ಬೆಳಗಾವಿ 13: ತಮ್ಮ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕನರ್ಾಟಕ ರಾಜ್ಯ ಸಕರ್ಾರಿ ದಿನಗೂಲಿ ನೌಕರರ ಮಹಾಮಂಡಲದಿಂದ ವಿಧಾನಮಂಡಲ ಅಧಿವೇಶನ ನಡೆಯುವ ಮಾರ್ಚ 11ರಿಂದ ಮೂರು ದಿನಗಳ ಕಾಲ ಧರಣಿ ನಡೆಸುವ ಸಂಬಂಧ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಸೋಮವಾರ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ರಾಜ್ಯ ಸಕರ್ಾರಿ ದಿನಗೂಲಿ ನೌಕರರ ಮಹಾಮಂಡಲದ ಪದಾಧಿಕಾರಿಗಳು ರಾಜ್ಯ ಸಕರ್ಾರಿ ಇಲಾಖೆಗಳಲ್ಲಿ, ನಿಗಮಗಳಲ್ಲಿ, ಜಿಲ್ಲಾ ಪಂಚಾಯತಿಗಳಲ್ಲಿ ಜಾರಿಯಲ್ಲಿರುವ ಹೊರಗುತ್ತಿಗೆ ಆಧಾರದ ಮೇಲೆ ನೌಕರರನ್ನು ನೇಮಿಸುವ ಪದ್ಧತಿಯನ್ನೆ ರದ್ಧುಗೊಳಿಸಬೇಕು.
ಯಾಕೆಂದರೆ ಗುತ್ತಿಗೆದಾರರಿಗೆ ಸಕರ್ಾರವೂ ಶೇ.10ರಷ್ಟು ಕಮಿಷನ್ ಕೊಡುವ ಜೊತೆಗೆ, ಪ್ರತಿ ನೌಕರನಿಗೆ ನೀಡಲಾಗುವ ಕನಿಷ್ಠ ವೇತನದ ಮೇಲೆ ಕೇಂದ್ರ ಸಕರ್ಾರಕ್ಕೆ ಶೇ. 18ರಷ್ಟು ಜಿಎಸ್ಟಿ ತುಂಬಬೇಕು. ಅಂದರೆ ಹೊರಗುತ್ತಿಗೆಯ ಮೇಲೆ ರಾಜ್ಯದಲ್ಲಿ ಏಷ್ಟು ನೌಕರರಿಂದ ಸಕರ್ಾರ ಹಾಗೂ ನಿಗಮಗಳು ಸೇವೆ ಪಡೆಯುತ್ತಿವೆಯೋ..? ಅಷ್ಟೂ ನೌಕರರ ಮೇಲೆ ಒಬ್ಬೊಬ್ಬರಿಗೆ ಶೇ.28ರಷ್ಟು ಹೆಚ್ಚು ಹೊರೆ ಮಂಜೂರಾಗದಿದ್ದರೂ ಈ ಕೆಲಸಗಳು ಅವಶ್ಯವಾದ್ದರಿಂದ ಅವರನ್ನು ಹೊರ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳುವ ವಿಶೇಷ ಅಧಿಕಾರ ನೀಡಬೇಕು. ಅದೇ ರೀತಿ ಪ್ಯಾರಾ 4ಕ್ಕೂ ತಿದ್ದುಪಡಿ ತರುವುದು ಹಾಗೂ ಯಾವುದೇ ಇಲಾಖೆಯಲ್ಲಿ ತೆಗೆದಿರುವ ಹೊರ ಗುತ್ತಿಗೆ ನೌಕರರನ್ನು ಮರು ನೇಮಕಕ್ಕೆ ಆದೇಶಿಸಬೇಕು.
ಅದೇ ರೀತಿ ಹೊರಗುತ್ತಿಗೆ ನೌಕರರು 10-15 ವರ್ಷಗಳಿಂದ ಕೆಲಸ ಮಾಡುತ್ತಿರುವ ಎಲ್ಲಾ ನೌಕರರನ್ನು ಕಾಯಂಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಬೆಂಗಳೂರಿನಲ್ಲಿ ಮಾಚರ್್ 11ರಿಂದ ಮೂರು ದಿನಗಳ ಕಾಲ ಪ್ರತಿಭಟನೆ ನಡೆಸಲಾಗುವುದು ಎಂದು ಪ್ರತಿಭಟನಾಕಾರರು ತಿಳಿಸಿದರು. ಇಂದಿನ ಪ್ರತಿಭಟನೆಯಲ್ಲಿ ಡಾ. ಕೆ.ಎಸ್. ಶಮರ್ಾ, ವಿ.ಜಿ. ಸೊಪ್ಪಿನಮಠ, ರಮೇಶ ಕಾತರಕಿ, ಯಲ್ಲಪ್ಪ ಚನ್ನನವರ, ಐ.ಎಮ್. ಸನದಿ, ಪ್ರಕಾಶ ಗಡ್ಡಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.