ಪಿಎಂ ಕೇರ್ಸ್ ನಿಧಿಗೆ ೧೦೦ ಕೋಟಿ, ಕರ್ನಾಟಕಕ್ಕೆ ೫ ಕೋಟಿ ನೆರವು ಪ್ರಕಟಿಸಿದ ಡಿಮಾರ್ಟ್

ನವದೆಹಲಿ, ಏ ೫,  ರಕ್ಕಸ  ಕೊರೊನಾ  ವೈರಸ್      ವಿರುದ್ದ   ದೇಶದಲ್ಲಿ  ಸಾರಲಾಗಿರುವ   ಸಮರಕ್ಕೆ    ಉದ್ಯಮಿಗಳು, ಸೆಲೆಬ್ರಿಟಿಗಳು ಹಾಗೂ ಕ್ರೀಡಾಪಟುಗಳು  ಸ್ವಯಂಪ್ರೇರಿತವಾಗಿ      ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.  ಕೇಂದ್ರ ಹಾಗೂ ರಾಜ್ಯ  ಸರ್ಕಾರಗಳಿಗೆ  ಭಾರಿ ಪ್ರಮಾಣದ  ಹಣದ ನೆರವು ಪ್ರಕಟಿಸುತ್ತಿವೆ.  ಈ ಕ್ರಮವಾಗಿ  ಅವೆನ್ಯೂ ಸೂಪರ್‌ಮಾರ್ಟ್ಸ್   ರಿಟೈಲ್      ಬ್ರಾಂಡ್   ಡಿಮಾರ್ಟ್    ೧೫೫ ಕೋಟಿ    ಹಣಕಾಸು ನೆರವು ಪ್ರಕಟಿಸಿದೆ.ಪ್ರಧಾನ ಮಂತ್ರಿ   ಕೇರ್ಸ್  ನಿಧಿಗೆ  ೧೦೦ ಕೋಟಿ ರೂ  ದೇಣಿಗೆ  ನೀಡುವುದಾಗಿ   ಪ್ರಕಟಿಸಿದೆ.  ಕೊರೊನಾ  ಬಾಧಿತ  ರಾಜ್ಯಗಳಿಗೆ  ೫೫ ಕೋಟಿ ರೂ. ನೀಡುವುದಾಗಿ ತಿಳಿಸಿದೆ.
ಈ ಕುರಿತು   ಡಿಮಾರ್ಟ್  ಪ್ರವರ್ತಕ   ರಾಧಾಕೃಷ್ಣನ್  ಡಮಾನಿ  ಮಾತನಾಡಿ,  ಭಾರತ  ಸೇರಿದಂತೆ   ಪ್ರಪಂಚದ ಎಲ್ಲ ದೇಶಗಳು ಹಿಂದೆಂದೂ ಕಂಡಿರದ  ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿವೆ  ಜನರನ್ನು  ರಕ್ಷಿಸಲು  ಕೇಂದ್ರ, ರಾಜ್ಯ ಸರ್ಕಾರಗಳು ಕೈಗೊಂಡಿರುವ  ಎಲ್ಲ  ಕ್ರಮಗಳಿಗೆ   ನಮ್ಮ ಪೂರ್ಣ ಬೆಂಬಲವಿದೆ.  ದೇಶದ ಜನರನ್ನು  ರಕ್ಷಿಸಲು ಪ್ರತಿಯೊಬ್ಬರೂ  ತಮ್ಮ ಕೈಲಾಗುವ      ಪ್ರಯತ್ನ ನಡೆಸಬೇಕು ಎಂದು   ಕರೆ ನೀಡಿದ್ದಾರೆ.   ಡಿಮಾರ್ಟ್  ಪಿ ಎಂ ಕೇರ್ಸ್ ೧೦೦ ಕೋಟಿ  ಪ್ರಕಟಿಸಿದೆ.. ಮಹಾರಾಷ್ಟ್ರ, ಗುಜರಾತ್ ಗೆ ತಲಾ ೧೦ ಕೋಟಿ,  ಆಂಧ್ರ ಪ್ರದೇಶ, ತೆಲಂಗಾಣ, ಕರ್ನಾಟಕ, ರಾಜಸ್ಥಾನ, ಪಂಜಾಬ್ ರಾಜ್ಯಗಳಿಗೆ  ತಲಾ ೫ ಕೋಟಿ,  ತಮಿಳುನಾಡು, ಚತ್ತೀಸಗಡ, ಉತ್ತರ ಪ್ರದೇಶ  ಹಾಗೂ ಮಧ್ಯ ಪ್ರದೇಶಗಳಿಗೆ  ತಲಾ ೨.೫ ಕೋಟಿ ರೂಪಾಯಿ  ಹಣಕಾಸು  ನೆರವು  ಪ್ರಕಟಿಸಿದೆ.