ಲೋಕದರ್ಶನ ವರದಿ
ರಾಣೇಬೆನ್ನೂರು: ತಾಲೂಕಿನ ಕರೂರು ಗ್ರಾಮದಲ್ಲಿ ದಸರಾ-ವಿಜಯದಶಮಿ ಅಂಗವಾಗಿ ದಸರಾ ಉತ್ಸವ ಸಮಿತಿ, ಅಜ್ಜಯ್ಯನ ದೇವಸ್ಥಾನ ಸಮಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಗ್ರಾಮ ಪಂಚಾಯ್ತಿ ಸಹಯೋಗದಲ್ಲಿ ಬಹು ವಿಜೃಂಭಣೆಯಿಂದ ಜರುಗಿತು.
ದಸರಾ ಉತ್ಸವ ಮೆರವಣಿಗೆಗೆ ಗ್ರಾಮ ಪಂಚಾಯ್ತಿ ಅಧ್ಯಕ್ಷ ಚೋಳಪ್ಪ ಕಚ್ಚರಬಿ ಚಾಲನೆ ನೀಡಿ ಮಾತನಾಡಿ, ಮೈಸೂರು ಮಹಾರಾಜರ ಕಾಲದಿಂದಲೂ ದಸರಾ ಉತ್ಸವ ಆಚರಿಸುವ ಸಂಪ್ರದಾಯ ಇಲ್ಲಿ ಮುಂದುವರೆದಿದೆ. ಹಲವು ವಿಶೇಷತೆಗಳ ಮೂಲಕ ಗ್ರಾಮಸ್ಥರೆಲ್ಲಾ ಕೂಡಿ, ಎಲ್ಲರ ಮನೆ ಮನಗಳಲ್ಲಿ ದಸರಾ ಸಡಗರ ನೆಲೆಸಿರುತ್ತದೆ. ಹಬ್ಬದ ಸೊಬಗನ್ನು ಸವಿಯಲು ಸುತ್ತಮುತ್ತಲ ಊರುಗಳಿಂದ ಸಾವಿರಾರು ಭಕ್ತರು ಆಗಮಿಸುತ್ತಾರೆ ಎಂದರು.
ಭಕ್ತರ ಸಮ್ಮುಖದಲ್ಲಿ ಗ್ರಾಮದ ಮೈಲಾರಲಿಂಗೇಶ್ವರ ಸ್ವಾಮಿ, ಬೀರೇಶ್ವರ, ಗಂಗೆ ಮಾಳಮ್ಮ, ಆಂಜನೇಯಸ್ವಾಮಿ, ದುಗರ್ಾದೇವಿ, ಸತ್ಯ ಶಿವಾನಂದ ದೇವರುಗಳ ಪಲ್ಲಕ್ಕಿ ಉತ್ಸವ ತುಳಜಾ ಭವಾನಿ ದೇವಸ್ಥಾನದಿಂದ ಪ್ರಾರಂಭಗೊಂಡು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಗ್ರಾಮದ ಬಸವೇಶ್ವರ ವೃತ್ತದಲ್ಲಿ ದೇವರುಗಳ ಸಮಾಗಮ ನಡೆಯಿತು.
ಇದೇ ವೇಳೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಚಿತ್ರದುರ್ಗದ ಗೊರವರ ತಂಡ, ಕಂಸಾಳೆ, ಕುದುರೆ ಕುಣಿತ, ಡೊಳ್ಳು, ಹಲಗೆಮೇಳ ಭಾಗವಹಿಸಿದ್ದವು. ಆಂಜನೇಯನ ವೇಷ ಧರಿಸಿದ್ದ ಷಣ್ಮುಖಾಚಾರಿ ಉತ್ಸವಕ್ಕೆ ಮೆರಗು ತಂದರೆ, ಗೊರವಪ್ಪ ದ್ಯಾವಪ್ಪ ಸಣ್ಣಮನಿ, ಪರಸಪ್ಪ ಮಣಕೂರ ಅವರು ಗಂಟಲಿಗೆ ದಾರ ಪೋಣಿಸುವುದು, ಚಾವಟಿ ಬೀಸುವುದು, ತ್ರಿಶೂಲ ಕಡ್ಡಿಗಳನ್ನು ಬಾಯಿ, ನಾಲಿಗೆ, ಗಂಟಲುಗಳಲ್ಲಿ ಸಿಕ್ಕಿಸಿಕೊಂಡು ನೆರೆದಿದ್ದ ಭಕ್ತರ ಚಿತ್ತವನ್ನು ತಮ್ಮೆಡೆಗೆ ಸೆಳೆದರು.
ಬಳಿಕ ಭಕ್ತರು ಪಲ್ಲಕ್ಕಿ ಹೊತ್ತು ಸಂತೆ ಮೈದಾನದ ಬಳಿ ಇರುವ ಬನ್ನಿ ಮಂಟಪಕ್ಕೆ ತೆರಳಿ ಪರಸ್ಪರ ಬನ್ನಿ ವಿನಿಮಯ ಮಾಡಿಕೊಂಡರು. ತಮ್ಮ ಜಮೀನಿಗೆ ತೆರಳಿ ಸೊಪ್ಪೆ ದಂಟುಗಳನ್ನು ಹಿಡಿದು ಮನೆ ಸೇರಿದರು. ತಾಲ್ಲೂಕು ಪಂಚಾಯ್ತಿ ಸದಸ್ಯ ರಾಮಪ್ಪ ಬೆನ್ನೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಉತ್ಸವದಲ್ಲಿ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷೆ ಸುಮಾ ಬಕ್ಕಜ್ಜಿ, ಸದಸ್ಯ ಹೊನ್ನಪ್ಪ ಮುಡದ್ಯಾವಣ್ಣನವರ, ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಬಸವರಾಜ ಶಾಸ್ತ್ರಿ, ಕೃಷ್ಣಮೂತರ್ಿ ನಾಡಿಗೇರ, ಸೋಮಶೇಖರ ಹುಲಿ, ರಮೇಶ ಪವಾರ, ಜನಾರ್ಧನ ಕಡೂರ, ಹನುಮಂತ ಶೆಟ್ಟರ ಆರ್.ಎಸ್, ಸುಭಾಸ್ ಸುವರ್ೆ, ಮಂಜುನಾಥ ಕನ್ನಗೌಡ್ರ ಮತ್ತಿತರರು ಇದ್ದರು.