಿಗೂ ಬೇಕೆ ಬೇಕು ಅದರಂತೆ ಸ್ವಾಮಿಗಳು ಎಲ್ಲರಿಗೂ ಬೇಕಾದವರಾಗಿ ಬಾಳಿ ಬದುಕುದಾಗ ಮಾತ್ರ ಸ್ವಾಮಿಗಳ ಬದುಕು ಸಾರ್ಥಕವಾಗುತ್ತದೆ ಎಂಬಂತೆ ಅದ್ವೀತಿಯ ಕಾರ್ಯ ಮಾಡಿ ತೋರಿಸಿದ ಲಿಂಗೈಕ್ಯ ಡಾ:ಶಿವಬಸವ ಶ್ರೀಗಳ ಕಾರ್ಯಗಳೇ ನಮಗೆಲ್ಲ ಸ್ಪೂತರ್ಿದಾಯಕ ಎಂದರು.

ಸ್ವತ: ಹೆಚ್ಚು ಕಲಿಯದ,ಪದವಿ ಪಡೆಯದ ಡಾ:ಶಿವಬಸವ ಶ್ರೀಗಳು ಸಾವಿರಾರು ಜನರನ್ನು ಪದವಿ ಪಡೆಯುವಂತೆ ಮಾಡಿದರು ಮಹಾವಿದ್ಯಾಲಯ,ವಿಶ್ವ ವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡುವಂತೆ ಮಾಡಿದರು.ಅವರ ಸಾಮಾಜಿಕ ಕಾರ್ಯಗಳಿಗಾಗಿ ಅವರಿಗೆ ಗೌರವ ಡಾ: ಪದವಿ ಲಭಿಸಿದಾಗ ಅದರಿಂದ ನಮ್ಮ ಪ್ರಸಾದ ನಿಲಯದ ಮಕ್ಕಳಿಗೆ ಎನಾದರೂ ಲಾಭವಾಗುತ್ತದೆಯೇ ಎಂದು ಪ್ರಶ್ನಿಸಿದ ಮುಗ್ಧ ಮನಸಿನ ಶ್ರೀಗಳಿಂದಾಗಿ ಒಂದು ಕಾಲದಲ್ಲಿ ಯಾರೂ ಹೆಸರೇ ಕೇಳಿರದ ನಾಗನೂರು ರುದ್ರಾಕ್ಷಿ ಮಠಕ್ಕೆ ವಿಶೇಷ ಸ್ಥಾನ ಗೌರವ,ಹೆಸರು ಲಭಿಸಿತು ಬಾರತದ ಭೂಪಟದಲ್ಲಿ ಅದಕ್ಕೊಂದು ಸ್ಥಾನ ದೊರೆಯುವಂತಾಯಿತು "ಮಠದಿಂದ ಘಟ ಅಲ್ಲ-ಘಟದಿಂದ ಮಠ"ಎಂಬಂತೆ ಮಠದಿಂದ ಸ್ವಾಮಿಗಳಿಗೆ ಖ್ಯಾತಿ ಬರಬಾರದು,ಸ್ವಾಮಿಗಳಿಂದ ಮಠಕ್ಕೆ ಹೆಸರು ಬರಬೇಕು ಎನ್ನುವಂತೆ ಬಾಳಿದವರು ಎಂದರು.

ಹುಲ್ಲೋಳಿಹಟ್ಟಿ-ಘೋಡಗೇರಿ ಶಿವಾನಂದ ಮಠದ ಕೈವಲ್ಯಾನಂದ ಸ್ವಾಮಿಜಿ ಅವರು ಆಶಿರ್ವಚನ ನೀಡುತ್ತ ಸರಕಾರಗಳೇ ಮಾಡದಷ್ಟು ಕಾರ್ಯವನ್ನು ಲಿಂಗಾಯತ ಮಠಗಳು ಮಾಡಿವೆ ಅದರಲ್ಲಿ ಇತ್ತಿಚಿನ ದಿನಗಳಲ್ಲಿ ಗದುಗಿನ ತೋಂಟದ ಸಿದ್ದಲಿಂಗ್ ಶ್ರೀಗಳ ಕಾರ್ಯ ಇನ್ನು ಹೆಚ್ಚಿನದು,ಅವರು ಸುಂದವಾದ ಗುಡಿ ಕಟ್ಟುವುದರೊಂದಿಗೆ ಅದಕ್ಕೆ ಬಂಗಾರದ ಕಳಸವಿಡುವಂತೆ ಬೆಳಗಾವಿ ಸಿದ್ದರಾಮ ಶ್ರೀಗಳನ್ನು ಉತ್ತರಾಧಿಕಾರಿಯನ್ನಾಗಿ ಮಾಡಿದ್ದು ಇನ್ನು ದೊಡ್ಡ ಕಾರ್ಯವಾಗಿದೆ ಡಾ:ಸಿದ್ಧರಾಮ ಶ್ರೀಗಳನ್ನು ನೀವೃತ್ತಿಯಾಗುವ ಸಮಯದಲ್ಲಿ ಮತ್ತೆ ಪ್ರವೃತ್ತಿಗೆ ಹಚ್ಚಿ ಹೋದರು.

ಲಿಂಗೈಕ್ಯ ಸಿದ್ಧಲಿಂಗ ಶ್ರೀಗಳು ಕೇವಲ ಗದುಗಿನ ಮಠಕ್ಕೆ ಮಾತ್ರ ಡಾ:ಸಿದ್ಧರಾಮ ಶ್ರೀಗಳಿಗೆ ಉತ್ತರಾಧಿಕಾರತ್ವ ನೀಡಲಿಲ್ಲ ಅವರ ಕಾರ್ಯ ಇಡಿ ಒಂದು ಸಂಸ್ಕೃತಿಗೆ ಉತ್ತರಾಧಿಕಾರತ್ವ ನೀಡಿದ್ದಾರೆ ಅದನ್ನವರು ಸಮರ್ಥವಾಗಿ ನಡೆಸಿಕೊಂಡು ಹೋಗುತ್ತಾರೆಂಬ ಅಚಲ ನಂಬಿಕೆ ಅವರದಾಗಿತ್ತು ಎಂದರು.

ಈ ಕಾರ್ಯಕ್ರಮದ ನೇತೃತ್ವವದಲ್ಲಿದ್ದ ಅಥಣಿ ಮೋಟಗಿಮಠದ ಚನ್ನಬಸವ ಸ್ವಾಮಿಜಿ ಆಶೀರ್ವಚನ ನೀಡಿ ದೇಶ ಕಾಯುವ ಯೋಧ ಮತ್ತು ಸಮಾಜ ಕಾಯುವ ಸ್ವಾಮಿ ಇಬ್ಬರೂ ಸದಾಕಾಲ ಜಾಗೃತರಾಗಿರಬೇಕು,ಅವರಿಬ್ಬರೂ ಮಲಗಿದ್ದೇ ಆದಲ್ಲಿ ದೇಶಕ್ಕೆ ಅಪಾಯ ತಪ್ಪದು. ಸ್ವಾಮಿಗಳಾಗುವದು ಸುಲಭದ ಕೆಲಸವಲ್ಲ ಸದಾಕಾಲ ಬೆಂಕಿಯ ಉಂಡೆಯ ಮೇಲೆ ಕುಳಿತು ತನ್ನನ್ನು ತಾನು ಸುಟ್ಟುಕೊಂಡು ಸಮಾಜಕ್ಕೆ ತಂಗಾಳಿಯನ್ನು ನೀಡುವ ಕಾರ್ಯ ಮಾಡಬೇಕಾಗುತ್ತದೆ ಸ್ವಾಮಿಗಳಾದವರೂ ತಮ್ಮನ್ನು ತಾವು ,ಸಮಾಜಕ್ಕೆ ಸಂಪೂರ್ಣವಾಗಿ ತೊಡಗಿಸಿಕೊಳ್ಳಬೇಕು ಆಗಲೇ ಸ್ವಾಮಿತ್ವಕ್ಕೊಂದು ಮಹತ್ವ ಅದರಂತೆ ಬಾಳಿ ಬದುಕಿದವರು ಸಿದ್ದಲಿಂಗ ಶ್ರೀಗಳು ಎಂದ ಅವರು ಇಂದು ಸ್ವಾಮಿಗಳು ಬಹಳಷ್ಟು ಆದರೆ ಸಮಾಜಕ್ಕಾಗಿ ಸವರ್ಿಸ್ ಮಾಡುವ ಸ್ವಾಮಿಗಳು ಬಹಳ ಕಡಿಮೆ ಆಗುತ್ತಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ಶ್ರೀಮಠಕ್ಕೆ ತಲಾ ಒಂದು ಲಕ್ಷ ರೂಪಾಯಿಗಳ ದೇಣಿಗೆ ನೀಡಿದ ಸದ್ಭಕ್ತರಾದ ಪಂತಬಾಳೆಕುಂದ್ರಿಯ ಲಕ್ಷ್ಮೀ ಬಸವರಾಜ ಮಡಿವಾಳರ ಮತ್ತು ಬೈಲಹೊಂಗಲ ತಾಲೂಕಿನ ನಾಗನೂರು ಗ್ರಾಮದ ಬಾಳಪ್ಪ ಎನ್.ತಲ್ಲೂರ ಅವರುಗಳನ್ನು ಸನ್ಮಾನಿಸಲಾಯಿತು. ಕಾರಂಜಿಮಠದ ಗುರುಸಿದ್ದ ಸ್ವಾಮಿಜಿ ಸಾನಿಧ್ಯದಲ್ಲಿ ಉಪಸ್ಥಿತರಿದ್ದರು.