ಲೋಕದರ್ಶನ ವರದಿ
ಬೆಳಗಾವಿ 03: ಭಕ್ತಿ ಮಾರ್ಗವನ್ನು ಅಸ್ತ್ರವನ್ನಾಗಿ ಮಾಡಿಕೊಂಡು ಇಸ್ಲಾಮ ಧರ್ಮಕ್ಕೆ ಮತಾಂತರಗೊಳಿಸುವ ವಾತಾವರಣವಂದು ನಿಮರ್ಾಣವಾಗಿತ್ತು. ನಮ್ಮ ಸಮಾಜದ ಕೆಳವರ್ಗದ ಜನ ಇಸ್ಲಾಂ ಧಮರ್ಾಕ್ಕೆ ಮತಾಂತರಗೊಳ್ಳಲಾರಂಭಿಸಿದಿರು. ಈ ಸಂದರ್ಭದಲ್ಲಿ ದಾಸರು, ಶರಣರು ನಮ್ಮ ಧರ್ಮ, ಸಂಸ್ಕಾರ, ಸಂಸ್ಕೃತಿಗಳ ಕುರಿತು ಜ್ಞಾನವನ್ನು ನೀಡುವುದರ ಮೂಲಕ ಮತಾಂತರವನ್ನು ತಡೆದರು ಈ ಕುರಿತಂತೆ ಡಾ. ಯಾಕೊಳ್ಳಿಯವರು ಸಂಶೋಧನೆ ಮಾಡಲಿ ಎಂದು ಹಿರಿಯ ಲೇಖಕ, ಚಿತ್ರಕಲಾವಿದ ಚಂದ್ರಕಾಂತ ಕುಸನೂರ ಇಂದಿಲ್ಲಿ ಹೇಳಿದರು.
ನಗರದ ಸಾಹಿತ್ಯ ಭವನದಲ್ಲಿ ದಿ. 2 ರಂದು ಬೆಳಗಾವಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಹಾಗೂ ಸವದತ್ತಿ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಡಾ. ವಾಯ್. ಎಂ. ಯಾಕೊಳ್ಳಿಯವರ ಮೂರು ಕೃತಿಗಳ ಬಿಡುಗಡೆ ಸಮಾಂಭದ ಅಧ್ಯಕ್ಷ ಸ್ಥಾನ ವಹಿಸಿದ್ದ ಕುಸನೂರ ಮೇಲಿನಂತೆ ಅಭಿಪ್ರಾಯ ಪಟ್ಟರು.
ಡಾ. ಯಾಕೊಳ್ಳಿಯವರ ಮೂರು ಕೃತಿಗಳನ್ನು ಬಿಡುಗಡೆಗೊಳಿಸಿದ ಡಾ. ಬಸವರಾಜ ಜಗಜಂಪಿಯವರು ಮಾತನಾಡುತ್ತ ಆರೋಗ್ಯಕರ ವಿಮಶರ್ೆಯಾಗಬೇಕು ಇಂದು ಪೂವರ್ಾಗ್ರಹ ಪೀಡಿತ ವಿಮಶರ್ೆಯಿಂದು ಕಂಡು ಬರುತ್ತಿದ್ದು ಬರವಣಿಗೆಗೆ ಗುಂಡುಗಳಿಂದ ಉತ್ತರ ನೀಡುವ ವಾತಾವರಣ ನಿಮರ್ಾಣವಾದುದು ಖೇದದ ಸಂಗತಿ ಎಂದ ಅವರು ಡಾ. ಯಾಕೊಳ್ಳಿಯವರು ಹಲವಾರು ಲೇಖಕಕರ ಕೃತಿಗಳನ್ನು ವಿಮಶರ್ೆ ಮಾಡಿದ್ದಾರೆ. ಅವರಿಲ್ಲಿ ಸರಿಯಾದ ಮಾರ್ಗದರ್ಶನ ನೀಡಿ ಬೆನ್ನು ಚೆಪ್ಪರಿಸುವ ಕಾರ್ಯ ಮಾಡಿದ್ದಾರೆ ಎಂದು ಹೇಳಿದರು.
ಡಾ. ಎಚ್, ಬಿ. ಕೋಲಕಾರ 'ಕಾವ್ಯ ಸಂಗಾತಿ' ಪ್ರೊ. ವಿ.ಬಿ. ಹಿರೇಮಠ 'ಕನಕ ಸ್ಮೃತಿ' ಹಾಗೂ ಸುರೆಶ ಹೆಗಡೆ 'ನಾದದ ನದಿಯೊಂದು ಹರಿದಾಂಗ' ಕೃತಿಗಳ ಪರಿಚಯ ಮಾಡತ್ತ ದೇಸಿ ಭಾಷೆ, ನವಿರಾದ ಭಾವ ರೂಪಕಗಳಿಂದ ನಾದದ ನದಿ ಹರಿದಿದೆ. ಕನಕ ಸ್ಮೃತಿ ತ್ಯಾಗ ವೈರಾಗ್ಯ, ಶೃಂಗಾರ, ಕಷ್ಟ ಹೀಗೆ ಹೀಗೆ ಕನಕ ಎಲ್ಲ ಮಗ್ಗಲುಗಳನ್ನು ತೆರೆದಿಟ್ಟಿದೆ. ಕಾವ್ಯ ಸಂಗಾತಿ ಕಾವ್ಯ ಪರಂಪರೆಯನ್ನು ಹೇಳುತ್ತ ಹೊಸ ಕಣ್ಣು ತೆರೆದಿಡುವಂತಹ ಕೃತಿಯಿದಾಗಿದೆ ಹೀಗೆ ಕೃತಿಗಳನ್ನು ಓದುಗರಿಗೆ ಪರಿಚಯಿಸಿದರು.
ಲೇಖಕ ಡಾ. ವಾಯ್. ಎಂ. ಯಾಕೊಳ್ಳಿಯವರು ತಮ್ಮ ಗುರುಗಳಾದ ಎಂ. ಎಂ. ಕಲಬುಗರ್ಿಯವರನ್ನು ನೆನಪಿಸಿಕೊಂಡು. ಸಾಹಿತ್ಯ ರಚನೆಗೆ ಹಿನ್ನಲೆಗೆಯಾಗಿ ನಿಂತ ಎಲ್ಲರನ್ನೂ ತಮ್ಮ ಮಾತುಗಳಲ್ಲಿ ನೆನಪಿಸಿಕೊಳ್ಳುತ್ತ ಕೃತಜ್ಞತೆ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಕೃತಿಕಾರ ಡಾ. ವಾಯ್. ಎಂ. ಯಾಕೊಳ್ಳಿ ಅವರನ್ನು ಚುಸಾಪ ಜಿಲ್ಲಾ ಘಟಕ, ಬೇರೆ ಬೇರೆ ಸಂಘಟನೆಗಳು ಹಾಗೂ ಅಭಿಮಾನಿ ಬಳಗ ಶಾಲು ಹೊದಸಿ ಸನ್ಮಾನಿಸಿ ಗೌರವಿಸಿದರು.
ಮಾಧುರಿ ಜೋಶಿ ಹಾಗೂ ಸಂಗಡಿಗರ ಪ್ರಾರ್ಥನಾಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಕಸಾಪ ಸವದತ್ತಿ ತಾಲೂಕಾಧ್ಯಕ್ಷರಾದ ಸಿ. ಬಿ. ದೊಡಗೌಡರ ಉಪಸ್ಥಿತರಿದ್ದರು. ಗುಂಡೇನಟ್ಟಿ ಮಧುಕರ ಪ್ರಾಸ್ತವಿಕ ನುಡಿಗಳನ್ನಾಡಿದರು. ಅಶೋಕ ಮಳಗಲಿ ನಿರೂಪಿಸಿದರು. ಚುಸಾಪ ತಾಲೂಕಾಧ್ಯಕ್ಷರಾದ ಜಿ. ವಾಯ್. ಕರಮಲ್ಲಪ್ಪಗೌಡರ ವಂದಿಸಿದರು.
ಎ.ಎಸ್. ಹೊಸಟ್ಟಿ, ಆರ್.ಪಿ. ಕೌಜಲಗಿ, ಬಸವರಾಜ ಯರಗಣವಿ, ಆರ್. ಎಂ. ಮೋಟೆ, ಜಯಪ್ರಕಾಶ ಅಬ್ಬಿಗೇರಿ, ಜಯಶ್ರೀ ಅಭ್ಬಿಗೇರಿ, ಪ್ರೊ.. ಎಂ. ಎಸ್. ಇಂಚಲ, ವಾಯ್.ಆರ್. ಪಾಟೀಲ, ಶ್ರೀರಂಗ ಜೋಶಿ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು