ದವಿಂದರ್ ಸಿಂಗ್ ಪ್ರಕರಣ: ದಕ್ಷಿಣ ಕಾಶ್ಮೀರದಲ್ಲಿ ಎರಡನೇ ದಿನವೂ ಎನ್‍ಐಎ ದಾಳಿ

ಶ್ರೀನಗರ, ಫೆ .3, ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದಾರೆನ್ನಲಾದ ಜಮ್ಮು-ಕಾಶ್ಮೀರ ಡಿವೈಎಸ್ ಪಿ ದವಿಂದರ್ ಸಿಂಗ್ ಅವರನ್ನು ಭಯೋತ್ಪಾದಕರೊಂದಿಗೆ ಬಂಧಿಸಿದ ಪ್ರಕರಣಕ್ಕೆ ಸಂಬಂಧಿಸಿ, ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‍ಐಎ) ದಕ್ಷಿಣ ಕಾಶ್ಮೀರದಲ್ಲಿ ಸತತ ಎರಡನೇ ದಿನವೂ ದಾಳಿಗಳನ್ನು ಮುಂದುವರೆಸಿದೆ. 

ಡಿವೈಎಸ್ ಪಿ ದವಿಂದರ್ ಸಿಂಗ್ ವಿರುದ್ಧ ಹೆಚ್ಚಿನ ಸಾಕ್ಷ್ಯಗಳನ್ನು ಸಂಗ್ರಹಿಸಲು 20 ಸದಸ್ಯರ ಎನ್‍ಐಎ ತಂಡ ಶನಿವಾರ ಕಾಶ್ಮೀರಕ್ಕೆ ಆಗಮಿಸಿ ಸರಣಿ ದಾಳಿಗಳನ್ನು ನಡೆಸುತ್ತಿದೆ. ಹಿಜ್ಬುಲ್ ಮುಜಾಹಿದ್ದೀನ್ (ಎಚ್‍ಎಂ) ಸಂಘಟನೆಯ ಇಬ್ಬರು ಪ್ರಮುಖ ಉಗ್ರರೊಂದಿಗೆ ಸಿಂಗ್ ಬಂಧನಕ್ಕೊಳಗಾಗಿರುವುದು ಕೇಂದ್ರ ಮತ್ತು ಜಮ್ಮು-ಕಾಶ್ಮೀರ ಭದ್ರತಾ ಸಂಸ್ಥೆಗಳನ್ನು ಬೆಚ್ಚಿಬೀಳಿಸಿದೆ.

ಪಿಂಜೋರಾದಲ್ಲಿ ಒಮರ್ ದೋಬಿ ಎಂದು ಗುರುತಿಸಲ್ಪಟ್ಟ ಹಿಜ್ಬುಲ್ ಮುಜಾಹಿದ್ದೀನ್ (ಎಚ್‍ಎಂ) ಉಗ್ರನ ನಿವಾಸದ ಮೇಲೆ ದಾಳಿ ನಡೆಸಲಾಗಿದೆ. ಧಾರ್‍ಗ್ರಾಹ್‍ನ ಮತ್ತೊಬ್ಬ ಉಗ್ರ ಫರೂಕ್ ಅಹ್ಮದ್ ನಿವಾಸ ಮತ್ತು ಶೋಪಿಯಾನ್‍ನ ಕೆಲವು ಸ್ಥಳಗಳಲ್ಲಿ ದಾಳಿ ನಡೆಸಲಾಗಿದೆ. ದಕ್ಷಿಣ ಕಾಶ್ಮೀರ ಜಿಲ್ಲೆಯಾದ ಪುಲ್ವಾಮಾದ ಅವ್ರಿಗುಂಡ್ ಟ್ರಾಲ್ ನಲ್ಲಿರುವ ಡಿವೈಎಸ್ ಪಿ ಸಿಂಗ್ ಅವರ ನಿವಾಸದ ಮೇಲೂ ದಾಳಿ ನಡೆಸಲಾಗಿದೆ. ಭಾನುವಾರ ಶೋಪಿಯಾನ್‍ನ ವಿವಿಧ ಸ್ಥಳಗಳಲ್ಲಿ ಐದು ದಾಳಿಗಳನ್ನು ನಡೆಸಲಾಗಿದೆ ಎಂದು ಅಧಿಕೃತ ಮೂಲಗಳು ಸೋಮವಾರ ಬೆಳಿಗ್ಗೆ ಯುಎನ್‍ಐಗೆ ತಿಳಿಸಿವೆ. 

ಡಿವೈಎಸ್ಪಿ ಜತೆ ಬಂಧಿತರಾದ ಉಗ್ರರು ಶೋಪಿಯಾನ್ ಜಿಲ್ಲೆಯಲ್ಲಿ ಆಳವಾದ ಸಂಪರ್ಕ ಹೊಂದಿರುವುದರಿಂದ ಈ ಜಿಲ್ಲೆಯ ಕಡೆ ಹೆಚ್ಚು ಗಮನ ಹರಿಸಲಾಗುತ್ತಿದೆ.  ಡಿಐಜಿ ಶ್ರೇಣಿಯ ಅಧಿಕಾರಿಯ ನೇತೃತ್ವದ ತಂಡÅ ಶನಿವಾರ ಅನಂತ್‍ನಾಗ್ ಗೆ ತೆರಳಿ ಪೆÇಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಈ ದಾಳಿ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ದಾಳಿಗಳನ್ನು ನಡೆಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. 

ಜನವರಿ 11 ರಂದು ವಾಹನವೊಂದರಲ್ಲಿ ಸಾಗುತ್ತಿದ್ದಾಗ 280 ಕಿ.ಮೀ ಉದ್ದದ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಡಿವೈಎಸ್ಪಿಯನ್ನು ಇಬ್ಬರು ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್‍ಗಳಾದ ನವೀದ್ ಬಾಬು ಮತ್ತು ರಫಿ ಅಹ್ಮದ್ ಅವರೊಂದಿಗೆ ಜಮ್ಮು-ಕಾಶ್ಮೀರ ಪೊಲೀಸರು ಬಂಧಿಸಿದ್ದರು. 

ಸಿಂಗ್ ಅವರನ್ನು ಎನ್‍ಐಎ ಅಧಿಕಾರಿಗಳು ಜಮ್ಮುವಿನಲ್ಲಿ ವಿಚಾರಣೆ ನಡೆಸುತ್ತಿದ್ದಾರೆ. ಸಿಂಗ್ ಬಂಧನದ ನಂತರ ಕಣಿವೆಯ ಆತನ ನಿವಾಸದ ಮೇಲೆ ಜಮ್ಮು-ಕಾಶ್ಮೀರ ಪೋಲೀಸರು ಅನೇಕ ದಾಳಿಗಳನ್ನು ನಡೆಸಿದ್ದರು. ಪೊಲೀಸರ ಆರಂಭಿಕ ತನಿಖೆಯ ನಂತರ ಪ್ರಕರಣವನ್ನು ಎನ್‍ಐಎಗೆ ಹಸ್ತಾಂತರಿಸಲಾಗಿತ್ತು.  ಶ್ರೀನಗರ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಂಗ್ ಅವರನ್ನು ಜಮ್ಮು-ಕಾಶ್ಮೀರ ಪೊಲೀಸ್ ನ ವಿಮಾನ ಅಪಹರಣ ತಡೆ ವಿಭಾಗಕ್ಕೆ ನೇಮಿಸಲಾಗಿತ್ತು. ಕಳೆದ ಜನವರಿಯಲ್ಲಿ ಅವರ ಕಾಶ್ಮೀರಕ್ಕೆ ಭೇಟಿ ನೀಡಿದ್ದ ಅಮೆರಿಕ ರಾಯಭಾರಿ ಸೇರಿದಂತೆ ವಿದೇಶಿ ರಾಯಭಾರಿಗಳ ತಂಡವನ್ನು ಭದ್ರತಾ ಸಿಬ್ಬಂದಿಯ ಭಾಗವಾಗಿದ್ದ ಸಿಂಗ್ ಸ್ವಾಗತಿಸಿದ್ದರು.