ದಾಸರ ವಚನ ಕೀರ್ತನೆಗಳು ಸದಚಾರಿಗಳನ್ನಾಗಿಸುವಲ್ಲಿ ಸಫಲ

ಧಾರವಾಡ 16:  ನಾಡಿನಲ್ಲಿ ಆಗಿ ಹೋಗಿರುವ ಹರಿದಾಸರು, ಶರಣರು ಜನಸಾಮಾಮಾನ್ಯರ ಮನದಲ್ಲಿ ಶಾಶ್ವತವಾಗಿ ಉಳಿಯುವಂತೆ ಕನ್ನಡದಲ್ಲಿ ಸರಳವಾಗಿ, ತಿಳಿಯಾಗಿ ಕೀರ್ತನೆಗಳನ್ನು, ವಚನಗಳನ್ನು, ಸುಳಾದಿ, ಹಾಡುಗಳನ್ನು ರಚಿಸಿ, ಜಾಗೃತಿಯನ್ನು ಉಂಟು ಮಾಡಿ, ಅವರ ಸದಚಾರಿಗಳಾಗಿ ಜೀವನ ನಡೆಸುವಂತೆ ಮಾಡುವಲ್ಲಿ ಸಫಲರಾಗಿದ್ದಾರೆ ಎಂದು ಹುಬ್ಬಳ್ಳಿಯ ದಾಸಸಾಹಿತ್ಯ ವಿದ್ವಾಂಸ ಪಂ. ವಿದ್ಯಾರಶ್ಮಿ ಸಮೀರಆಚಾರ್ಯ ಕಂಠಪಲ್ಲಿಯವರು ಹೇಳಿದರು. 

ಕರ್ನಾ ಟಕ ವಿದ್ಯಾವರ್ಧಕ ಸಂಘವು ಸತ್ಯಪ್ರಮೋದ ಹರಿದಾಸ ಸಾಹಿತ್ಯ ಪ್ರತಿಷ್ಠಾನದ ಉತ್ತರಾಧಿಮಠ ದತ್ತಿ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ಸತ್ಯ ಪ್ರಮೋದ ಹರಿದಾಸ ಸಾಹಿತ್ಯ ಪ್ರಶಸ್ತಿ-2020 ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮತ್ತು ಪ್ರಮಾಣ ಪತ್ರ ವಿತರಣೆ ಮಾಡಿ ಅವರು ಮಾತನಾಡುತ್ತಿದ್ದರು. 

ಹರಿದಾಸರು ಕನ್ನಡ ಸಾಹಿತ್ಯ ಹಾಗೂ ಸಂಗೀತ ಕ್ಷೇತ್ರಕ್ಕೆ ನೀಡಿದ ಕೊಡುಗೆ ಬಗ್ಗೆ ವಿವರಿಸುತ್ತಾ, ಕನ್ನಡ, ಉಳಿಸಿ, ಬೆಳೆಸುವ ಬಗ್ಗೆ ಎಲ್ಲರೂ ಕನ್ನಡದಲ್ಲಿ ತಮ್ಮ ನಿತ್ಯ ಜೀವನ ನಡೆಸುವ ಬಗ್ಗೆ ತಮ್ಮ ವಿದ್ವತ್ಪೂರ್ಣ ಉಪನ್ಯಾಸದಲ್ಲಿ ದಾಸರು, ಶರಣರು, ತೋರಿದ ಸನ್ಮಾರ್ಗದ ಕುರಿತು ವಿವರಣೆ ನೀಡಿದರು. 

ಕ.ವಿ.ವ. ಸಂಘದ ಅಧ್ಯಕ್ಷ ನಾಡೋಜ ಡಾ. ಪಾಟೀಲ ಪುಟ್ಟಪ್ಪ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಪಂ. ಸಮೀರಆಚಾರ್ಯ ಕಂಠಪ್ಲಲಿಯವರು ವ್ಯಕ್ತಪಡಿಸಿದ ಸಂಗತಿಗಳನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಮತ್ತು ತಾವು ಇಂದು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಾಕ್ಷಾತ್ ಮಂತ್ರಾಲಯ ಗುರುಗಳಾದ ರಾಘವೇಂದ್ರ  ತೀರ್ಥರ ಅನುಗ್ರಹ ಪಡೆದಂತೆ ಆಗಿದೆ ಎಂದು ಸಂತೋಷ ವ್ಯಕ್ತಪಡಿಸಿದರು. ಜಯಶ್ರೀ ಗುತ್ತಲ ಅವರು ಜಾನಪದ ಹಾಗೂ ದಾಸ ಸಾಹಿತ್ಯದಲ್ಲಿ ಸಲ್ಲಿಸಿದ ಸೇವೆಯನ್ನು ಕೊಂಡಾಡಿದರು. 

ಕರ್ನಾ ಟಕ ಗ್ರಾಮೀಣ ಬ್ಯಾಂಕಿನ ನಿವೃತ್ತ ಅಧಿಕಾರಿ ಹಾಗೂ ಪುರಂದರ ಮಂಟಪದ ಕೋಶಾಧ್ಯಕ್ಷ ಸಿ. ನಾಗರಾಜ ಅವರು ಕಾರ್ಯಕ್ರಮದ ಪೂರ್ವಭಾವಿ ಜರುಗಿದ 'ಹರಿದಾಸರು ಕಂಡ ಮಂತ್ರಾಲಯ ಗುರುಗಳ ಹಾಡುಗಳ ಸ್ಪರ್ಧೆಯ ನಿರ್ಣಾ ಯಕತ್ವ ವಹಿಸಿ, ಮೂಲ ವೃಂದಾವನ ಮಂತ್ರಾಲಯದಿಂದ ಬಂದ ಶೇಷವಸ್ತ್ರ ಹಾಗೂ ಮಂತ್ರಾಕ್ಷತೆಗಳನ್ನು  ನಾಡೋಜ ಡಾ. ಪಾಟೀಲ ಪುಟ್ಟಪ್ಟ ಹಾಗೂ ಎಸ್.ಬಿ. ಗುತ್ತಲ ಅವರನ್ನು ಸನ್ಮಾನಿಸಿ ಇರ್ವರೂ ಭೀಷ್ಮ ಹಾಗೂ ದ್ರೋಣರಿದ್ದಂತೆ ಎಂದು ಗೌರವ ಸೂಚಿಸಿ ಸನ್ಮಾನಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ  ಪ್ರಕಾಶ ಎಸ್. ಉಡಿಕೇರಿ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯ ಸತೀಶ ತುರಮರಿ ಅವರು ಮಾಡುತ್ತಿರುವ ಕಾರ್ಯವನ್ನು ಶ್ಲಾಘಿಸಿ, ಅಭಿನಂದನೆ ಸಲ್ಲಿಸಿ, ಗೌರವಿಸಿದರು. 

ಸ್ಪರ್ಧಾ  ಕಾರ್ಯಕ್ರಮದ ನಂತರ ಹುಬ್ಬಳ್ಳಿಯ ಪದ್ಮಜಾ ಉಮರ್ಜಿ  ಹಾಗೂ ಸಂಧ್ಯಾ ದೀಕ್ಷಿತ ಇವರ ನೇತೃತ್ವದ ತಂಡವು ರಾಘವೇಂದ್ರ ವಿಜಯ ರೂಪಕವನ್ನು ಅಮೋಘವಾಗಿ ಪ್ರಸ್ತುತಪಡಿಸಿದರು. 'ರಾಘವೇಂದ್ರ ವಿಜಯ' ದಾಸ ಸಾಹಿತ್ಯ ರೂಪಕವನ್ನು ಧಾರವಾಡ ಎಸ್.ಡಿ.ಎಂ. ದಂತಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಕೃತಿಕಾ ಸತ್ಯಭೋಧ ಗುತ್ತಲ  ಉದ್ಘಾಟಿಸಿದರು. 

ಸ್ಪಧರ್ಧಾ  ಕಾರ್ಯಕ್ರಮವನ್ನು ಪ್ರತಿಷ್ಠಾನದ ಸರೋಜಾರಾವ್ ನಿರ್ವಹಿಸಿದರು. ಶ್ರೀನಿವಾಸ ಕುಲಕರ್ಣಿ  ಅತಿಥಿಗಳನ್ನು ಪರಿಚಯಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಪ್ರಕಾಶ ಎಸ್. ಉಡಿಕೇರಿ ಸ್ವಾಗತಿಸಿದರು. ಪ್ರತಿಷ್ಠಾನದ ಅಧ್ಯಕ್ಷ ಎಸ್.ಬಿ. ಗುತ್ತಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕಾರಿ ಸಮಿತಿ ಸದಸ್ಯರು, ಜನೇವರಿ ತಿಂಗಳ ದತ್ತಿ ಕಾರ್ಯಕ್ರಮಗಳ ಸಂಯೋಜಕ ಸತೀಶ ತುರಮರಿ ಕಾರ್ಯಕ್ರಮ ನಿರ್ವಹಿಸಿ, ವಂದನಾರ್ಪಣೆ ಸಲ್ಲಿಸಿದರು. 

ಹರಿದಾಸರು ಕಂಡ ಮಂತ್ರಾಲಯ ಗುರುಗಳ ಹಾಡುಗಳ ಸ್ಪರ್ಧೆ ಯಲ್ಲಿ ಬೈಲಹೊಂಗಲದ ಶ್ರೀವೇಣು ಮಾಧವ ಭಜನಾ ಮಂಡಳಿಯವರು ಪ್ರಥಮ ಸ್ಥಾನ ಪಡೆದು 'ಸತ್ಯಪ್ರಮೋದ ಹರಿದಾಸ ಸಾಹಿತ್ಯ ಪ್ರಶಸ್ತಿ-2020' ತಮ್ಮದಾಗಿಸಿಕೊಂಡರು. 

ದ್ವಿತೀಯ ಬಹುಮಾನವನ್ನು ಧಾರವಾಡ ಯಾಲಕ್ಕಿ ಶೆಟ್ಟರ ಕಾಲನಿಯ ಹಯವದನ ಭಜನಾಮಂಡಳಿ ಹಾಗೂ ತೃತೀಯ ಬಹುಮಾನವನ್ನು ನವನಗರದ ಆರಾಧನಾ ಭಜನಾ ಮಂಡಳಿಯವರು ಪಡೆದುಕೊಂಡರು. 

ಸಮಾಧಾನಕರ ಬಹುಮಾನವನ್ನು ಹುಬ್ಬಳ್ಳಿ ಘಂಟಿಕೇರಿಯ ಗೌರಿ ಭಜನಾ ಮಂಡಳಿ, ಧಾರವಾಡ ವಿದ್ಯಾಗಿರಿಯ ದಾನೇಶ್ವರಿ ಭಜನಾ ಮಂಡಳಿ ಹಾಗೂ ಮಾಳಮಡ್ಡಿಯ ರುಕ್ಮಿಣಿ ಭಜನಾ ಮಂಡಳಿಯವರು ಪಡೆದರು. 

ಕಾರ್ಯಕಾರಿ ಸಮಿತಿ ಸದಸ್ಯ ಶಾಂತೇಶ ಗಾಮನಗಟ್ಟಿ ಹಾಗೂ ಸಾಹಿತಿ ಶ್ರೀನಿವಾಸ ವಾಡಪ್ಪಿ, ಡಾ. ಸತ್ಯಬೋಧ ಗುತ್ತಲ, ಡಾ. ಎಚ್,ಎ, ಕಟ್ಟಿ, ಡಾ. ಎಮ್.ಡಿ. ಧುಮ್ಮವಾಡ, ಶ್ರೀನಿವಾಸ ಪರಾಂಡೆ, ಶಿವಪುತ್ರ ರಾಚಯ್ಯನವರ, ಪಿ.ಬಿ. ಗುತ್ತಲ, ಧುಮ್ಮವಾಡ, ಪ್ರೊ. ಡಿ.ಕೆ. ಕುಲಕಣರ್ಿ, ಡಾ. ಕೆ.ಎ. ಕುಲಕರ್ಣಿ , ವೆಂಕಟೇಶ ದೇಸಾಯಿ, ಭರತ ಜಾಧವ, ಪಿ.ಜಿ. ಕೊರ್ತಿ , ಪ್ರೇಮಾನಂದ ಹುಲಕೊಪ್ಪ ಸೇರಿದಂತೆ, ಗುತ್ತಲ ಪರಿವಾರದವರು ಹಾಗೂ ಮಹಿಳಾ/ಭಜನಾ ಮಂಡಳದವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.