ಲೋಕದರ್ಶನ
ವರದಿ
ಬೆಳಗಾವಿ
19: ಸ್ಥಳೀಯ ರುಕ್ಮೀಣಿ ನಗರ ಲಕ್ಷ್ಮೀ-ರೇಣುಕಾ
ಮಂದಿರದಲ್ಲಿ ದಸರಾ ನವರಾತ್ರಿ ನಿಮಿತ್ತ
ಹಮ್ಮಿಕೊಂಡಿದ್ದ 9 ದಿನಗಳ ಪ್ರವಚನ ಕಾರ್ಯಕ್ರಮ ಗುರುವಾರ ಸಮಾಪ್ತಿಗೊಂಡಿತು.
9 ದಿನಗಳವರೆಗೆ
ದೇವಿ ಪ್ರವಚನವನ್ನು ಭಾರತಿ ಕುಡಚಿಮಠ, ಬಸವರಾಜ ಮುರಗೋಡ ಅವರು ಅತ್ಯಂತ ಮಾಮರ್ಿಕವಾಗಿ
ಹೇಳಿ ಜನರ ಮೆಚ್ಚುಗೆಗೆ ಪಾತ್ರರಾದರು.
ಈ ಪ್ರವಚನಕಾರರನ್ನು ಇದೇ ಸಂದರ್ಭದಲ್ಲಿ ಶಾಲು
ಹೊದಿಸಿ ಸತ್ಕರಿಸಿ ಗೌರವಿಸಲಾಯಿತು.
ಈ ನಿಮಿತ್ತ ಏರ್ಪಡಿಸಿದ ಕಾರ್ಯಕ್ರಮದಲ್ಲಿ ನಿರುಪಾದಯ್ಯ ಕಲ್ಲೋಳಿಮಠ, ಮಲ್ಲಿಕಾಜರ್ುನ ಶಿರಗುಪ್ಪಿಶೆಟ್ಟರ, ಗೋಪಾಲ ಖಟಾವಕರ, ಎಸ್.ಎಂ.ಪಾಟೀಲ,
ಸುರೇಂದ್ರ ಗುರುಸ್ವಾಮಿ ಇವರು ಮಾತನಾಡಿದರು. ಅರ್ಚಕಿ
ಪಾರ್ವತಿ ಕಮತಿ ಪೂಜೆ ನೆರವೇರಿಸಿದರು.
ಕಾರ್ಯಕ್ರಮದಲ್ಲಿ
ಸಿದ್ದಪ್ಪ ಪೂಜಾರಿ, ಮಲ್ಲಪ್ಪ ಬೋರಗಲ್ಲಿ, ಎಸ್.ಪಿ ಎನ್.ವ್ಹಿ ಬರಮನಿ, ನಿವೃತ್ತ
ಪ್ರಾಚಾರ್ಯ ಢವಳೇಶ್ವರ, ಈಶ್ವರ ಕುಡಚಿಮಠ, ಸುಮನ ಬೋವಿ ಸೇರಿದಂತೆ
ಅನೇಕರು ಭಾಗವಹಿಸಿದ್ದರು. ಕೊನೆಗೆ ದೇವಸ್ಥಾನದ ಎದುರಿಗೆ ಬನ್ನಿ ಮುಡಿದು ಪರಸ್ಪರ ವಿನಿಮಯ ಮಾಡಿಕೊಳ್ಳಲಾಯಿತು.
ಚಾಂಗದೇವ
ಪಲ್ಲಕ್ಕಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರ ನಿಮಿತ್ತ
ವಿಶೇಷ ಪೂಜೆ ಸಲ್ಲಿಸಲಾಯಿತು. ಚಾಂಗದೇವ
ಅರ್ಚಕ ಸುಭಾಷ ಮಾತಂಗಿ ಉಪಸ್ಥಿತರಿದ್ದರು.