ಲೋಕದರ್ಶನ ವರದಿ
ಬೆಳಗಾವಿ: 20 : ಜಿಲ್ಲಾ ಪಂಚಾಯತ ಮತ್ತು ಉಪನಿದರ್ೇಶಕರ ಕಾರ್ಯಾ ಲಯ ಸಾರ್ವಜನಿಕ ಶಿಕ್ಷಣ ಇಲಾಖೆ ಬೆಳಗಾವಿ (ದಕ್ಷಿಣ) ವತಿಯಿಂದ ಡಿಸೆಂಬರ್ 19 ರಂದು ಆಯೋಜಿಸಲಾದ ವಿಕಲಚೇತನ ಮಕ್ಕಳ ಜಿಲ್ಲಾ ಮಟ್ಟದ ಆಟೋಟಗಳ ಸ್ಪರ್ಧೆ ಯಲ್ಲಿ ಕಿವುಡ ಮಕ್ಕಳ ಸರಕಾರಿ ಶಾಲೆಯ 5 ವಿದ್ಯಾರ್ಥಿನಿಯರು ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
14 ವರ್ಷದೊಳಗಿನ ವಿಭಾಗದಲ್ಲಿ 100 ಮೀ. ಓಟದಲ್ಲಿ ಲಕ್ಷ್ಮೀ ಜಟ್ಟೆನ್ನವರ, ಜಾವಲಿನ ಎಸೆತದಲ್ಲಿ ಸವಿತಾ ಪಟ್ಟಣಶೆಟ್ಟಿ, ಗುಂಡು ಎಸೆತದಲ್ಲಿ ತಾವೂರ ಮುಲ್ಲಾ, ಮತ್ತು 17 ವರ್ಷದೊಳಗಿನ ವಿಭಾಗದಲ್ಲಿ ಜಾವಲಿನ ಎಸೆತದಲ್ಲಿ ವೈಷ್ಣವಿ ಕೊಟಗಿ, ಗುಂಡು ಎಸೆತದಲ್ಲಿ ಯಶೋಧಾ ಜಂತಿನಕಟ್ಟಿ ಈ ವಿದ್ಯಾರ್ಥಿ ನಿಯರ ಸಾಧನೆಗೆ ಪತ್ರಾಂಕಿತ ಅಧೀಕ್ಷಕರಾದ ಆರ್.ಬಿ. ಬನಶಂಕರಿ ಹಾಗೂ ಶಾಲಾ ಸಿಬ್ಬಂದಿ ವರ್ಗದವರು ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿದ್ದಾರೆ.