ಜಾತಿ ರಹಿತ ಸಮಾಜದ ಪ್ರತಿಪಾದಕ ದಾಸಿಮಯ್ಯ :ಜಿಲ್ಲಾಧಿಕಾರಿ ಕಚೇರಿಯಲ್ಲಿ ಶರಣ ದಾಸಿಮಯ್ಯ ಜಯಂತಿ ಆಚರಣೆ

Dasimayya, the advocate of a casteless society: Sharan Dasimayya Jayanti celebrated at the District

ಜಾತಿ ರಹಿತ ಸಮಾಜದ ಪ್ರತಿಪಾದಕ ದಾಸಿಮಯ್ಯ :ಜಿಲ್ಲಾಧಿಕಾರಿ ಕಚೇರಿಯಲ್ಲಿ ಶರಣ ದಾಸಿಮಯ್ಯ ಜಯಂತಿ ಆಚರಣೆ 

 ಕಾರವಾರ 03  : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕನ್ನಡ ಮತ್ತ ಸಂಸ್ಕ್ರತಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಶರಣ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮದಲ್ಲಿ, ದಾಸಿಮಯ್ಯ ಅವರ ಭಾವಚಿತ್ರ ಕ್ಕೆ ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಪುಷ್ಪ ನಮನ ಸಲ್ಲಿಸಿ ಕಾರ್ಯಕ್ರಮ ಉದ್ಘಾಟಿಸಿದರು.ನಿವೃತ್ತ ಉಪನ್ಯಾಸಕ ಶಿವಾನಂದ ನಾಯ್ಕ ದೇವರ ದಾಸಿಮಯ್ಯ ಅವರ ಕುರಿತು ವಿಶೇಷ ಉಪನ್ಯಾಸ ನೀಡಿ, ವಚನಗಳ ಬ್ರಹ್ಮ ಎಂದೇ ಕರೆಯಲ್ಪಡುವ ದೇವರ ದಾಸಿಮಯ್ಯ ತಮ್ಮ ವಚನಗಳ ಮೂಲಕ ಸಮಾಜದ ಅಂಕು ಡೊಂಕುಗಳನ್ನು ತಿದ್ದುವಲ್ಲಿ ಮೊದಲಿಗರು. ಇವರು ಸಮಾಜದ ಒಳಿತಿಗಾಗಿ ,ಜಾತಿ ರಹಿತ ಸಮಾಜ ನಿರ್ಮಾಣಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅವರ ವಚನಗಳ ಅರ್ಥ, ಭಾವನೆ, ಆಲೋಚನೆಗಳು, ಆದರ್ಶ, ತತ್ವಗಳು ಇಂದಿನ ಕಾಲಘಟ್ಟಕ್ಕೂ ಅನ್ವಯವಾಗುವಂತದ್ದು ಎಂದರು.ತಮ್ಮ ಬದುಕಿಗಾಗಿ ಹಾಗೂ ಲೋಕದ ಒಳಿತಿಗಾಗಿ ಮೂಲ ವೃತ್ತಿಯನ್ನು ಅಳವಡಿಸಿಕೊಂಡು, ಇಡೀ ಸಮಾಜಕ್ಕೆ ಅಗತ್ಯವಿರುವ ಬಟ್ಟೆಗಳನ್ನು ನೇಯುವ ಮೂಲಕ ಸಮಾಜ ಸೇವೆಯಲ್ಲಿ ನಿಸ್ವಾರ್ಥವಾಗಿ ತೊಡಗಿಕೊಂಡು ತಮ್ಮ ವೈಚಾರಿಕ ವಿಚಾರಗಳೊಂದಿಗೆ ಎಲ್ಲರ ಗಮನ ಸೆಳೆದವರು ದಾಸಿಮಯ್ಯ ಎಂದರು.ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ಅಧಿಕಾರಿ ಮಂಗಳ ಎಂ. ನಾಯ್ಕ, ಶಿಕ್ಷಕ ಮಹಾದೇವ ರಾಣಾ, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಮತ್ತಿತರರು ಉಪಸ್ಥಿತರಿದ್ದರು....